ಸಾರಾಂಶ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಉತ್ತಮ ಆರ್ಥಿಕ ತಜ್ಞರನ್ನು ಕಳೆದುಕೊಂಡಿದ್ದು, ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ದೇಶದ ಗ್ರಾಮೀಣ ಪ್ರದೇಶದ ಬಡಜನರ ವಲಸೆ ತಪ್ಪಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯ್ದೆ ಸೇರಿದಂತೆ ಹಲವಾರು ಜನಪರ ಯೋಜನೆಗಳ ಮೂಲಕ ಮನಮೋಹನ್ ಸಿಂಗ್ ಜನಸಾಮಾನ್ಯರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ.
ಕನ್ನಡಪ್ರಭ ವಾರ್ತೆ ಹಲಗೂರು
ತನ್ನ ದೂರದೃಷ್ಟಿ ಆಡಳಿತದ ಮೂಲಕ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಯತ್ತ ತಂದು ನಿಲ್ಲಿಸಿದ ಕೀರ್ತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ತಾಲೂಕು ಅಧ್ಯಕ್ಷ ಕೆ.ಎಂ.ಮೋಹನ್ ಕುಮಾರ್ ತಿಳಿಸಿದರು.ನಗರದ ಪ್ರಮುಖ ವೃತ್ತದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಅತ್ಯಂತ ಯಶಸ್ವಿಯಾಗಿ ಡಾ.ಮನಮೋಹನ್ ಸಿಂಗ್ ಮುನ್ನಡೆಸಿದ್ದರು ಎಂದರು.
ಮುಖಂಡ ಬಾಳೆಹೊನ್ನಿಗ ಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಉತ್ತಮ ಆರ್ಥಿಕ ತಜ್ಞರನ್ನು ಕಳೆದುಕೊಂಡಿದ್ದು, ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ದೇಶದ ಗ್ರಾಮೀಣ ಪ್ರದೇಶದ ಬಡಜನರ ವಲಸೆ ತಪ್ಪಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯ್ದೆ ಸೇರಿದಂತೆ ಹಲವಾರು ಜನಪರ ಯೋಜನೆಗಳ ಮೂಲಕ ಮನಮೋಹನ್ ಸಿಂಗ್ ಜನಸಾಮಾನ್ಯರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದು ಸ್ಮರಿಸಿಕೊಂಡರು.ಗ್ರಾಪಂ ಸದಸ್ಯರಾದ ಜಮೀಲ್ ಪಾಷಾ, ತೇಜುಕುಮಾರ್, ಮುಖಂಡರಾದ ಶ್ರೀನಿವಾಸಾಚಾರಿ, ಜೀವನ್ ಕುಮಾರ್, ಅಮರ್, ಎಸ್.ಸಿ.ಜಗದೀಶ್, ಜಿ.ಕುಮಾರ್, ಪ್ರಕಾಶ್, ನಾಗಸಿದ್ದಯ್ಯ, ಕೆ.ಬಿ.ಜಯಶಂಕರ್, ಯಶವಂತ್ ರಾಮಲಿಂಗ ನಾಯಕ್, ಜಯರಾಮು, ದಾಸಬೋಯಿ ಭಾಗವಹಿಸಿದ್ದರು.