ಮ.ನಿ.ಪ್ರ ಶ್ರೀ ಆಶೀರ್ವಾದ ಪಡೆದ ಅಭಾವೀ ನೂತನ ಅಧ್ಯಕ್ಷ ಮಣಿಕೆರೆ

| Published : Jul 10 2024, 12:32 AM IST

ಮ.ನಿ.ಪ್ರ ಶ್ರೀ ಆಶೀರ್ವಾದ ಪಡೆದ ಅಭಾವೀ ನೂತನ ಅಧ್ಯಕ್ಷ ಮಣಿಕೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಅಭಾವೀ ಮಹಾಸಭಾ ಹೊಸನಗರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಎಂ.ಎಸ್.ಉಮೇಶ ಮಾಣಿಕೆರೆ ಆಯ್ಕೆಯಾಗಿದ್ದು, ಅವರನ್ನು ಸದಾನಂದ ಶಿವಯೋಗಾಶ್ರಮ ಮೂಲೆಗದ್ದ ಮಠದ ಮ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮಿಜಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಹೊಸನಗರದ ಬ್ರಹ್ಮೇಶ್ವರ ಶ್ರೀವೀರಭದ್ರೇಶ್ವರ ದೇವಸ್ಥಾನ ಸಭಾಭವನದಲ್ಲಿ ನಡೆದ ತಾಲೂಕು ಅಖಿಲ ಭಾರತ ವೀರಶೈವ ಸಮಾಜದ ಮುಂದಿನ ಮೂರು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಎಂ.ಎಸ್.ಉಮೇಶ ಮಾಣಿಕೆರೆ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇಂದು ಮಠಕ್ಕೆ ಭೇಟಿ ನೀಡಿ ಶ್ರೀ ಮ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮೀಜಿ ಆಶೀರ್ವಾದ ಪಡೆದರು.

ನಂತರ ಶ್ರೀಗಳು ನೂತನ ಅಧ್ಯಕ್ಷ ಎಂ.ಎಸ್.ಉಮೇಶ್ ಮಣಿಕೆರೆರನ್ನು ಅಭಿನಂದಿಸಿ ಆಶೀರ್ವದಿಸಿ ಆಶೀರ್ವಚನ ನೀಡಿ ಲಿಂಗೈಕ್ಯ ಹಾನಗಲ್ಲು ಶ್ರೀಕುಮಾರ ಮಹಾಸ್ವಾಮೀಜಿ ಕನ್ನಡ ನಾಡು ಅಪೂರ್ವ ತ್ಯಾಗಯೋಗಿಗಳು ಅವರು ಕಳೆದ ನೂರು ವರ್ಷಗಳ ಹಿಂದೆಯೇ ಸಮಾಜವನ್ನು ಸಂಘಟಿಸುವ ಮೂಲಕ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಮಹಾನ್‍ ಚೇತನ ಆವರ ತತ್ವಾದರ್ಶಗಳು ಇಂದಿನ ಯುವಕರು ಮೈಗೊಡಿಸಿಕೊಂಡು ಹೊಸನಗರ ತಾಲೂಕು ಮಾದರಿಯನ್ನಾಗಿ ಮಾಡುವಂತಾಗಲಿ ಎಂದು ನೂತನ ಅಧ್ಯಕ್ಷರಿಗೆ ಹಿತವಚನ ನೀಡಿ ಅಶೀರ್ವದಿಸಿದರು.

ಈ ಸಂದರ್ಭದಲ್ಲಿ ರಿಪ್ಪನ್‍ಪೇಟೆ ಶ್ರೀಬಸವೆಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜಗೌಡ, ಎಂ.ಆರ್.ಶಾಂತವೀರಪ್ಪಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಜಯಶೀಳಗೌಡರು ಹರತಾಳು, ಬೆಳಂದೂರು ನಾಗಭೂಷಣಗೌಡರು, ಡಿ.ಈ.ಮಧುಸೂದನ್, ಕುಮಾರಗೌಡ ದೂನ, ಎಚ್.ಎಸ್.ರವಿಗೌಡರು ಹಾಲುಗುಡ್ಡೆ, ಅಖಿಲಭಾರತ ವೀರಶೈವ ತಾಲೂಕು ಸಮಿತಿ ನಿರ್ದೇಶಕ ಬಿ.ಎಲ್.ಲಿಂಗಪ್ಪ ಬೆನವಳ್ಳಿ, ನೆವಟೂರು ಈಶ್ವರಪ್ಪಗೌಡ, ಜೆ.ಜಿ.ಸದಾನಂದ ಜಂಬಳ್ಳಿ, ಕಮದೂರು ರಾಜಶೇಖರ ಮತ್ತಿತರರು ಇದ್ದರು.