ಮಾಣಿ: ಅಂತಾರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ ಚಾಲನೆ

| Published : Apr 28 2025, 11:51 PM IST

ಸಾರಾಂಶ

ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ನ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಅಸೋಸಿಯೇಷನ್, ದಕ್ಷಿಣ ಕನ್ನಡ ಡಾಡ್ಜ್‌ಬಾಲ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ನಡೆದ ಅಂತರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ ಗೆ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲೇಟ್ ಉದಯ್ ಚೌಟ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ನ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಅಸೋಸಿಯೇಷನ್, ದಕ್ಷಿಣ ಕನ್ನಡ ಡಾಡ್ಜ್‌ಬಾಲ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ನಡೆದ ಅಂತರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ ಗೆ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲೇಟ್ ಉದಯ್ ಚೌಟ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಚಾಲನೆ ದೊರೆಯಿತು.

ಕಾಮನ್‌ ವೆಲ್ತ್‌ ಕ್ರೀಡಾಪಟು ಪುಷ್ಪರಾಜ್‌ ಹೆಗ್ಡೆ ದೀಪಬೆಳಗಿಸಿ ಅಂತರಾಷ್ಟ್ರೀಯ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತದಲ್ಲಿ ಮೊದಲಬಾರಿಗೆ ಅಂತಾರಾಷ್ಟ್ರೀಯ ಡಾಡ್ಜ್‌ ಬಾಲ್‌ ಪಂದ್ಯಾಟವನ್ನು ಆಯೋಜಿಸಿದ ಬಾಲವಿಕಾಸ ವಿದ್ಯಾ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಬಾಲವಿಕಾಸ ಆಂಗ್ಲ ಮಾಧ್ಯಮಶಾಲೆಯ ಸಂಚಾಲಕ ಪ್ರಹ್ಲಾದ್‌ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಮಾತನಾಡಿದರು. ಚಾಂಪಿಯನ್‌ ಶಿಪ್‌ ಆಯೋಜಕರಾದ ವಿಜೇತ್‌ ಕುಮಾರ್‌, ಸಚಿನ್‌ ಎ.ಎಸ್‌, ಬಾಲವಿಕಾಸ ಟ್ರಸ್ಟ್‌ ಕಾರ್ಯದರ್ಶಿ ಮಹೇಶ್‌ ಶೆಟ್ಟಿ , ದ.ಕ.ಜಿಲ್ಲಾ ಡಾಡ್ಜ್‌ ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ವಿದ್ಯಾಧರ್‌ ಜೈನ್‌, ಮಾಣಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಸುದೀಪ್‌ ಕುಮಾರ್‌ ಶೆಟ್ಟಿ, ಪೆರಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಕುಶಲ ಎಂ.ಪೆರಾಜೆ, ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ನ‌ ದಸತರಣ್ ವಿ ಸುಬ್ರಹ್ಮಣ್ಯಂ ಮಲೇಶಿಯಾ, ಡಾ.ರಬಿ ಪುತ್ರನ್‌, ನರಸಿಂಹ ರೆಡ್ಡಿ, ನಾಗರಾಜ್‌, ವಿ.ಪಿ.ಪವಿತ್ರನ್‌ ಕೇರಳ , ಏಕ್‌ ನಾಥ್‌ ಸಾಲುಂಕೆ ಮಹರಾಷ್ಟ್ರ, ನಸೀಬ್‌ ಹರಿಯಾಣ, ಪಶಮ್‌ ಶ್ರೀನಿವಾಸ್‌ ತೆಲಂಗಾಣ, ಪಲಕ್‌ ಸೊಂದರ್ವ ಗುಜರಾತ್‌, ತಾಕೂರ್‌ ಮೋಹಿತ್‌ ಉತ್ತರ ಪ್ರದೇಶ್‌, ಕಿಚ್ನಾನೆ ಪಾಂಡಿಚೇರಿ, ಪ್ರಕಾಶ್‌ ತಮಿಳ್‌ ನಾಡು, ನಿಹಾಲ್‌ ಜಮ್ಮುಕಾಶ್ಮೀರ್‌, ದುಶ್ಯಂತ್‌ ಸಿಂಗ್‌ ರಾಣಾ ಉತ್ತರ ಖಾಂಡ್‌, ಸಂತೋಶ್‌ ಕುಮಾರ್‌, ಪೂಜಾ ಕಶ್ಯಪ್‌, ಸಂಜಯ್‌ , ಮಧ್ಯ ಪ್ರದೇಶ್‌, ಪ್ರಹ್ಲಾದ್‌ ಯಾದವ್‌ ರಾಜಸ್ಥಾನ್‌, ದಿಲ್‌ ಕುಶ್‌ ಬಿಹಾರ್‌, ಗಗನ್‌ ಸಿಂಗ್‌ ಛತ್ತೀಸ್‌ ಗಡ್‌, ಚಿನ್ಮಯ್‌ ಒಡಿಶಾ. ಸಂಧ್ಯಾ ಗೋವಾ, ಪರ್ತ್‌ ಜಾನಿ ಡಮನ್‌, ಸ್ಥಳೀಯ ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ನಿರಂಜನ್‌ ರೈ, ಇಬ್ರಾಹಿಂ ಮಾಣಿ ಮೊದಲಾದವರು ಇದ್ದರು.

ಅಂತಾರಾಷ್ಟ್ರೀಯ ಡಾಡ್ಜ್‌ ಬಾಲ್‌ ಚಾಂಪಿಯನ್‌ ಶಿಪ್‌ ಅನ್ನು ಮಾಣಿ ಬಾಲವಿಕಾಸ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲು ಕಾರಣಕರ್ತರಾದ ಸಂಘಟನಾ ಕಾರ್ಯದರ್ಶಿ ವಿಜೇತ್‌ ಕುಮಾರ್‌ ಅವರನ್ನು ಬಾಲವಿಕಾಸ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ. ಸನ್ಮಾನಪತ್ರ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ವಿಜೇತ್‌ ಕುಮಾರ್‌ ಸ್ವಾಗತಿಸಿದರು. ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ನರಸಿಂಹ ರೆಡ್ಡಿ ವಂದಿಸಿದರು. ಶಿಕ್ಷಕಿಯರಾದ ರಶ್ಮಿ ಕೆ. ಫರ್ನಾಂಡೀಸ್‌ , ಶೋಭಾ ಎಂ.ಶೆಟ್ಟಿ ನಿರ್ವಹಿಸಿದರು........................ಅಂತರಾಷ್ಟ್ರೀಯ ಡಾಡ್ಜ್‌ ಬಾಲ್‌ ಚಾಂಪಿಯನ್‌ ಶಿಪ್‌ ಗೆ ಆಗಮಿಸಿದ ನೇಪಾಳ, ಮಲೇಶಿಯಾ, ಹಾಗೂ ಭಾರತ ತಂಡದ ಆಟಗಾರರನ್ನು ತುಳುನಾಡಿನ ಸಂಪ್ರದಾಯದಂತೆ ಸಂಸದ ಬ್ರಿಜೇಶ್ ಚೌಟ ತಾಂಬೂಲ ನೀಡಿ ಸ್ವಾಗತಿಸಿದರು, ವಿವಿಧ ಅತಿಥಿ ಗಣ್ಯರ ಸಮ್ಮುಖದಲ್ಲಿ ಚೆಂಡೆ, ಕೊಂಬು ವಾದನದೊಂದಿಗೆ ಕ್ರೀಡಾಂಗಣಕ್ಕೆ ಆಟಗಾರರನ್ನು ಬರಮಾಡಿಕೊಳ್ಳಲಾಯಿತು. ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿ ಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಮೊದಲಾದವರು ಆಗಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು.‌