ಸಾರಾಂಶ
ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ಮಣೂರು ಸ್ನೇಹಕೂಟದ ೯ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಜೆಸಿಐ ಸಂಸ್ಥೆಯ ಅಂತಾರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಅಕ್ಷತಾ ಗಿರೀಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಸಂಘಟನೆ ಕಟ್ಟುವುದು ಸುಲಭ, ಆದ್ರೆ ಅದನ್ನು ನಿರಂತರವಾಗಿ ಕ್ರಿಯಾತ್ಮಕವಾಗಿ ಉಳಿಸಿ ಕೊಂಡೊಯ್ಯುವುದು ಸವಾಲಿನ ಕಾರ್ಯ ಎಂದು ಜೆಸಿಐ ಸಂಸ್ಥೆಯ ಅಂತಾರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಅಕ್ಷತಾ ಗಿರೀಶ್ ಹೇಳಿದರು.ಅವರು ಭಾನುವಾರ ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ಮಣೂರು ಸ್ನೇಹಕೂಟದ ೯ನೇ ವರ್ಷದ ವಾರ್ಷಿಕೋತ್ಸವವನ್ನು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸ್ನೇಹಕೂಟ ಎಂಬ ಮಹಿಳಾ ಸಂಘಟನೆ ಸಾಂಸ್ಕೃತಿಕ ಸಾಮಾಜಿಕ ಶೈಕ್ಷಕ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸಿ ಇದೀಗ ನಿರಂತರ ಚಟುವಟಿಕೆಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಂಘಟನೆಯು ಸಮಾಜದಲ್ಲಿ ಮಹಿಳೆ ಹೇಗೆ ಮುಂಚೂಣಿಗೆ ನಿಲ್ಲಬೇಕಂಬುವುದನ್ನು ತೋರಿಸಿಕೊಟ್ಟಿದೆ. ಇಂಥಹ ಸಂಘಸಂಸ್ಥೆಗಳು ಜನಸಾಮಾನ್ಯರ ನಡುವೆ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನೀಡಲಿ ಎಂದು ಆಶಿಸಿದರು.ಇದೇ ವೇಳೆ ಸ್ನೇಹಕೂಟದ ಹಿರಿಯ ಸದಸ್ಯರಾದ ಶ್ರೀದೇವಿ ಹಂದೆ, ಶಿವಪ್ರಭೆ ಅಲ್ಸೆ, ಅನ್ನಪೂರ್ಣ ಹಂದೆ, ಸಾವಿತ್ರಿ ಮಯ್ಯ ಅವರನ್ನು ಸನ್ಮಾನಿಸಲಾಯಿತು.ಪ್ರತಿಭಾವಂತರಿಗೆ ವಿದ್ಯಾರ್ಥಿವೇತನ, ಆಶಕ್ತರಿಗೆ ದಿ.ರೇವತಿ ಮಧ್ಯಸ್ಥ ಸ್ಮಾರಕ ನಿಧಿಯನ್ನು ವಿತರಿಸಲಾಯಿತು.ಸ್ನೇಹಕೂಟದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತವರಿಗೆ ಬಹುಮಾನವನ್ನು ಸಮಾಜಸೇವಕಿ ಪ್ರೇಮ ಶೆಟ್ಟಿ ವಿತರಿಸಿದರು.ಮುಖ್ಯ ಅಭ್ಯಾಗತರಾಗಿ ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್. ಕುಂದರ್, ನಿವೃತ್ತ ಶಿಕ್ಷಕಿ ಸುವರ್ಣಲತಾ ಉಪಸ್ಥಿತರಿದ್ದರು. ಸಹಸಂಚಾಲಕಿ ವನಿತಾ ಉಪಾಧ್ಯಾ ಸನ್ಮಾನಿತರನ್ನು ಪರಿಚಯಿಸಿದರು.ಸ್ನೇಹಕೂಟದ ಸಂಚಾಲಕಿ ಭಾರತಿ ವಿ. ಮಯ್ಯ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಸಹಸಂಚಾಲಕಿ ಸುಜಾತ ಬಾಯರಿ, ಸದಸ್ಯೆ ಸ್ಮಿತಾರಾಣಿ ಕಾರ್ಯಕ್ರಮ ನಿರೂಪಿಸಿದರು. ಗಾಯಿತ್ರಿ ಹೊಳ್ಳ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಜಯಂತಿ ಕೋಟ್ಯಾನ್ ಬಳಗ ಗಾನಗುಂಜನ, ಸ್ನೇಹಕೂಟದ ಸದಸ್ಯರಿಂದ ನೃತ್ಯರೂಪಕ ಜರುಗಿತು.