ದೇಶಕ್ಕೆ ಮನಮೋಹನ್‌ ಸಿಂಗ್‌ ಕೊಡುಗೆ ಅಪಾರ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ

| Published : Dec 28 2024, 01:01 AM IST / Updated: Dec 28 2024, 12:58 PM IST

ದೇಶಕ್ಕೆ ಮನಮೋಹನ್‌ ಸಿಂಗ್‌ ಕೊಡುಗೆ ಅಪಾರ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶಕ್ಕೆ ಇಂದು ಭಾವನಾತ್ಮಕ ಗಳಿಗೆ. ದೇಶದ ಆರ್ಥಿಕ, ಸಂವೇದನಾಶೀಲ, ಮೃದು ಭಾಷಿ ಪ್ರಧಾನಿ ಸಾಧಾರಣ ವ್ಯಕ್ತಿಯ ಕನಸಿಗೆ ಆಶಾಕಿರಣವಾಗಿದ್ದ ಡಾ.ಮನಮೋಹನ್ ಸಿಂಗ್ ಇಂದು ನಮ್ಮ ಮಧ್ಯೆ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸಂತಾಪ ಸೂಚಿಸಿದರು.

 ಬೆಳಗಾವಿ : ಇಡೀ ದೇಶಕ್ಕೆ ಇಂದು ಭಾವನಾತ್ಮಕ ಗಳಿಗೆ. ದೇಶದ ಆರ್ಥಿಕ, ಸಂವೇದನಾಶೀಲ, ಮೃದು ಭಾಷಿ ಪ್ರಧಾನಿ ಸಾಧಾರಣ ವ್ಯಕ್ತಿಯ ಕನಸಿಗೆ ಆಶಾಕಿರಣವಾಗಿದ್ದ ಡಾ.ಮನಮೋಹನ್ ಸಿಂಗ್ ಇಂದು ನಮ್ಮ ಮಧ್ಯೆ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸಂತಾಪ ಸೂಚಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಅವರನ್ನು ಕೆಲಸದ‌ ಮೂಲಕ ದೇಶದ ಇಡೀ ಸಾಮಾನ್ಯ ಜನತೆ ಅವರ ನೆನಪಿಡುತ್ತದೆ. ದೇಶದ ಅರ್ಥ ವ್ಯವಸ್ಥೆ ಅಭಿವೃದ್ದಿಪಡಿಸಿದರು. ದೇಶವನ್ನು ಒಂದು ಗೌರವ ಸ್ಥಾನದಲ್ಲಿ ನಿಲ್ಲಿಸಿದ್ದು ಮನಮೋಹನ್ ಸಿಂಗ್. ಇದಕ್ಕೆ ಇಡೀ ಜಗತ್ತೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಸೋನಿಯಾ ಜೊತೆ ಸೇರಿ ಕಾಂಗ್ರೆಸ್ ಐಡಿಯಾ ಬೆಳೆಸಿದವರು. ಜನಸಮಾನ್ಯರಿಗೆ ಅನುಕೂಲಕರ ಯೋಜನೆ ಜಾರಿ ಮಾಡಿದವರು‌. ಶಿಕ್ಷಣ, ಆಹಾರ ಕಾಯ್ದೆ ತಂದವರು. ಅವರ ಕೆಲಸ ಒಂದು ದಿನದಲ್ಲಿ ಎಣಿಸಲು ಸಾಧ್ಯವಿಲ್ಲ. ಅವರ ಕೊಡುಗೆಯನ್ನು ಶತಮಾನ ಕಳೆದರೂ ತೀರಿಸಲು ಸಾಧ್ಯವಿಲ್ಲ ಎಂದರು.

ಪ್ರೆಸ್‌ಗೆ ಉತ್ತರ ನೀಡಿದ ಕೊನೆಯ ಪ್ರಧಾನಿ ಮನಮೋಹನ್ ಸಿಂಗ್‌ ಅವರ ಕಾರ್ಯ ನಮಗೆ ಮಾರ್ಗದರ್ಶಕವಾಗಿದೆ. ನನಗೆ ಅವರು ಗುರು ಆಗಿದ್ದರು, ತಂದೆ ಸಮಾನರಾಗಿದ್ದರು, ಗಾರ್ಡಿಯನ್ ಆಗಿದ್ದರು ಎಂದು ಸ್ಮರಿಸಿದ ಸುರ್ಜೆವಾಲಾ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.