ಮಣಿಪಾಲ ಕೆಎಂಸಿ: ಹ್ಯಾಂಡ್ಸ್‌ ಆನ್‌ ಟ್ರೈನಿಂಗ್‌ ಸೆಶನ್ಸ್‌ 2.0 ರೆಟಿನಾ ಸಂಪನ್ನ

| Published : Sep 12 2025, 12:06 AM IST

ಮಣಿಪಾಲ ಕೆಎಂಸಿ: ಹ್ಯಾಂಡ್ಸ್‌ ಆನ್‌ ಟ್ರೈನಿಂಗ್‌ ಸೆಶನ್ಸ್‌ 2.0 ರೆಟಿನಾ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ರೆಟಿನಲ್ ಡಯಾಗ್ನೋಸ್ಟಿಕ್ಸ್ ಮತ್ತು ಮಣಿಪಾಲ್ ಹ್ಯಾಂಡ್ಸ್ ಆನ್ ಟ್ರೈನಿಂಗ್ ಸೆಶನ್ಸ್ 2.0 - ರೆಟಿನಾ ಎಂಬ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮವನ್ನು ಮಣಿಪಾಲ ಕೆಎಂಸಿ ಕಾಲೇಜಿನ ಇಂಟರಾಕ್ಟ್ ಹಾಲ್‌ನಲ್ಲಿ ಆಯೋಜಿಸಿತ್ತು.

ಮಣಿಪಾಲ: ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೇತ್ರವಿಜ್ಞಾನ ವಿಭಾಗವು, ಉಡುಪಿ ಜಿಲ್ಲಾ ನೇತ್ರವಿಜ್ಞಾನ ಸೊಸೈಟಿ (ಯುಡಿಒಎಸ್) ಮತ್ತು ಕರ್ನಾಟಕ ನೇತ್ರವಿಜ್ಞಾನ ಸೊಸೈಟಿ (ಕೆಒಎಸ್) ಸಹಯೋಗದೊಂದಿಗೆ, ರೆಟಿನಲ್ ಡಯಾಗ್ನೋಸ್ಟಿಕ್ಸ್ ಮತ್ತು ಮಣಿಪಾಲ್ ಹ್ಯಾಂಡ್ಸ್ ಆನ್ ಟ್ರೈನಿಂಗ್ ಸೆಶನ್ಸ್ 2.0 - ರೆಟಿನಾ ಎಂಬ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮವನ್ನು ಕಾಲೇಜಿನ ಇಂಟರಾಕ್ಟ್ ಹಾಲ್‌ನಲ್ಲಿ ಆಯೋಜಿಸಿತ್ತು.

ಈ ತರಬೇತಿ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ನೇತ್ರ ವಿಜ್ಞಾನದ ಪ್ರಮುಖ ತಜ್ಞರು ಸೇರಿದಂತೆ 100 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಭಾಗವಹಿಸಿದ್ದರು.

ಬೆಂಗಳೂರಿನ ತಜ್ಞ, ಸಲಹೆಗಾರ ಡಾ. ಶ್ರೀಕಾಂತ್ ವೈ ಎನ್ ತರಬೇತಿ ಉದ್ಘಾಟಿಸಿದರು. ಕೆಒಎಸ್ ವೈಜ್ಞಾನಿಕ ಸಮಿತಿ ಅಧ್ಯಕ್ಷ, ಯುಡಿಒಎಸ್ ಕಾರ್ಯದರ್ಶಿ ಡಾ. ವಿಕ್ರಮ್ ಜೈನ್, ಉಡುಪಿಯ ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನೇತ್ರತಜ್ಞೆ ಡಾ. ಲಾವಣ್ಯ ರಾವ್, ಕೆಎಂಸಿಯ ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಎಸ್ ಕಾಮತ್ ಸೇರಿದಂತೆ ಅನೇಕರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು, ಕೆ.ಎಂ.ಸಿ.ಯ ಸಹ ಪ್ರಾಧ್ಯಾಪಕಿ ಡಾ. ಶೈಲಜಾ ಭಟ್. ಸಹಾಯಕ ಪ್ರಾಧ್ಯಾಪಕಿ ಡಾ. ಸುಶನ್ ಶೆಟ್ಟಿ ಉಪಸ್ಥಿತರಿದ್ದರು.

ತಜ್ಞರಾದ ಡಾ. ಶೋನ್‌ರಾಜ್ ಅವರು ನಿಯಮಿತ ರೆಟಿನಲ್ ಸ್ಕ್ರೀನಿಂಗ್‌ಗಾಗಿ ನೇತ್ರ ರೋಗನಿರ್ಣಯ ಸಾಧನಗಳಲ್ಲಿ ಕೃತಕ ಬುದ್ಧಿಮತ್ತೆಯ ಅನ್ವಯದ ಕುರಿತು ಭಾಷಣ ಮಾಡಿದರು.ಡಯಾಬಿಟಿಕ್ ರೆಟಿನೋಪತಿ, ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ರೆಟಿನಲ್ ನಾಳೀಯ ಅಡಚಣೆಗಳಂತಹ ರೆಟಿನಾದ ಅಸ್ವಸ್ಥತೆಗಳ ಆರಂಭಿಕ ಪತ್ತೆ ಮತ್ತು ನಿಖರವಾದ ಮೌಲ್ಯಮಾಪನದ ಮಹತ್ವವನ್ನು ಡಾ. ಯೋಗೀಶ್ ಎಸ್ ಕಾಮತ್ ಒತ್ತಿ ಹೇಳಿದರು. ಕೆಎಂಸಿ ಮಣಿಪಾಲದಲ್ಲಿ ವೈದ್ಯಕೀಯ ರೆಟಿನಾ ಮತ್ತು ಯುವಿಯಾದಲ್ಲಿ ಪೋಸ್ಟ್-ಡಾಕ್ಟರಲ್ ಫೆಲೋಶಿಪ್ ತರಬೇತಿ ಕಾರ್ಯಕ್ರಮ ಪ್ರಾರಂಭಿಸುತ್ತಿರುವುದಾಗಿ ಅವರು ಘೋಷಿಸಿದರು. ಈ ತರಬೇತಿಯ ಸಂದರ್ಭದಲ್ಲಿ ಪ್ರಮುಖವಾಗಿ ಓಸಿಟಿ ಆಂಜಿಯೋಗ್ರಫಿ, ವೈಡ್-ಫೀಲ್ಡ್ ಫಂಡಸ್ ಇಮೇಜಿಂಗ್, ರೆಟಿನಲ್ ಲೇಸರ್‌ಗಳು ಮತ್ತು ಸುಧಾರಿತ ಅಲ್ಟ್ರಾಸೊನೋಗ್ರಫಿಯ ಪ್ರಾಯೋಗಿಕ ಪ್ರದರ್ಶನ, ಸಂವಾದಾತ್ಮಕ ಪ್ರಕರಣ ಚರ್ಚೆಗಳನ್ನು ನಡೆಸಲಾಯಿತು.ಇದೇ ಸಂದರ್ಭ ಒಇಯು ಆಯೋಜಿಸಿದ್ದ ಅಲುಮ್ನಿ ರೋಲಿಂಗ್ ಟ್ರೋಫಿಗಾಗಿನ ಚರ್ಚಾ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳಿಂದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದರು.