ಅವಿರೋಧ ಆಯ್ಕೆಯಾಗಬೇಕಾಗಿದ್ದ ಎಸ್‌ಡಿಎಂಸಿಗೆ ಚುನಾವಣೆ ನಡೆಯುವ ಸನ್ನಿವೇಶ ಸೃಷ್ಟಿಯಾದದ್ದು ಬೇಸರದ ಸಂಗತಿ. ಸರ್ಕಾರಿ ಶಾಲೆಗೆ ಸಮಾಜ ಸೇವಕ ಅರವಿಂದ ರಾಘವನ್ ಅವರು 13 ಲಕ್ಷ ರು.ಗಳನ್ನು ನೀಡುವ ಮೂಲಕ ಶಾಲಾಭಿವೃದ್ಧಿಗೆ ಕೈಜೋಡಿಸಿದ್ದಾರೆ. ಇದೀಗ ಚುನಾಯಿತ ಸದಸ್ಯರ ತಂಡ ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಬೇಕಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಮಾಣಿಕ್ಯನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಜಲಬೋರೇಗೌಡ (ಗುಡ್ಡಪ್ಪ) ಚುನಾಯಿತರಾದರು.ಉಪಾಧ್ಯಕ್ಷರಾಗಿ ಅನಿತಾ, ಸದಸ್ಯರಾಗಿ ಧನಂಜಯ, ನವೀನ್ ಕುಮಾರ, ಕುಮಾರಸ್ವಾಮಿ, ಲೋಕೇಶ್, ಹನುಮಂತ, ಸ್ವಾಮಿಗೌಡ, ಸೋಮಶೇಖರ್, ದಿವಾಕರ್, ರಶ್ಮಿ, ಜಯಶೀಲ, ಪದ್ಮ, ಸುಶೀಲ, ರಂಜಿತ, ಸರಿತ, ಚೈತ್ರಾ, ಭವಾನಿ ಚುನಾಯಿತರಾದರು. ಸಮಿತಿ ಸದಸ್ಯ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕಿ ಕೆ.ಎಂ.ವಿನೋದ ಆಯ್ಕೆಯಾದರು.
ಎಲ್ಲಾ ಸದಸ್ಯರನ್ನು ಗ್ರಾಮಸ್ಥರು ಹಾಗೂ ಶಾಲೆ ಮಕ್ಕಳ ಮನೆ ಸಮಿತಿಯಿಂದ ಅಭಿನಂದಿಸಲಾಯಿತು. ಈ ವೇಳೆ ಸಿಹಿ ವಿತರಣೆ ಮಾಡಲಾಯಿತು.ಗ್ರಾಪಂಮಾಜಿ ಅಧ್ಯಕ್ಷ ಎಂ.ಎಸ್.ಕುಮಾರ್ ಮಾತನಾಡಿ, ಅವಿರೋಧ ಆಯ್ಕೆಯಾಗಬೇಕಾಗಿದ್ದ ಎಸ್‌ಡಿಎಂಸಿಗೆ ಚುನಾವಣೆ ನಡೆಯುವ ಸನ್ನಿವೇಶ ಸೃಷ್ಟಿಯಾದದ್ದು ಬೇಸರದ ಸಂಗತಿ. ಸರ್ಕಾರಿ ಶಾಲೆಗೆ ಸಮಾಜ ಸೇವಕ ಅರವಿಂದ ರಾಘವನ್ ಅವರು 13 ಲಕ್ಷ ರು.ಗಳನ್ನು ನೀಡುವ ಮೂಲಕ ಶಾಲಾಭಿವೃದ್ಧಿಗೆ ಕೈಜೋಡಿಸಿದ್ದಾರೆ. ಇದೀಗ ಚುನಾಯಿತ ಸದಸ್ಯರ ತಂಡ ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಬೇಕಿದೆ ಎಂದರು.
ಯಜಮಾನ್ ಚಂದ್ರಶೇಖರ್ ಮಾತನಾಡಿ, ಎಸ್ ಡಿಎಂಸಿಗೆ ಚುನಾಯಿತರಾದಎಲ್ಲಾ 18 ಸದಸ್ಯರು ಹಾಗೂ ಗ್ರಾಮದ ಯಜಮಾನರುಗಳು ಶಾಲೆಗೆ ಒಬ್ಬೊಬ್ಬ ಮಕ್ಕಳನ್ನು ದಾಖಲು ಮಾಡುವುದಾಗಿ ಶಪಥ ಮಾಡಬೇಕು ಎಂದರು. ಸದಸ್ಯರೆಲ್ಲರೂ ಮಕ್ಕಳನ್ನು ದಾಖಲು ಮಾಡಿದರೆ ಅವರನ್ನು ಸ್ವಾತಂತ್ರ್ಯ ದಿನಾಚರಣೆ ದಿನದಂದು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದರು.ಮುಖ್ಯ ಶಿಕ್ಷಕಿ ಕೆ.ಎಂ.ವಿನೋದ ಮಾತನಾಡಿ, ಶಿಕ್ಷಕರೊಂದಿಗೆ ಸಮುದಾಯ ಒಗ್ಗೂಡಿ ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಶಾಲೆ ಹಾಗೂ ಶಿಕ್ಷಕರ ಜತೆಗೆ ಸಮುದಾಯವು ಶಾಲಾಭಿವೃದ್ಧಿಗೆ ಮುಂದಾಗಲಿ ಎಂದರು.
ಈ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ನಟರಾಜು, ಮಕ್ಕಳ ಮನೆ ಸಮಿತಿ ಅಧ್ಯಕ್ಷ ಜವರೇಗೌಡ, ಸದಸ್ಯರಾದ ಎಂ.ಬಿ.ಕುಮಾರ, ಚೇತನ್, ಲೋಕೇಶ್, ಎಂ.ಪಿ.ಕುಮಾರ್, ಮುಖಂಡರಾದ ಆನಂದ್, ಮಹಾಂತೇಶ್, ನವೀನ್, ಮಹೇಶ್, ಮಂಜ ಸೇರಿದಂತೆ ಇತರರಿದ್ದರು.