ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ಮಣಿಪಾಲ ಶಾಖೆ ಆವರಣದಲ್ಲಿ ಮಾಹೆ ವಿದ್ಯಾರ್ಥಿಗಳು ಮತ್ತು ಮಣಿಪಾಲ ಶಾಖೆಯ ಗ್ರಾಹಕರಿಗೆ ನಗರ ಪ್ರಥಮ ಆರೋಗ್ಯ ಕೇಂದ್ರ ಮತ್ತು ಮಣಿಪಾಲ ಕೆಎಂಸಿ ಡೆಂಟಲ್ ವಿಭಾಗದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಯಿತು.
ಮಣಿಪಾಲ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ಮಣಿಪಾಲ ಶಾಖೆ ಆವರಣದಲ್ಲಿ ಮಾಹೆ ವಿದ್ಯಾರ್ಥಿಗಳು ಮತ್ತು ಮಣಿಪಾಲ ಶಾಖೆಯ ಗ್ರಾಹಕರಿಗೆ ನಗರ ಪ್ರಥಮ ಆರೋಗ್ಯ ಕೇಂದ್ರ ಮತ್ತು ಮಣಿಪಾಲ ಕೆಎಂಸಿ ಡೆಂಟಲ್ ವಿಭಾಗದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಬ್ಯಾಂಕಿನ ಉಡುಪಿ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಅಡಿಗ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಬ್ಯಾಂಕಿಂಗ್ ಸೇವೆ ಜೊತೆಗೆ ಗ್ರಾಹಕರು ಮತ್ತು ಸಮಾಜದ ಆರೋಗ್ಯದ ಬಗ್ಗೆಯೂ ಎಸ್‌ಬಿಐ ಬದ್ಧವಾಗಿದೆ ಎಂದರು. ಮಾಹೆ ವಿದ್ಯಾರ್ಥಿಗಳು ಮತ್ತು ಗ್ರಾಹಕರ ಸಕ್ರಿಯ ಭಾಗವಹಿಸುವಿಕೆಯನ್ನು ಅವರು ಶ್ಲಾಘಿಸಿದರು. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಪರೀಕ್ಷೆ, ದಂತ ತಪಾಸಣೆ, ಬಿಎಂಐ ಮತ್ತು ವೈದ್ಯರ ಸಲಹೆ ನೀಡಲಾಯಿತು. ವಿದ್ಯಾರ್ಥಿಗಳು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶಾಮಿನಿ, ಎನ್‌ಆರ್‌ಐ ಗ್ರಾಹಕರಾದ ಶ್ರೀ ಸುಧೀರ್, ಮುಖ್ಯ ವ್ಯವಸ್ಥಾಪಕ ಕೃಷ್ಣರಾಜ್ ಕೆ. ಭಟ್, ಅಕ್ಷಯ್ ಭಾಗವತ್, ಮಣಿಪಾಲ ಶಾಖೆಯ ಉಪ ವ್ಯವಸ್ಥಾಪಕ ಶಿವಾ ರಾಜೀವ್ ಮತ್ತು ಇತರ ಗ್ರಾಹಕರು ಉಪಸ್ಥಿತರಿದ್ದರು. ಶಿಬಿರದ ಯಶಸ್ಸಿಗೆ ಸಹಕರಿಸಿದ ವೈದ್ಯಕೀಯ ತಂಡ, ಅಧಿಕಾರಿಗಳು ಮತ್ತು ಭಾಗವಹಿಸಿದವರಿಗೆ ಮುಖ್ಯ ವ್ಯವಸ್ಥಾಪಕ ಕೃಷ್ಣರಾಜ್ ಕೆ. ಭಟ್ ಧನ್ಯವಾದ ಅರ್ಪಿಸಿದರು. ಇಂತಹ ಸಮುದಾಯಪರ ಕಾರ್ಯಕ್ರಮಗಳನ್ನು ಮುಂದೆಯೂ ಮುಂದುವರಿಸುವುದಾಗಿ ಹೇಳಿದರು.