ಸಾರಾಂಶ
ಕಿಕ್ಕೇರಿ: ಹೈನುಗಾರಿಕೆಯ ಒಂದು ಭಾಗವಾದ ಮನ್ಮುಲ್ ಹಾಗೂ ಡೇರಿ ಒಂದೆ ನಾಣ್ಯದ ಎರಡು ಮುಖವಿದ್ದಂತೆ ಎಂದು ಮನ್ಮುಲ್ ನಿರ್ದೇಶಕ ಡಾಲುರವಿ ಹೇಳಿದರು. ಸಮೀಪದ ಕರೋಟಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಹೈನುಗಾರಿಕೆ ರೈತರ ಆರ್ಥಿಕ ಸಂಕಷ್ಟವನ್ನು ದೂರ ಮಾಡುವ ಕಸುಬಾಗಿದೆ. ಜನರಿಗೆ ನಿತ್ಯ ಹಣದ ಕೊರತೆಗೆ ಸಹಕಾರಿಯಾಗಲಿದೆ ಎಂದರು.
ಹಾಲು ಉತ್ಪಾದಕರು ಕಲಬೆರಕೆ ಹಾಲು ಸರಬರಾಜು ಮಾಡದೆ ಸಭೆಗಳಿಗೆ ಕಡ್ಡಾಯವಾಗಿ ರೈತರು ಹಾಜರಾಗಬೇಕು. ಲೆಕ್ಕಪತ್ರ ವ್ಯವಹಾರದಲ್ಲಿ ಸಂದೇಹವಿದ್ದಲ್ಲಿ ಪ್ರಶ್ನಿಸಿ ಸಲಹೆ ಇದ್ದಲ್ಲಿ ತಿಳಿಸಬೇಕು. ಸಂಘವನ್ನು ಗೊಂದಲದ ಗೂಡಾಗಿಸಿದೆ ಅಭಿವೃದ್ಧಿಗೆ ಶ್ರಮಿಸಿ ಎಂದು ತಿಳಿಸಿದರು.ಒಕ್ಕೂಟದಿಂದ ರಿಯಾಯಿತಿ ಹಾಗೂ ಗುಣಮಟ್ಟದಲ್ಲಿ ಸರಬರಾಜು ಮಾಡುವ ಪೋಷಕಾಂಶವುಳ್ಳ ಪಶು ಆಹಾರ, ಖನಿಜ ಮಿಶ್ರಣ ಆಹಾರವನ್ನು ಖರೀದಿಸಬೇಕು. ಪಶುಗಳ ಆರೋಗ್ಯ ಕಾಪಾಡಬೇಕು. ಒಕ್ಕೂಟದಿಂದ ಸಿಗುವ ಸವಲತ್ತು, ಸೌಲಭ್ಯ ಪಡೆದು ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ಮಾರ್ಗವಿಸ್ತರಣಾಧಿಕಾರಿ ಭಾವನಾ, ಅಧ್ಯಕ್ಷೆ ರತ್ನಮ್ಮ ದಿನೇಶ್, ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ, ನಿರ್ದೇಶಕರಾದ ರತ್ನಮ್ಮ, ಶಿವಮ್ಮ, ವಿಶಾಲಾಕ್ಷಿ, ಮಂಜುಳಾ, ರಾಧಾ, ಗಿರಿಜಾ, ಶಾಂತಮ್ಮ, ಮಂಜುಳ, ನಂಜಮ್ಮ, ಶಕುಂತಲ, ಗ್ರಾಪಂ ಸದಸ್ಯ ಅನಿಲ್, ಕಾರ್ಯದರ್ಶಿ ಎಂ.ಎಸ್ ಮಂಜುಳ, ಹಾಲು ಪರೀಕ್ಷಕಿ ನಾಗಮ್ಮ ಪಾಪೇಗೌಡ, ಮುಖಂಡರಾದ ಹುಚ್ಚೇಗೌಡ, ಡೇರಿ ರಾಜಶೇಖರ್, ಕರೋಟಿ ತಮ್ಮೆಗೌಡ, ಗುಂಡ ಉಪಸ್ಥಿತರಿದ್ದರು.