ತಾಲೂಕಿನ ಮುನಿಯೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತಾವರೇಕೆರೆ ಕ್ಷೇತ್ರದ ನಿರ್ದೇಶಕ ಟಿ.ಎಂ.ಮಂಜಣ್ಣ, ಉಪಾಧ್ಯಕ್ಷರಾಗಿ ತಾವರೇಕೆರೆ ಕ್ಷೇತ್ರದ ನಿರ್ದೇಶಕಿ ಪಾರ್ವತಿ ಕೆಂಪೇಗೌಡ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮುನಿಯೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತಾವರೇಕೆರೆ ಕ್ಷೇತ್ರದ ನಿರ್ದೇಶಕ ಟಿ.ಎಂ.ಮಂಜಣ್ಣ, ಉಪಾಧ್ಯಕ್ಷರಾಗಿ ತಾವರೇಕೆರೆ ಕ್ಷೇತ್ರದ ನಿರ್ದೇಶಕಿ ಪಾರ್ವತಿ ಕೆಂಪೇಗೌಡ ಅವಿರೋಧವಾಗಿ ಆಯ್ಕೆಯಾದರು.ನೂತನ ಅಧ್ಯಕ್ಷ ಟಿ.ಎಂ.ಮಂಜಣ್ಣ ಮತ್ತು ಉಪಾಧ್ಯಕ್ಷೆ ಪಾರ್ವತಿ ಕೆಂಪೇಗೌಡರನ್ನು ನಿರ್ದೇಶಕರಾದ ಎಂ.ಎಸ್. ಶಿವರಾಜು, ಸಾವಿತ್ರಮ್ಮ, ಎಂ.ಕೆ.ಪ್ರಕಾಶ್, ಬಿ.ಎನ್.ಪರಮೇಶ್ವರಯ್ಯ, ಎಂ.ಎನ್.ರಂಗಸ್ವಾಮಿ, ಎಂ.ಆರ್.ಲವ, ನೀಲಮ್ಮ, ಚಂದ್ರಕಲಾ, ಮೇಲ್ವಿಚಾರಕ ಭರತ್, ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಕೊಡಗೀಹಳ್ಳಿ ಸಿದ್ದಲಿಂಗಪ್ಪ, ಮುಖಂಡರಾದ ಎಂ.ಡಿ.ಮೂರ್ತಿ, ಚಿದಾನಂದ್, ಪುಟ್ಟಣ್ಣ, ಲಕ್ಷ್ಮೀನಾರಾಯಣಪ್ಪ, ಮಲ್ಲಣ್ಣ, ಕಲ್ಲಬೋರನಹಳ್ಳಿ ಜಯರಾಮಯ್ಯ, ಬಳ್ಳೆಕಟ್ಟೆ ನಾಗರಾಜು, ತಾವರೇಕೆರೆ ಕೆಂಪೇಗೌಡ, ಟಿ.ಎಂ.ಬಸವರಾಜು, ಲಿಂಗರಾಜು ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು.