ಮಣಿಪಾಲ ಗಣೇಶೋತ್ಸವ: ಗಣೇಶ ಚಿತ್ರ ಬಿಡಿಸುವ ಸ್ಪರ್ಧೆ

| Published : Aug 19 2025, 01:00 AM IST

ಸಾರಾಂಶ

48ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಆಡಿಟೋರಿಯಂನಲ್ಲಿ ಭಾನುವಾರ ಜರುಗಿತು.

ಮಣಿಪಾಲ: ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ಮಣಿಪಾಲದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ 48ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಆಡಿಟೋರಿಯಂನಲ್ಲಿ ಭಾನುವಾರ ಜರುಗಿತು.

ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ಎಚ್. ಕೆ. ಗಂಗಾಧರ್ ಅವರು ಸ್ಪರ್ಧೆ ಉದ್ಘಾಟಿಸಿ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದೇವೆ. ಮಕ್ಕಳ ಭಾಗವಹಿಸುವಿಕೆಯಲ್ಲಿ ಪೋಷಕರ ಹುಮ್ಮಸ್ಸು ಮತ್ತು ಭಾಗದಾರಿಕೆ ತುಂಬಾ ಸಂತೋಷ ಕೊಡುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆಗಿಂತ ಚಿತ್ರಕಲೆಯಲ್ಲಿ ಮತ್ತು ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ಹೇಳಿ ಶುಭ ಹಾರೈಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ ಕಮಲಾಕ್ಷ, ಮಾಹೆಯ ಅಧಿಕಾರಿ ಜೈ ವಿಠಲ್, ಪ್ರಮುಖರಾದ ಯು. ಜಗನ್ನಾಥ ದೇವಾಡಿಗ, ಕಿರಣ್ ನಾಯಕ್, ಸಚಿನ್ ಶೆಟ್ಟಿ, ವಿಶಾಲ್ ಸಿಂಗ್, ಮೋಹನ್ ಕೃಷ್ಣ, ಅನಂತ್ ಶೇಟ್, ಕೃಷ್ಣಮೂರ್ತಿ ರಾವ್, ನರಸಿಂಹಮೂರ್ತಿ, ಉದಯ ಮುಂತಾದವರು ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೀವನ್ ಶೆಟ್ಟಿ ನಿರೂಪಿಸಿದರು.