ನಗರದ ಪ್ರವಾಸ ಮಂದಿರದಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಕೂರು ರಮೇಶ್, ಉಪಾಧ್ಯಕ್ಷರಾಗಿ ಎಸ್.ಅರಕೇಶ್, ಬಿ.ಪಿ.ಚಿನ್ನಗಿರಿಗೌಡ ಮತ್ತು ಖಜಾಂಚಿಯಾಗಿ ಮೆಂಗಳ್ಳಿ ಮಹೇಶ್ ಚುನಾಯಿತರಾದರು. ಕಾರ್ಯದರ್ಶಿ ಸ್ಥಾನಕ್ಕೆ ವಿನ್ಸೆಂಟ್ ವಿಜಯ್, ಚಕ್ಕರೆ ಚೇತನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂದೀಪ್ ಕುಮಾರ್ ಮತ್ತು ಟಿ.ಎಸ್.ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಚನ್ನಪಟ್ಟಣ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಎಂ. ಮಂಜುನಾಥ್ ಅವರು ಗೆಲುವು ಸಾಧಿಸಿದರು.
ನಗರದ ಪ್ರವಾಸ ಮಂದಿರದಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಕೂರು ರಮೇಶ್, ಉಪಾಧ್ಯಕ್ಷರಾಗಿ ಎಸ್.ಅರಕೇಶ್, ಬಿ.ಪಿ.ಚಿನ್ನಗಿರಿಗೌಡ ಮತ್ತು ಖಜಾಂಚಿಯಾಗಿ ಮೆಂಗಳ್ಳಿ ಮಹೇಶ್ ಚುನಾಯಿತರಾದರು. ಕಾರ್ಯದರ್ಶಿ ಸ್ಥಾನಕ್ಕೆ ವಿನ್ಸೆಂಟ್ ವಿಜಯ್, ಚಕ್ಕರೆ ಚೇತನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂದೀಪ್ ಕುಮಾರ್ ಮತ್ತು ಟಿ.ಎಸ್.ಕುಮಾರ್ ಅವಿರೋಧವಾಗಿ ಆಯ್ಕೆಯಾದರು.ಚುನಾವಣಾಧಿಕಾರಿ ಓದೇಶ್, ಸಹಾಯಕ ಚುನಾವಣಾಧಿಕಾರಿಗಳಾಗಿ ಶಿವರಾಜು ಮತ್ತು ಸಿದ್ದಲಿಂಗೇಶ್ವರ್ ಕಾರ್ಯನಿರ್ವಹಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಉಸ್ತುವಾರಿ ಮತ್ತೀಕೆರೆ ಜಯರಾಮ್, ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷರಾದ ಬಿ.ಶಿವರಾಜು, ಶಿವಲಿಂಗಯ್ಯ, ಕಾರ್ಯದರ್ಶಿಗಳಾದ ಸಿದ್ದಲಿಂಗೇಶ್ವರ್, ಜಗದೀಶ್, ಖಜಾಂಚಿ ಅರುಣ್ ಮತ್ತಿತರರು ಪ್ರಕ್ರಿಯೆಯಲ್ಲಿ ಭಾಗಿಯಾದರು. ನೂತನ ಪದಾಧಿಕಾರಿಗಳು ಸಂಘದ ಸದಸ್ಯರು ಅಭಿನಂದಿಸಿದರು.