ಪುಟಾಣಿಗಳೊಂದಿಗೆ ಮಕ್ಕಳಾಗಿ ಬೆರೆತ ಪೊಲೀಸ್ ಕಮಿಷನರ್‌..

| Published : Oct 06 2023, 01:19 AM IST

ಸಾರಾಂಶ

ಪುಟಾಣಿಗಳೊಂದಿಗೆ ಪೊಲೀಸ್ ಕಮಿಷನರ್‌
ಕನ್ನಡಪ್ರಭ ವಾರ್ತೆ ಮಂಗಳೂರು ಪೊಲೀಸ್‌ ಎಂದರೆ ಭಯ ಪಡುವವರ ಮಕ್ಕಳ ನಡುವೆ ಈ ಪುಟಾಣಿಗಳು ಪೊಲೀಸ್‌ ಮಾಮ ಜತೆ ಪ್ರೀತಿಯಿಂದ ಬೆರೆತರು, ಅಷ್ಟೇ ಪ್ರೀತಿಯಿಂದ ಪೊಲೀಸ್ ಅಧಿಕಾರಿಗಳು ಮಾತನಾಡಿಸಿ ಬೆನ್ನುತಟ್ಟಿದರು. ಬಿಡುವಿಲ್ಲದ ಕೆಲಸದ ನಡುವೆಯೂ ಮಕ್ಕಳ ಜತೆ ಮಕ್ಕಳಾಗಿ ಬೆರೆತದ್ದು ಮಂಗಳೂರು ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್. ಮಂಗಳೂರಿನ ಇರೋ ಕಿಡ್ಸ್‌ ಕೊಡಿಯಾಲಬೈಲ್‌ ಪ್ರೀಸ್ಕೂಲ್‌ನ ಪುಟಾಣಿಗಳು ಸಮವಸ್ತ್ರ ಧರಿಸಿ ಬಂದು ಕಮಿಷನರ್‌ನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದರು. ಕಮಿಷನರ್‌ ಕಚೇರಿ ಕೆಲವು ಗಂಟೆಗಳ ಕಾಲ ಪುಟಾಣಿ ಕರಲವದಿಂದ ಕೂಡಿತ್ತು. ಗುರುವಾರ ಕಮಿಷನರ್‌ ಕಚೇರಿಗೆ ಬಂದ ಪುಟ್ಟ ಮಕ್ಕಳು ಪೊಲೀಸ್‌ ಅಂಜಿಕೆಯನ್ನೇ ಬಿಟ್ಟು ಕಮಿಷನರ್‌ ಜತೆ ಪ್ರಶ್ನೆ ಕೇಳಿದರು, ಪ್ರಶ್ನೆಗೆ ಪ್ರಶ್ನೆ ಕೇಳುತ್ತಾ ಮಕ್ಕಳ ಜತೆ ಕಮಿಷನರ್‌ ಮಾಸ್ಟರ್‌ ಆದರು. ಮುಂದೆ ಏನಾಗಬೇಕು ಎಂದು ಕಮಿಷನರ್‌ ಪ್ರಶ್ನಿಸಿದಾಗ, ಕೆಲವು‌ ಪುಟಾಣಿಗಳು ಟೀಚರ್ ಇಷ್ಟ ಎಂದರೆ, ಕೆಲವರು ನಿಮ್ಮ ಥರ ಪೊಲೀಸ್ ಅಗಬೇಕು ಎಂದರು. ನಂತರ ಮಕ್ಕಳಿಗೆ ಚಾಕಲೇಟ್, ಜ್ಯೂಸ್, ಪೆನ್ಸಿಲ್‌ ನೀಡಲಾಯಿತು. ಇದನ್ನು ಪಡೆದುಕೊಂಡು ಕಮಿಷನರ್‌ಗೆ ಥ್ಯಾಕ್ಸ್‌ ಹೇಳಿ ಪುಟಾಣಿಗಳು ಕುಣಿದಾಡಿದರು. ------------