ಕಿನ್ನಿಗೋಳಿ: ಮಾವು, ಹಲಸು ಮೇಳಕ್ಕೆ ಚಾಲನೆ

| Published : Jul 10 2024, 12:40 AM IST

ಕಿನ್ನಿಗೋಳಿ: ಮಾವು, ಹಲಸು ಮೇಳಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಟ್ಟು 40 ಸ್ಟಾಲ್‌ಗಳಿದ್ದು ಅಚ್ಚುಕಟ್ಟಾಗಿ ಸಂಯೋಜನೆಗೊಂಡ ಹಲಸು ಮಾವು ಮೇಳದಲ್ಲಿ ಹಲಸು, ಮಾವಿಗೆ, ಹಪ್ಪಳ, ಸಂಡಿಗೆ, ಹಲಸು ಗಿಡಗಳಿಗೆ ತಂಬಾ ಬೇಡಿಕೆ ಕಂಡು ಬಂದಿತ್ತು.

ಕನ್ನಡಪ್ರಭವಾರ್ತೆ ಮೂಲ್ಕಿ

ವಿವಿಧ ಸಂಘಟಕರ ಸಹಕಾರದಲ್ಲಿ ಕಿನ್ನಿಗೋಳಿಯ ರಾಜರತ್ನಪುರದ ಸರಾಫ್ ಅಣ್ಣಾಯ್ಯಾಚಾರ್ಯ ಸಭಾ ಭವನದಲ್ಲಿ ಭಾನುವಾರ ಜರುಗಿದ ಮೂಲ್ಕಿ ತಾಲೂಕಿನಲ್ಲಿ ಎರಡನೇ ಬಾರಿಗೆ ಮಾವು ಹಲಸು ಮೇಳ ಸಾವಯವ ಉತ್ಪನ್ನಗಳ ಮಾರಾಟ ಮೇಳಕ್ಕೆ ಕಾಷ್ಟ ಶಿಲ್ಪಿಮಾಧವ ಆಚಾರ್ಯ ಬಲವಿನಗುಡ್ಡೆ ಹಾಗೂ ಅನಂತ ಪ್ರಕಾಶದ ಸಚ್ಚಿದಾನಂದ ಉಡುಪ ಹಲಸು ಮಾರಾಟ ಮಾಡುವ ಮೂಲಕವಾಗಿ ಚಾಲನೆ ನೀಡಿದರು.

ಮೂಲ್ಕಿ ತಾಲೂಕು ಕೃಷಿ ಸಂಘದ ಅಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ಸರಾಪ್ ಅಣ್ಯಯ್ಯ ಆಚಾರ್ಯ ಸಭಾ ಭವನ ಸಮಿತಿಯ ಪೃಥ್ವಿರಾಜ್ ಆಚಾರ್ಯ, ಮಂಗಳೂರು ಸಾವಯವ ಕೃಷಿಯ ರತ್ನಾಕರ್, ಸಜ್ಜನ ಬಂಧುಗಳ ಸಂಘಟನೆಯ ದಾಮೋದರ ಶೆಟ್ಟಿ, ಪ್ರಕಾಶ್ ಆಚಾರ್ಯ ವಿಶ್ವಬ್ರಾಹ್ಮಣ ಸಂಘದ ಯೋಗೀಶ್ ಆಚಾರ್ಯ, ಮಹಿಳಾ ಶಶಿಕಲಾ ಯೋಗೀಶ್, ಯೋಗೀಶ್ ಆಚಾರ್ಯ ಮಿತ್ತಬೈಲ, ದಿನೇಶ್ ಆಚಾರ್ಯ, ಅಂಚೆ ಇಲಾಖೆಯ ರಾಮ ಚಂದ್ರ ಕಾಮತ್, ಧನಂಜಯ ಐಗಳ್, ಪ್ರಭಾಕರ ಆಚಾರ್ಯ, ಶಶಿಕಲಾ ಆಚಾರ್ಯ, ಅನಿತಾ ಪೃಥ್ವಿರಾಜ ಆಚಾರ್ಯ, ಸುಧಾಕರ ಆಚಾರ್ಯ, ಜಗದೀಶ ಆಚಾರ್ಯ ಸುರಗಿರಿ, ಸ್ವಸ್ತಿಕ್ ಆಚಾರ್ಯ, ಪ್ರಕಾಶ್ ಆಚಾರ್, ರಂಜನ್ ಕುಮಾರ್, ರತ್ನಪ್ರಬಾಕರ ಆಚಾರ್ಯ, ಸಂಘಟಕ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಿಥುನ್ ಕೊಡೆತ್ತೂರು, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ, ವೀಣಾ ಹರೀಶ್ , ಹರೀಶ್ ಕೋಟ್ಯಾನ್ ಮತ್ತಿತತರು ಇದ್ದರು.

ಒಟ್ಟು 40 ಸ್ಟಾಲ್‌ಗಳಿದ್ದು ಅಚ್ಚುಕಟ್ಟಾಗಿ ಸಂಯೋಜನೆಗೊಂಡ ಹಲಸು ಮಾವು ಮೇಳದಲ್ಲಿ ಹಲಸು, ಮಾವಿಗೆ, ಹಪ್ಪಳ, ಸಂಡಿಗೆ, ಹಲಸು ಗಿಡಗಳಿಗೆ ತಂಬಾ ಬೇಡಿಕೆ ಕಂಡು ಬಂದಿತ್ತು. ವಿವಿಧ ಬಗೆಯ ಹಲಸು, ಮಾವು ಪ್ರದರ್ಶನ, ಮಾರಾಟ, ಹಲಸು, ಮಾವು ಹೋಳಿಗೆ, ಐಸ್ ಕ್ರೀಂ, ಇತ್ಯಾದಿ ಖಾದ್ಯಗಳು, ಗಿಡಗಳ ಮಾರಾಟ, ದೇಶೀ ತರಕಾರಿ ಬೀಜಗಳ ಮಾರಾಟ, ಸಾವಯವ ಉತ್ಪನ್ನಗಳ ಮಾರಾಟ ನಡೆಯಿತು.

ಬಿಜಾಪುರ, ದೊಡ್ಡಬಳ್ಳಾಪುರದಿಂದ ಕೃಷಿಕರು ಬಂದಿದ್ದರು. ತರಕಾರಿ ಬೀಜಗಳು ಹೆಚ್ಚು ಮಾರಾಟವಾಗಿದೆ. ಸ್ಟಾಲಿನಲ್ಲಿ ತಂದ ಒಂದು ಲೋಡ್ ಮಾವು ಎಲ್ಲ ಖಾಲಿ ಖಾಲಿಯಾಗಿದ್ದು ಹಲಸು ಹೋಳಿಗೆ, ಬೋಂಡಾಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂತು.ಬಾಯಲ್ಲಿ ನೀರೂರಿಸಿದ ವಿವಿಧ ತಿಂಡಿಗಳುಹಲಸಿನ ಗಾರಿಗೆ, ಪೋಡಿ, ಮಿಲ್ಕ್ ಶೇಕ್, ಬಿಸಿ ಬಿಸಿ ಹೋಳಿಗೆ, ಹಲಸಿನ ಐಸ್ ಕ್ರೀಂ ಹೀಗೆ ಹಲಸಿನ ಖಾದ್ಯ ಕಿನ್ನಿಗೋಳಿ ಮಾವು ಹಲಸು ಮೇಳದಲ್ಲಿ ಗ್ರಾಹಕರ ಬಾಯಲ್ಲಿ ನೀರೂರಿಸಿತು.ಹಲಸಿನ ಹಣ್ಣಿನ ಹಪ್ಪಳ, ಹಲಸಿನ ಕಾಯಿ ಹಪ್ಪಳ, ಸೋಂಟೆ, ಕರಿದ ತಿನಿಸುಗಳ ಮಳಿಗೆಗಳೂ ತಿಂಡಿಪ್ರಿಯರನ್ನು ಆಕರ್ಷಿಸಿತು. ಮಿಜಾರಿನ ಆಶಾ ಲಾಸ್ರಡೇ ದಂಪತಿ, ತಾವೇ ಸ್ವತಃ ಬೆಳೆದು ತಂದ ಡ್ರ್ಯಾಗನ್ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದರೆ, ಕಿನ್ನಿಗೋಳಿಯ ಪ್ರಜ್ವಲ್ ತಾನೇ ಪೆಟ್ಟಿಗೆ ಇಟ್ಟು ಸಂಗ್ರಹಿಸಿದ ಜೇನುತುಪ್ಪವನ್ನು ಮಾರಾಟ ಮಾಡಿದರು.ತರಕಾರಿ ಬೀಜ, ಸಸಿಗಳು, ಹೂವಿನ ಹಣ್ಣಿನ ಗಿಡಗಳನ್ನು ಜನ ಕೊಳ್ಳುತ್ತಿದ್ದುದು ಕಂಡು ಬಂತು. ಹಲಸಿನ ವೈವಿಧ್ಯದ ನಾನಾ ಗಿಡಗಳ ಮಾರಾಟ ಜೊತೆಗೆ ದೊಡ್ಡಬಳ್ಳಾಪುರದಿಂದ ತರಲಾದ ಹಲಸಿನ ಹಣ್ಣಿನ ಮಾರಾಟವೂ ಜೋರಾಗಿತ್ತು. ತಂಬುಳಿ ಹುಡಿ, ಮಸಾಲಾ ಹುಡಿಗಳ ಸಾವಯವ ಉತ್ಪನ್ನಗಳ ಮಾರಾಟವನ್ನೂ ಮೇಳದಲ್ಲಿ ಆಯೋಜಿಸಲಾಗಿತ್ತು.