ಮಣಿಪಾಲ: ಭಾರತದ ಪ್ರಥಮ ನ್ಯಾನೊ ಮೆಟೀರಿಯಲ್ ನೇಚರ್ ಸಮ್ಮೇಳನ ಸಂಪನ್ನ

| Published : Feb 29 2024, 02:05 AM IST

ಮಣಿಪಾಲ: ಭಾರತದ ಪ್ರಥಮ ನ್ಯಾನೊ ಮೆಟೀರಿಯಲ್ ನೇಚರ್ ಸಮ್ಮೇಳನ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಸಮ್ಮೇಳನ ಸಂಶೋಧನೆ ಪ್ರದರ್ಶಿಸಲು, ಸಹಯೋಗ ಹೊಂದಲು ಮತ್ತು ಥೆರನೊಸ್ಟಿಕ್ಸ್, ಬಯೋ-ಇಮೇಜಿಂಗ್, ಡ್ರಗ್ ಡೆಲಿವರಿ, ಲಸಿಕೆಗಳು ಮತ್ತು ಇಮ್ಯುನೊಥೆರಪಿಯಲ್ಲಿನ ಕೆಲ ಪ್ರಮುಖ ಸವಾಲುಗಳಿಗೆ ಆವಿಷ್ಕಾರಕ ಪರಿಹಾರಗಳನ್ನುಕಂಡುಕೊಳ್ಳಲು ಅವಕಾಶ ಒದಗಿಸಿತು.

ಕನ್ನಡಪ್ರಭ ವಾರ್ತೆ ಮಣಿಪಾಲನೇಚರ್ ರಿಸರ್ಚ್ ಗ್ರೂಪ್‌ನ ಮುಂಚೂಣಿಯ ಪತ್ರಿಕೆ ನೇಚರ್ ಕಮ್ಯುನಿಕೇಷನ್ಸ್ ಆ್ಯಂಡ್ ನೇಚರ್ ನ್ಯಾನೊಟೆಕ್ನಾಲಜಿ ಸಹಯೋಗದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ಯಲ್ಲಿ ನಡೆದ ‘ನ್ಯಾನೊಮೆಟೀರಿಯಲ್ಸ್ ಇನ್ ಬಯೋಮೆಡಿಕಲ್ ಸೈನ್ಸಸ್’ ಕುರಿತಾದ ಮೊದಲ ನೇಚರ್ ಸಮ್ಮೇಳನ ಯಶಸ್ವಿಯಾಗಿ ಸಮಾರೋಪಗೊಂಡಿತು.ವಿಶ್ವದ ನ್ಯಾನೊಮೆಟೀರಿಯಲ್ ಕ್ಷೇತ್ರದ ಖ್ಯಾತನಾಮರು ಭಾಗವಹಿಸಿದ್ದ ಈ ಸಮ್ಮೇಳನವು ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮ ನಾಯಕರಿಗೆ ವೇದಿಕೆಯಾಗಿ ಕೆಲಸ ಮಾಡಿದ್ದು, ಅವರಿಗೆ ತಮ್ಮ ಮಹತ್ತರ ಸಂಶೋಧನೆ ಪ್ರದರ್ಶಿಸಲು, ಸಹಯೋಗ ಹೊಂದಲು ಮತ್ತು ಥೆರನೊಸ್ಟಿಕ್ಸ್, ಬಯೋ-ಇಮೇಜಿಂಗ್, ಡ್ರಗ್ ಡೆಲಿವರಿ, ಲಸಿಕೆಗಳು ಮತ್ತು ಇಮ್ಯುನೊಥೆರಪಿಯಲ್ಲಿನ ಕೆಲ ಪ್ರಮುಖ ಸವಾಲುಗಳಿಗೆ ಆವಿಷ್ಕಾರಕ ಪರಿಹಾರಗಳನ್ನುಕಂಡುಕೊಳ್ಳಲು ಅವಕಾಶ ಒದಗಿಸಿತು.ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್, ಈ ಸಮ್ಮೇಳನವು ಐಡಿಯಾಗಳ ಕಣಜವಾಗಿದ್ದು, ಇಲ್ಲಿ ಪ್ರದರ್ಶಿಸಲಾದ ವೈಜ್ಞಾನಿಕ ಸಂಶೋಧನೆಗಳು ಭವಿಷ್ಯದಲ್ಲಿ ಮಹತ್ತರ ಸಾಧನೆಗಳಿಗೆ ಸುಧಾರಣೆಗಳಿಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ. ಇದು ಮಾಹೆಗೆ ಮಾನವಕುಲದ ಅನುಕೂಲಕ್ಕೆ ಹೊಸ ಜಾಲಗಳು ಮತ್ತು ಮಿತೃತ್ವಗಳನ್ನು ರೂಪಿಸಲು ನಮಗೆ ವೇದಿಕೆ ಒದಗಿಸಿದೆ ಎಂದರು.

ನೇಚರ್ ಕಮ್ಯುನಿಕೇಷನ್ಸ್ ಸೀನಿಯರ್ ಎಡಿಟರ್ ಡಾ. ಐಶ್ವರ್ಯ ಸುಂದರಂ, ಈ ಸಮ್ಮೇಳನದಲ್ಲಿ ವೈವಿಧ್ಯತೆ ಮತ್ತು ಅನ್ವೇಷಣೆಗಳು ವೈದ್ಯಕೀಯ ಅನ್ವಯಗಳಲ್ಲಿ ನ್ಯಾನೊಮೆಟೀರಿಯಲ್ ಗಳ ಗಡಿಗಳನ್ನು ವಿಸ್ತರಿಸುವಲ್ಲಿ ಸಹಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಈ ಸಮ್ಮೇಳನವು ನ್ಯಾನೋನೆಟಿರಿಯಲ್ ಇನ್ ಬಯೋಮೆಡಿಕಲ್ ಸೈನ್ಸಸ್ ಬಗ್ಗೆ ಹಲವು ಪೋಸ್ಟರ್‌ಗಳ ‍ಪ್ರದರ್ಶನ ಹೊಂದಿದ್ದು, ಅದರಲ್ಲಿ ಉದಯೋನ್ಮುಖ ಸಂಶೋಧಕರು ತಮ್ಮ ಸಂಶೋಧನೆ ಪ್ರದರ್ಶಿಸಿದ್ದು ನೆಟ್ವರ್ಕಿಂಗ್ ಮತ್ತು ಜ್ಞಾನ ವಿನಿಮಯಕ್ಕೆ ಅವಕಾಶ ಒದಗಿಸಿತು.ಸಮ್ಮೇಳನದ ಇನ್ನೊಂದು ವಿಶೇಷತೆ ಎಂದರೆ ವಿಜ್ಞಾನದ ಜಾಗತಿಕ ಮಹಿಳಾ ನಾಯಕಿಯರು ‘ವಿಜ್ಞಾನದಲ್ಲಿ ಲಿಂಗ ತಾರತಮ್ಯ’ ಎನ್ನುವ ವಿಷಯ ಕುರಿತು ಹಾಗೂ ಈ ಅಂತರ ತುಂಬಲು ಪ್ರಸ್ತುತದ ಸವಾಲುಗಳು ಮತ್ತು ಪರಿಹಾರಗಳ ಕುರಿತು ಚರ್ಚೆ ನಡೆಸಿದರು.