ಸಾರಾಂಶ
ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ವತಿಯಿಂದ ಮಣೂರು ಪಡುಕರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಶತಶತಮಾನಗಳಿಂದ ಶೋಷಣೆಗೆ ಒಳಗಾದ ಹೆಣ್ಣು ಸಂಕಷ್ಟದ ಬದುಕನ್ನು ಅನುಭವಿಸುತ್ತಾ ತನ್ನ ಅಸ್ತಿತ್ವಕ್ಕೆ ಹೋರಾಟ ವಿಶ್ವಾದ್ಯಂತ ನಡೆಸುತ್ತಾ ಬಂದಿದ್ದಾಳೆ. ನಾಗರಿಕತೆಯ ಕಾಲದಿಂದಲೂ ಹೆಣ್ಣು ತುಳಿತಕ್ಕೆ ಒಳಗಾಗುತ್ತಾ ತನಗಾದ ಅನ್ಯಾಯವನ್ನು ಬಚ್ಚಿಟ್ಟುಕೊಂಡು ತನ್ನ ವಂಶವನ್ನು ಬೆಳೆಸುತ್ತಾ ಬಂದ ಸ್ತ್ರಿ ಮಾನವ ಕುಲದ ಕುಲಸ್ತ್ರಿ ಆಗಿದ್ದಾಳೆ ಎಂದು ಕೋಟದ ಸಂಯುಕ್ತ ಪ್ರೌಢಶಾಲಾ ಮುಖ್ಯಶಿಕ್ಷಕ ವಿವೇಕಾನಂದ ವಿ. ಗಾಂವ್ಕರ ಹೇಳಿದರು.ಶನಿವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ವತಿಯಿಂದ ಮಣೂರು ಪಡುಕರೆಯಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರದೇವತಾ ಎಂಬ ಶ್ಲೋಕದಂತೆ ಹೆಣ್ಣು ಎಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ಪೂಜಿತರಾಗುತ್ತಾರೆ ಎಂಬ ಮಹತ್ತರವಾದ ನಂಬಿಕೆ ಇದೆ. ಮಹಿ ಮತ್ತು ಇಳೆ ಎನ್ನುವುದು ಭೂಮಿಗೆ ಇರುವ ಹೆಸರು ಹಾಗೆ ಅದು ಒಂದಾದರೆ ಎರಡು ಭೂಮಿಯಾಗುಂತೆ ಮಹಿಳೆ ಶಕ್ತಿ ಸ್ವರೂಪಣಿ. ಹಾಗಾಗಿ ಇವತ್ತು ಎಲ್ಲ ಹೆಣ್ಣು ಮಕ್ಕಳಿಗೂ ಮಹಿಳೆಯರಿಗೂ ವಿಶೇಷವಾಗಿ ಅಭಿವಂದನೆ ಸಲ್ಲಿಸಬೇಕಾದ ಕರ್ತವ್ಯವಾಗಿದೆ ಎಂದವರು ಹೇಳಿದರು.ಇದೇ ಸಂದರ್ಭದಲ್ಲಿ ಮಹಿಳಾ ಶಿಕ್ಷಕರನನ್ನು ಹಾಗೂ ಮಹಿಳಾ ಸಿಬಂಧಿಗಳಿಗೆ ಪುಷ್ಪ ನೀಡಿ, ಗೌರವದ ಉಡುಗೊರೆ ಸಲ್ಲಿಸಿಕೊಂಡು ಅರಶಿನ ಕುಂಕುಮದ ಸೇವೆಯನ್ನು ಸಲ್ಲಿಸಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ಸಹಶಿಕ್ಷಕರಾದ ರಾಮದಾಸ್ ನಾಯಕ್ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕರಾದ ಮಂಜುನಾಥ ಹೊಳ್ಳ ಶಿಕ್ಷಕರಾದ ರಾಜೀವ್, ಚಂದ್ರಶೇಖರ ಶೆಟ್ಟಿ, ಕುಮಾರ್ ಉಪಸ್ಥಿತರಿದ್ದರು. ಸಹ ಶಿಕ್ಷಕ ಹೆರಿಯ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.