ಮಣಿಪಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಬೈಕ್‌ಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದ ಕರ್ಕಶ ಸದ್ದು ಮಾಡುವ 129 ಸೈಲೆನ್ಸರ್‌ಗಳನ್ನು ಶನಿವಾರ ರೋಡ್‌ ರೋಲರ್‌ ಮೂಲಕ ಮರುಬಳಕೆಯಾಗದಂತೆ ನಾಶಪಡಿಸಲಾಯಿತು.

ಮಣಿಪಾಲ: ಮಣಿಪಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಬೈಕ್‌ಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದ ಕರ್ಕಶ ಸದ್ದು ಮಾಡುವ 129 ಸೈಲೆನ್ಸರ್‌ಗಳನ್ನು ಶನಿವಾರ ರೋಡ್‌ ರೋಲರ್‌ ಮೂಲಕ ಮರುಬಳಕೆಯಾಗದಂತೆ ನಾಶಪಡಿಸಲಾಯಿತು.

ಕಳೆದ 6 ತಿಂಗಳಿಂದ ಮಣಿಪಾಲ ಪೊಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಮಿತಿಗಿಂತ ಜೋರಾಗಿ ಶಬ್ದ ಮಾಡಿ ಚಲಾಯಿಸುತ್ತಿದ್ದ ಬೈಕುಗಳಲ್ಲಿ ಅಳವಡಿಸಲಾಗಿರುವ ಕರ್ಕಶ ಸೈಲೆನ್ಸರ್‌ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ಈ ವಿಶೇಷ ತಪಾಸಣೆಯಲ್ಲಿ ಒಟ್ಟು 120 ಡಿಫೆಕ್ಟಿವ್‌ ಸೈಲೆನ್ಸರ್‌ಗಳನ್ನು ಪತ್ತೆ ಮಾಡಿ, ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು 1,05,000 ರು. ದಂಡ ವಸೂಲಿ ಮಾಡಿದ್ದರು.

ಹೀಗೆ ವಶಪಡಿಸಿಕೊಳ್ಳಲಾದ 120 ಸೈಲೆನ್ಸರ್‌ಗಳನ್ನು ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ್ ಅವರ ಉಪಸ್ಥಿತಿಯಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಮುಂದಿನ ಹೆದ್ದಾರಿಯಲ್ಲಿ ರೋಡ್‌ ರೋಲರ್‌ ಹತ್ತಿಸಿ ನಾಶಪಡಿಸಲಾಯಿತು. ಮಣಿಪಾಲ ಪೊಲೀಸ್ ಇನ್‌ ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಹಾಜರಿದ್ದರು.