ಪತ್ರಕರ್ತರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಅರಿತು ಕಾರ್ಯ ನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ. ಈ ಹಿಂದೆ ಲಂಕೇಶ್ ಪತ್ರಿಕೆಯ ಸಂಪಾದಕರಾದ ಪಿ.ಲಂಕೇಶ್ ಮೇಷ್ಟ್ರು ಒಂದು ಸರಕಾರ ಬದಲಾವಣೆ ತರುವ ನಿಟ್ಟಿನಲ್ಲಿ ನ್ಯೂಸ್ ಮೂಲಕ ಸಾಬೀತು ಮಾಡಿರುವುದನ್ನು ಗಮನಿಸಿದ್ದೇನೆ. ನಿಮ್ಮ ಬರವಣಿಗೆ ಸತ್ಯಪರವಾಗಿ ತೀಕ್ಷಣವಾಗಿದ್ದರೇ ಪತ್ರಿಕೋದ್ಯಮದ ಘನತೆಯನ್ನು ಎತ್ತಿಹಿಡಿಯಬಹುದಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ತಾಂಡವಾಡುತ್ತಿರುವ, ಗಟ್ಟಿಯಾಗಿ ಬೇರೂರುತ್ತಿರುವ ಭ್ರಷ್ಟಚಾರ, ದೌರ್ಜನ್ಯ,ಅತ್ಯಾಚಾರ,ಸಮಾಜ ಘಾತಕ ಕೃತ್ಯಗಳನ್ನು ಸಮಾಜದಲ್ಲಿ ಎತ್ತಿಹಿಡಿಯುವ ಮತ್ತು ಜನ ಸಾಮಾನ್ಯರ ಮುಂದೆ ಪ್ರಸ್ತುತಪಡಿಸುವ ಗುರುತರ ಕರ್ತವ್ಯ ಪತ್ರಕರ್ತರ ಮೇಲಿದೆ ಎಂದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗಕ್ಕೆ ಪ್ರಮುಖ ಜವಾಬ್ದಾರಿಯಿದ್ದು, ಕಾರ್ಯಾಂಗ, ಶಾಸಕಾಂಗವನ್ನು ಪ್ರತಿ ಹಂತದಲ್ಲಿಯೂ ಎಚ್ಚರಿಸುವ ಕೆಲಸವನ್ನು ಸಕಾಲಿಕವಾಗಿ ನಿರ್ವಹಿಸಬೇಕಿದೆ ಎಂದು ಶಾಸಕ ಎ. ಮಂಜು ಹೇಳಿದರು.ಪಟ್ಟಣದ ಕೆಎನ್‌ವಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಅರಿತು ಕಾರ್ಯ ನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ. ಈ ಹಿಂದೆ ಲಂಕೇಶ್ ಪತ್ರಿಕೆಯ ಸಂಪಾದಕರಾದ ಪಿ.ಲಂಕೇಶ್ ಮೇಷ್ಟ್ರು ಒಂದು ಸರಕಾರ ಬದಲಾವಣೆ ತರುವ ನಿಟ್ಟಿನಲ್ಲಿ ನ್ಯೂಸ್ ಮೂಲಕ ಸಾಬೀತು ಮಾಡಿರುವುದನ್ನು ಗಮನಿಸಿದ್ದೇನೆ. ನಿಮ್ಮ ಬರವಣಿಗೆ ಸತ್ಯಪರವಾಗಿ ತೀಕ್ಷಣವಾಗಿದ್ದರೇ ಪತ್ರಿಕೋದ್ಯಮದ ಘನತೆಯನ್ನು ಎತ್ತಿಹಿಡಿಯಬಹುದಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ತಾಂಡವಾಡುತ್ತಿರುವ, ಗಟ್ಟಿಯಾಗಿ ಬೇರೂರುತ್ತಿರುವ ಭ್ರಷ್ಟಚಾರ, ದೌರ್ಜನ್ಯ,ಅತ್ಯಾಚಾರ,ಸಮಾಜ ಘಾತಕ ಕೃತ್ಯಗಳನ್ನು ಸಮಾಜದಲ್ಲಿ ಎತ್ತಿಹಿಡಿಯುವ ಮತ್ತು ಜನ ಸಾಮಾನ್ಯರ ಮುಂದೆ ಪ್ರಸ್ತುತಪಡಿಸುವ ಗುರುತರ ಕರ್ತವ್ಯ ಪತ್ರಕರ್ತರ ಮೇಲಿದೆ. ಇದನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಅವರು ಕಿವಿಮಾತು ಹೇಳಿದರು.ಪತ್ರಕರ್ತರಿಂದ ವ್ಯಕ್ತಿಯ ತೇಜೋವಧೆ ಮಾಡುವ ಕೆಲಸ ಆಗಬಾರದು. ರಾಜಕಾರಣಿ, ಅಧಿಕಾರಿಗಳು ತಪ್ಪುಮಾಡಿದ್ದರೇ ಖಂಡಿಸಿ ಬರೆಯಿರಿ.ಅದೇ ರೀತಿ ವೈಯಕ್ತಿಕವಾಗಿ ವ್ಯಕ್ತಿಯ ವಿರುದ್ಧ ಮತ್ತು ಪರವಾಗಿ ವರದಿ ಮಾಡುವ ವೇಳೆ ಸಂಬಂಧಪಟ್ಟವರ ಅಭಿಪ್ರಾಯ ಪಡೆದುಕೊಂಡು ಹೇಳಿಕೆ ಹಾಕಿದರೇ ಅಂತಹ ಸುದ್ಧಿಗೆ ಹೆಚ್ಚು ಮಹತ್ವ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬ್ಲಾಕ್‌ಮೇಲ್ ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಸಾಧಕರನ್ನು ಕೊಡುಗೆಯಾಗಿ ನೀಡಿರುವ ಹೆಗ್ಗಳಿಕೆ ಅರಕಲಗೂಡಿಗೆ ಇದೆ. ಸಂಗೀತ ಕ್ಷೇತ್ರದಲ್ಲಿ ರುದ್ರಪಟ್ಟಣ, ರಾಜಕೀಯ ಕ್ಷೇತ್ರದಲ್ಲಿ ಎಚ್. ಎನ್. ನಂಜೇಗೌಡ, ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಅನಕೃ, ಪ್ರಸಾರ ಭಾರತಿ ಅಧ್ಯಕ್ಷರಾಗಿ ಅರಕಲಗೂಡು ಸೂರ್ಯಪ್ರಕಾಶ್ ಸೇವೆ, ಈ ನಡುವೆ ಮೂರು ನದಿಗಳು ಹರಿಯುವ ಪುಣ್ಯ ಕ್ಷೇತ್ರವಾಗಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಪತ್ರಕರ್ತರಾಗಿ ತೊಡಗಿಕೊಂಡಿರುವ ನಿಮ್ಮ ಪಾತ್ರ ದೊಡ್ಡದಿದೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಾಗಿ ಬರುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಆದರೆ ಉತ್ತಮ ಮಾರ್ಗದಲ್ಲಿ ತೊಡಗಿಕೊಂಡಿರುವವರ ಸಂಖ್ಯೆ ವಿರಳ. ಹೆಚ್ಚಿನದಾಗಿ ನಕಲಿ, ಬ್ಲಾಕ್‌ಮೇಲ್ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದೆ. ಇಂತವರನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ. ಬರವಣಿಗೆ ಖ್ಯಾತಿ, ಉತ್ತಮ ನಡವಳಿಕೆಯನ್ನು ಮೈಗೂಡಿಸಿಕೊಂಡರೆ ಪದ್ಮಶ್ರೀ ಪ್ರಶಸ್ತಿಗಿಂತ್ತ ಅತ್ಯುನ್ನತ ಪ್ರಶಸ್ತಿ ಜನರಿಂದ ದೊರೆಯುತ್ತದೆ. ಇದನ್ನು ಅರಿತು ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ. ಆರ್. ಕೆಂಚೇಗೌಡ ಮಾತನಾಡಿ, ಜಿಲ್ಲೆಯಲ್ಲಿ 280 ಮಂದಿ ಸದಸ್ಯರಾಗಿದ್ದಾರೆ. ಸಂವಿಧಾನದ ಮೂರು ಅಂಗಗಳು ದಾರಿತಪ್ಪುತ್ತಿವೆ ಎಂದು ಹೇಳುವ ನಾವು ಪತ್ರಿಕಾರಂಗ ಕೂಡ ಯಾವ ನಿಟ್ಟಿನಲ್ಲಿ ಸಾಗುತ್ತಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್. ಬಿ. ಮದನ್‌ಗೌಡ ಆಶಯ ನುಡಿಗಳನ್ನಾಡಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಮೋದ್, ತಾಲೂಕು ಸಂಘದ ಅಧ್ಯಕ್ಷ ಪಿ. ಶಿವಕುಮಾರ್, ಜಿಲ್ಲಾ ಸಂಘದ ಉಪಾಧ್ಯಕ್ಷ ನಂಜುಂಡೇಗೌಡ, ಮಾಜಿ ಅಧ್ಯಕ್ಷ ರವಿನಾಕಲಗೂಡು ಮಾತನಾಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ಸೌಮ್ಯ, ಜಿಲ್ಲಾ ಕಾರ್ಯದರ್ಶಿ ಹರೀಶ್, ಕುಶ್‌ವಂತ್, ಶಂಕರ್, ವಿರೂಪಾಕ್ಷ, ಗಣೇಶ್ ಇತರರು ಇದ್ದರು.