ಮಣಿಪಾಲ್‌ ಮ್ಯಾರಥಾನ್‌: ಸಚಿನ್‌ ಪೂಜಾರಿ, ಲೆಶಾರ್ಜ್ ಸೆನೈಟ್‌ ಚಾಂಪಿಯನ್ಸ್‌

| Published : Feb 10 2025, 01:46 AM IST

ಮಣಿಪಾಲ್‌ ಮ್ಯಾರಥಾನ್‌: ಸಚಿನ್‌ ಪೂಜಾರಿ, ಲೆಶಾರ್ಜ್ ಸೆನೈಟ್‌ ಚಾಂಪಿಯನ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾಹೆ ವಿ.ವಿ.ಯ ಆಶ್ರಯದಲ್ಲಿ ನಡೆದ, 42.195 ಕಿಮೀ ಮಣಿಪಾಲ್ ಮ್ಯಾರಥಾನ್ - 2025ರ ಪುರುಷರ ವಿಭಾಗದಲ್ಲಿ ಉಡುಪಿಯ ಸಚಿನ್ ಪೂಜಾರಿ ಮತ್ತು ಮಹಿಳೆಯರ ವಿಬಾಗದಲ್ಲಿ ಇಥಿಯೋಪಿಯಾದ ಲೆಶಾರ್ಜ್ ಸೇನೈಟ್ ಕೆಫೆಲೆಗನ್ ಚಾಂಪಿಯನ್‌ಗಳಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಾಹೆ ವಿ.ವಿ.ಯ ಆಶ್ರಯದಲ್ಲಿ ನಡೆದ, 42.195 ಕಿಮೀ ಮಣಿಪಾಲ್ ಮ್ಯಾರಥಾನ್ - 2025ರ ಪುರುಷರ ವಿಭಾಗದಲ್ಲಿ ಉಡುಪಿಯ ಸಚಿನ್ ಪೂಜಾರಿ ಮತ್ತು ಮಹಿಳೆಯರ ವಿಬಾಗದಲ್ಲಿ ಇಥಿಯೋಪಿಯಾದ ಲೆಶಾರ್ಜ್ ಸೇನೈಟ್ ಕೆಫೆಲೆಗನ್ ಚಾಂಪಿಯನ್‌ಗಳಾಗಿದ್ದಾರೆ.

ಭಾನುವಾರ ನಡೆದ 7ನೇ ವರ್ಷದ ಮಣಿಪಾಲ ಮ್ಯಾರಥಾನ್‌ನಲ್ಲಿ ದೇಶ ವಿದೇಶಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಓಟಗಾರರು ಭಾಗವಹಿಸಿದ್ದರು.

ವಿಶೇಷ ಎಂದರೆ ಈ ಬಾರಿ ಸುಮಾರು 300 ಮಂದಿ ಅಂಧ ಮತ್ತು 200ಕ್ಕೂ ಅಧಿಕ ವಿಕಲಾಂಗ ಓಟಗಾರರು ಭಾಗವಹಿಸಿ, ಕ್ರೀಡಾಸ್ಪೂರ್ತಿ ಮೆರೆದರು.

ಪುರುಷರ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ಓಟಗಾರ ಕಿನ್ಯದ ಚೆರುಯೋಟ್ ಡೇನಿಯಲ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇನ್ನೊಬ್ಬ ಅನುಭವಿ ಓಟಗಾರ ಬೆಂಗಳೂರಿನ ನಂಜುಡಪ್ಪ ಎಂ. 2ನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಈ ಬಾರಿ ಚೆನ್ನೈ ಮ್ಯಾರಥಾನ್‌ನ ಚಾಂಪಿಯನ್ ಲೆಶಾರ್ಜ್ ಸೆನೈಟ್ ಕೆಫೆಲೆಗನ್ ಅರ್ಹವಾಗಿಯೇ ಪ್ರಥಮ ಸ್ಥಾನ ಗೆದ್ದುಕೊಂಡರೆ, ಕೇರಳದ ಆಸಾ ಟಿ.ಪಿ. 2ನೇ ಸ್ಥಾನ ಮತ್ತು ಡೆಲ್ಲಿಯ ಶಕುಂತಲಾದೇವಿ 3ನೇ ಸ್ಥಾನದಲ್ಲಿ ಗುರಿ ಮುಟ್ಟಿದರು.

ಫಲಿಶಾಂಶ:

ಪೂರ್ಣ ಮ್ಯಾರಥಾನ್ (42.19 ಕಿಮೀ)

ಪುರುಷರ ವಿಭಾಗ - 1 : ಸಚಿನ್ ಪೂಜಾರಿ, 2 : ನಂಜುಂಡಪ್ಪ ಎಂ., 3 : ಚೆರುಯೋಟ್ ಡೇನಿಯಲ್

ಮಹಿಳೆಯರ ವಿಭಾಗ - 1 : ಲೆಶಾರ್ಜ್ ಸೆನೈಟ್ ಕೆಫೆಲೆಗನ್, 2 : ಆಸಾ ಟಿ.ಪಿ., 3 : ಶಕುಂತಲಾ ದೇವಿ

ಅರ್ಧ ಮ್ಯಾರಥಾನ್ (21 ಕಿಮೀ):

ಪುರುಷರ ವಿಭಾಗ - 1 : ಅಂಕುಶ್ ಹಕ್ಕೆ, 2 : ಕಿಪ್ಟೂ ಅಬ್ರಹಾಂ, 3 : ಶಿವಮ್ ಯಾದವ್

ಮಹಿಳೆಯರ ವಿಭಾಗ - 1: ಕೆ.ಎಮ್. ಲಕ್ಷ್ಮಿ, 2 : ನಂದಿನಿ ಜಿ., 3: ಮೋಲ್ಲೇಶ್ವರಿ

10 ಕಿಮೀ ಓಟ:

ಪುರುಷರ ವಿಭಾಗ - 1 : ಲವ್ ಚೌಧರ, 2 : ಎ.ಆರ್. ರೋಹಿತ್, 3 : ಅಂಕಿತ್ ಇಂಡೋಲಿಯಾ

ಮಹಿಳೆಯರ ವಿಭಾಗ - 1 : ಸ್ಮಿತಾ ಡಿ. ಆರ್., 2: ನೀತು ಕುಮಾರಿ, 3 : ಶ್ರೇಯಾ ಎಂ