ಮನ್‌ಮುಲ್: ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟ

| Published : Feb 02 2025, 11:48 PM IST

ಸಾರಾಂಶ

ಮಂಡ್ಯ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ ತಾಲೂಕುಗಳ ಫಲಿತಾಂಶ ಘೋಷಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಾಗಾಗಿ ತಾಲೂಕುಗಳಲ್ಲಿರುವ ಐದು ಸ್ಥಾನಗಳ ಮತ ಎಣಿಗೆ ಪೂರ್ಣಗೊಂಡಿದ್ದು, ಫಲಿತಾಂಶ ಘೋಷಣೆಯಷ್ಟೇ ಬಾಕಿ ಉಳಿದಿದೆ. ಉಳಿದಂತೆ ಮಂಡ್ಯ, ಪಾಂಡವಪುರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದ್ದರೆ ನಾಗಮಂಗಲ, ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಆಡಳಿತ ಮಂಡಳಿಯ ೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಏಳು ಸ್ಥಾನಗಳ ಫಲಿತಾಂಶ ಮಾತ್ರ ಪ್ರಕಟಗೊಂಡಿದ್ದು, ಇನ್ನೂ ಐದು ಸ್ಥಾನಗಳ ಫಲಿತಾಂಶ ಘೋಷಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಜಿಲ್ಲೆಯ ಏಳು ತಾಲೂಕುಗಳ ಪೈಕಿ ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ ತಾಲೂಕುಗಳ ಫಲಿತಾಂಶ ಘೋಷಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಾಗಾಗಿ ತಾಲೂಕುಗಳಲ್ಲಿರುವ ಐದು ಸ್ಥಾನಗಳ ಮತ ಎಣಿಗೆ ಪೂರ್ಣಗೊಂಡಿದ್ದು, ಫಲಿತಾಂಶ ಘೋಷಣೆಯಷ್ಟೇ ಬಾಕಿ ಉಳಿದಿದೆ. ಉಳಿದಂತೆ ಮಂಡ್ಯ, ಪಾಂಡವಪುರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದ್ದರೆ ನಾಗಮಂಗಲ, ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ.

ಮಂಡ್ಯ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಯು.ಸಿ.ಶಿವಕುಮಾರ್ ಆಯ್ಕೆಯಾಗಿದ್ದರೆ, ನಾಗಮಂಗಲ ತಾಲೂಕಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ ಹಾಗೂ ಶ್ರೀರಂಗಪಟ್ಟಣ ತಾಲೂಕಿನಿಂದ ಮನ್‌ಮುಲ್ ಅಧ್ಯಕ್ಷ ಬಿ.ಬೋರೇಗೌಡ ಹಾಗೂ ಪಾಂಡವಪುರ ತಾಲೂಕಿನಿಂದ ಸಿ.ಶಿವಕುಮಾರ್ ಅವರು ಚುನಾಯಿತರಾಗಿದ್ದಾರೆ. ನಾಲ್ಕು ಕ್ಷೇತ್ರಗಳ ಫಲಿತಾಂಶದಲ್ಲಿ ಜೆಡಿಎಸ್ ೩ ಹಾಗೂ ಕಾಂಗ್ರೆಸ್ ೪ ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.

ಗೆಲುವು ನಮ್ಮದೇ: ಎಸ್.ಪಿ.ಸ್ವಾಮಿ, ಹರೀಶ್‌ಬಾಬು

ಮದ್ದೂರು ಕ್ಷೇತ್ರದ ಚುನಾವಣೆ ಫಲಿತಾಂಶವನ್ನು ನ್ಯಾಯಾಲಯ ತಡೆಹಿಡಿದಿದ್ದರೂ ಅಭ್ಯರ್ಥಿಗಳಾದ ಎಸ್.ಪಿ.ಸ್ವಾಮಿ ಮತ್ತು ಹರೀಶ್‌ಬಾಬು ಅವರು ಗೆಲುವು ವಿಶ್ವಾಸದಲ್ಲಿದ್ದರು. ನಮಗೆ ಮತದಾರರ ಮೇಲೆ ನಂಬಿಕೆ, ವಿಶ್ವಾಸವಿದ್ದು,ಆವರು ನಮ್ಮನ್ನು ಕೈಬಿಡುವುದಿಲ್ಲವೆಂದು ನಂಬಿದ್ದೇವೆ. ನಮಗೆ ಯಾವುದೇ ಆತಂಕ, ಭಯ ಇಲ್ಲ. ಫಲಿತಾಂಶ ಬರುವವರೆಗೂ ಕಾಯುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹಿಂದಿನ ಆಡಳಿತ ಮಂಡಳಿಯಲ್ಲಿದ್ದವರ ಪೈಕಿ ಮಂಡ್ಯದಿಂದ ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್, ಯು.ಸಿ.ಶಿವಕುಮಾರ್, ಶ್ರೀರಂಗಪಟ್ಟಣದಿಂದ ಬಿ.ಬೋರೇಗೌಡ ಮರು ಆಯ್ಕೆಯಾಗಿದ್ದರೆ, ನಾಗಮಂಗಲದಿಂದ ಆಯ್ಕೆಯಾಗಿದ್ದ ನೆಲ್ಲೀಗೆರೆ ಬಾಲು, ಪಾಂಡವಪುರದಿಂದ ಚುನಾಯಿತರಾಗಿದ್ದ ಕಾಡೇನಹಳ್ಳಿ ರಾಮಚಂದ್ರು ಪರಾಭವಗೊಂಡಿದ್ದಾರೆ.

ನಾಲ್ಕು ಕ್ಷೇತ್ರಗಳ ಫಲಿತಾಂಶದ ವಿವರ

ಮಂಡ್ಯ

ಅಭ್ಯರ್ಥಿಗಳು ಪಡೆದ ಮತಗಳು

ಬಿ.ಆರ್.ರಾಮಚಂದ್ರ ೧೪೯

ಎಂ.ಎಸ್.ರಘುನಂದನ್ ೧೪೩

ಯು.ಸಿ.ಶಿವಕುಮಾರ್ ೧೩೬

ಕೆ.ವಿಜಯಕುಮಾರ್ ೬೫

ಕೆ.ರಾಜು ೬೧ಶ್ರೀರಂಗಪಟ್ಟಣ

ಅಭ್ಯರ್ಥಿಗಳು ಪಡೆದ ಮತಗಳು

ಬಿ.ಬೋರೇಗೌಡ ೫೧

ಕೃಷ್ಣೇಗೌಡ ೦೫

ಎಂ.ಕಿಶೋರ್ (ಕಿರಣ್) ೦೧ನಾಗಮಂಗಲ

ಅಭ್ಯರ್ಥಿಗಳು ಪಡೆದ ಮತಗಳು

ಎನ್.ಅಪ್ಪಾಜಿಗೌಡ ೧೭೦

ಲಕ್ಷ್ಮೀನಾರಾಯಣ ೧೩೩

ನೆಲ್ಲೀಗೆರೆ ಬಾಲು ೭೬

ದೇವೇಗೌಡ ೭೩ಪಾಂಡವಪುರ

ಅಭ್ಯರ್ಥಿಗಳು ಪಡೆದ ಮತಗಳು

ಸಿ.ಶಿವಕುಮಾರ್ ೯೮

ಕೆ.ರಾಮಚಂದ್ರ ೨೫