ದಿ.ಮನೋಹರ ತಹಶೀಲ್ದಾರ ಆತ್ಮಸಾಕ್ಷಿಯಿಂದ ರಾಜಕಾರಣದಲ್ಲಿ ಹೆಸರಾದವರು

| Published : Nov 22 2025, 02:30 AM IST

ದಿ.ಮನೋಹರ ತಹಶೀಲ್ದಾರ ಆತ್ಮಸಾಕ್ಷಿಯಿಂದ ರಾಜಕಾರಣದಲ್ಲಿ ಹೆಸರಾದವರು
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ವರ್ಗದ ಧ್ವನಿಯಾಗಿ, ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿ, ತಾಲೂಕಿನ ಅಭಿವೃದ್ಧಿಯಲ್ಲಿ ಅನುಕರಣೀಯವಾಗಿ ಸೇವೆ ಸಲ್ಲಿಸಿದ ಮಾಜಿ ಸಚಿವ ದಿ.ಮನೋಹರ ತಹಶೀಲ್ದಾರ ಆತ್ಮಸಾಕ್ಷಿಯಿಂದ ರಾಜಕಾರಣದಲ್ಲಿ ಹೆಸರಾದವರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾನಗಲ್ಲ: ಹಿಂದುಳಿದ ವರ್ಗದ ಧ್ವನಿಯಾಗಿ, ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿ, ತಾಲೂಕಿನ ಅಭಿವೃದ್ಧಿಯಲ್ಲಿ ಅನುಕರಣೀಯವಾಗಿ ಸೇವೆ ಸಲ್ಲಿಸಿದ ಮಾಜಿ ಸಚಿವ ದಿ.ಮನೋಹರ ತಹಶೀಲ್ದಾರ ಆತ್ಮಸಾಕ್ಷಿಯಿಂದ ರಾಜಕಾರಣದಲ್ಲಿ ಹೆಸರಾದವರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಶುಕ್ರವಾರ ಹಾನಗಲ್ಲ ತಾಲೂಕಿನ ಅಕ್ಕಿವಳ್ಳಿಯಲ್ಲಿ ದಿ. ಮನೋಹರ ತಹಶೀಲ್ದಾರ ಅವರ ಮೊದಲನೇ ಪುಣ್ಯ ಸ್ಮರಣೋತ್ಸವ ಸಂದರ್ಭದಲ್ಲಿ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಎಂದೂ ಓಲೈಕೆ ರಾಜಕಾರಣಕ್ಕೆ ಮನಸ್ಸು ಮಾಡದೇ, ತಾಲೂಕಿನ ಅಭಿವೃದ್ಧಿಯ ದೂರದೃಷ್ಟಿ ನಾಯಕರಾಗಿದ್ದರು. ಎಂದೂ ದ್ವೇಷದ ರಾಜಕಾರಕ್ಕೆ ಮುಂದಾಗಲಿಲ್ಲ. ವಿರೋಧ ಪಕ್ಷದಲ್ಲಿದ್ದ ದಿ.ಸಿ.ಎಂ.ಉದಾಸಿ ಅವರ ವಿರುದ್ಧವಾಗಲಿ ಅಥವಾ ದ್ವೇಷದ ರಾಜಕಾರಣವನ್ನಾಗಲಿ ಎಂದೂ ಮಾಡಲಿಲ್ಲ. ತಾಲೂಕಿನ ಜನತೆಯ ಹೃದಯಲ್ಲಿರುವ ಮನೋಹರ ತಹಶೀಲ್ದಾರ ರಾಜಕಾರಣ ಒಂದು ಇತಹಾಸ ಎಂದರು. ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಅಧಿಕಾರ ಇಲ್ಲದಾಗ ಜನ ನಾಯಕರನ್ನು ಗೌರವಿಸಿದರೆ ಅದೆ ನಿಜವಾದ ನಾಯಕತ್ವ. ಸರಳ ಸಜ್ಜನಿಕೆಯ ಧೀಮಂತ ನಾಯಕ ಮನೋಹರ ತಹಶೀಲ್ದಾರ ನೆಚ್ಚಿನ ರಾಜಕಾರಣಿಯಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ ಎಂದರು. ಬೊಮ್ಮನಹಳ್ಳಿಯ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮಿಗಳು, ಮಠ ಮಂದಿರಗಳ ಬಗೆಗೆ ಗೌರವ ಭಕ್ತಿ ಉಳ್ಳವರಾಗಿದ್ದ ಮನೋಹರ ತಹಶೀಲ್ದಾರ ಎಂದು ಮಠಗಳಲ್ಲಿ ರಾಜಕಾರಣ ಮಾಡಲಿಲ್ಲ. ಅತ್ಯಂತ ಸರಳ ವ್ಯಕ್ತಿತ್ವದ ಅವರು ಧರ್ಮ ಸಂಸ್ಕಾರ ಉಳ್ಳವರಾಗಿ ಹಾನಗಲ್ಲ ತಾಲೂಕಿನ ಜನತೆಯನ್ನು ಗೌರವದಿಂದ ಕಾಣುತ್ತಿದ್ದರು ಎಂದರು. ಮಾಜಿ ಜಿಪಂ ಸದಸ್ಯ ರಾಘವೇಂದ್ರ ತಹಶೀಲ್ದಾರ ಅಧ್ಯಕ್ಷತೆವಹಿಸಿದ್ದರು. ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು, ನಿವೃತ್ತ ಶಿಕ್ಷಕ ಕೆ.ಎಲ್. ದೇಶಪಾಂಡೆ, ಮಾಜಿ ಶಾಸಕ ಶಿವರಾಜ ಸಜ್ಜನ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ ಮಾತನಾಡಿದರು. ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಹೋತಹಳ್ಳಿಯ ಶಂಕರಾನಂದ ಮಹಶ್ವಾಮಿಗಳು, ಕೂಡಲದ ಗುರುಮೇಹೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ರತ್ನಮ್ಮ ಮನೋಹರ ತಹಸೀಲ್ದಾರ, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮುಖಂಡರಾದ ಮಹೇಶ ಕಮಡೊಳ್ಳಿ, ಅಜ್ಜಯ್ಯಸ್ವಾಮಿ ಆರಾಧ್ಯಮಠ, ರಾಜಶೇಖರ ಕಟ್ಟೇಗೌಡರ, ವೆಂಕಟೇಶ ತಹಶೀಲ್ದಾರ, ಮಾಲತೇಶ ಸೊಪ್ಪಿನ, ಕೃಷ್ಣ ಈಳಿಗೇರ, ಕಲ್ಯಾಣಕುಮಾರ ಶೆಟ್ಟರ, ಮಲ್ಲಿಕಾರ್ಜುನ ಅಗಡಿ, ಅಣ್ಣಪ್ಪ ಚಾಕಾಪುರ, ನಾಗರಾಜ ಉದಾಸಿ, ಶಿವಲಿಂಗಪ್ಪ ತಲ್ಲೂರ, ಪದ್ಮನಾಭ ಕುಂದಾಪೂರ, ಬಸವರಾಜ ಹಾದಿಮನಿ, ಮಹದೇವಪ್ಪ ಬಾಗಸರ್, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಬಿ.ಎಸ್.ಅಕ್ಕಿವಳ್ಳಿ, ಎ.ಎಸ್.ಬಳ್ಳಾರಿ, ಕೆ.ಟಿ.ಕಲಗೌಡರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಖುರ್ಚಿ ಉಳಿಸಿಕೊಳ್ಳುವುದೇ ಈಗ ರಾಜಕಾರಣಿಗಳ ಸಾಧನೆಯಾಗಿದೆ. ಮುಖ್ಯಮಂತ್ರಿ ಖುರ್ಚಿಗಾಗಿ ರಾಜಕಾರಣಿಗಳು ಹೇಳುವ ಹೇಳಿಕೆಗಳು ಪೈಪೋಟಿಯಲ್ಲಿವೆ. ಇದರಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಪೈಪೋಟಿ ಅಧಿಕಾರದ ದಾಹದಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ಅನಾಥವಾಗಿದೆ. ಖುರ್ಚಿ ಉಳಿಸಿಕೊಂಡರೆ ಅದೇ ಅವರ ಸಾಧನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.