ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಾನವನಿಗೆ ಮಾನಸಿಕ ಸ್ಥೈರ್ಯ ತುಂಬುವ ಶಕ್ತಿ ಭಾರತೀಯ ಶಾಸ್ತ್ರಗಳಲ್ಲಿದ್ದು, ಹಸ್ತಪ್ರತಿಶಾಸ್ತ್ರ ಭಾರತದ ಅಸ್ಮಿತೆಯ ಪ್ರತೀಕವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ನಡೆದ ಹಸ್ತಪ್ರತಿಶಾಸ್ತ್ರ ಮತ್ತು ಗ್ರಂಥ ಸಂಪಾದನೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ತಾಳೆಗರಿ ಹಸ್ತಪ್ರತಿಗಳು ರಚಿಸಲ್ಪಡಬೇಕಾದರೆ 13 ತಳ ಸಮುದಾಯಗಳ ಶ್ರಮದ ಅವಶ್ಯಕತೆ ಇತ್ತು, ಅಂದು ಬರವಣೆಗೆ ತಳ ಸಮುದಾಯದಲ್ಲಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು, ದೇಶದಲ್ಲಿ ಮುದ್ರಣೋಧ್ಯಮ ಬಂದುದ್ದು ಕ್ರಿ.ಶ 1160ರಲ್ಲಿ, ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಮುದ್ರಣ ತಂತ್ರಜ್ಞಾನ ಬರುವ ಮುಂಚೆ ನಮ್ಮಲ್ಲಿ ಬರವಣಿಗೆ ಪರಂಪರೆ, ಸಾಹಿತ್ಯ ಪರಂಪರೆ, ಸಮುದಾಯ ಪರಂಪರೆಗಳು ಹೇಗಿದ್ದವು ಎಂಬುದನ್ನು ಆಯಾ ಕಾಲದ ಹಸ್ತಪ್ರತಿಗಳು ಒತ್ತಿ ಹೇಳುತ್ತವೆ ಎಂದು ತಿಳಿಸಿದರು.
ಜೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಶಾಸನ ಶಾಸ್ತ್ರ ಸೇರಿದಂತೆ ಎಲ್ಲ ಶಾಸ್ತ್ರಗಳು ಮನುಷ್ಯನನ್ನು ಶೋಷಣೆ ಮಾಡುತ್ತಿರಲಿಲ್ಲ.ನಮ್ಮೇಲ್ಲ ಶಾಸ್ತ್ರಗಳು ಮನುಷ್ಯನಿಗೆ ಮಾನಸಿಕ ಸ್ಥೈರ್ಯ ತುಂಬುವ ಶಾಸ್ತ್ರಗಳಾಗಿದ್ದವೇ ಹೊರತು ಮನುಷ್ಯನನ್ನು ಸುಲಿದು ತಿನ್ನುವ ಶಾಸ್ತ್ರಗಳಾಗಿರಲಿಲ್ಲ. ಹಸ್ತಪ್ರತಿಶಾಸ್ತ್ರದಿಂದ ದೇಶದ ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿಯಬಹುದಾಗಿದೆ, ಹಸ್ತಪ್ರತಿಗಳು ದೇಶದ ಅಸ್ಮೀತೆಯ ದಾಖಲೆಗಳಾಗಿವೆ ಎಂದು ಹೇಳಿದರು.ಬಾಗಲಕೋಟೆಯ ಟೀಕೀನಮಠ ವಚನಗಳಿಗೆ ಟೀಕುಗಳ ಮೂಲಕ ವಾಖ್ಯಾನ ಬರೆಯುವ ಮಠವಾಗಿತ್ತು. ಜಮಖಂಡಿಯಲ್ಲಿರುವ ಓಲೆಮಠ, ಓಲೇಗರಿ ಹಾಗೂ ತಾಳೆಗರಿಗಳನ್ನು ಸಂಗ್ರಹಿಸುವ ಮಠವಾಗಿತ್ತು, ಬೇಲಿಮಠ, ಓದಿಸುವ ಮಠ ಸೇರಿದಂತೆ ನಾಡಿನ ಮಠಗಳು ಜನರಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಟ್ಟಿದ್ದವು. ನಮ್ಮ ಪೂರ್ವಜರಿಗೆ ಆರೋಗ್ಯ, ರಕ್ಷಣೆ ಜೀವನ ನಡೆಸುವ ಬಗ್ಗೆ ಆಳವಾದ ಜ್ಞಾನವಿತ್ತು. ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಿ ಜ್ಞಾನ ಪಡೆದುಕೊಳ್ಳಿ ಎಂದರು.
ಪ್ರಾಚಾರ್ಯ ಎಸ್.ಎನ್.ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಸಿ ಮಾತನಾಡಿ, ವಿದ್ಯಾರ್ಥಿಗಳು ಹಸ್ತಪ್ರತ್ರಿಗಳಲ್ಲಿ ಜ್ಞಾನಸಂಸ್ಕೃತಿಯನ್ನು ಅರಿತು ಉತ್ತಮ ಬದುಕನ್ನು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.ಕನ್ನಡ ವಿಭಾಗದ ಉಪನ್ಯಾಸಕ ಸಂಗಮೇಶ ಬ್ಯಾಳಿ ಪ್ರಸ್ತಾವಿಕ ಮಾತನಾಡಿದರು. ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಐಕ್ಯೂಎಸಿ ಸಂಚಾಲಕ ಡಾ.ಬಿ.ಎಂ.ಬಡಿಗೇರ, ಸಾಂಸ್ಕೃತಿಕ ಸಂಚಾಲಕ ಸುನೀಲ ನಡಕಟ್ಟಿ, ಗ್ರಂಥಪಾಲಕ ಪತಂಗಿ, ಬಿ.ಪಿ.ನಾಯಕ್, ಡಾ.ನಂದಾ ಇಟಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮುತ್ತು ಬಡಿಗೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸದ್ದರು.
ಕೋಟ್ನಮ್ಮೇಲ್ಲ ಶಾಸ್ತ್ರಗಳು ಮನುಷ್ಯನಿಗೆ ಮಾನಸಿಕ ಸ್ಥೈರ್ಯ ತುಂಬುವ ಶಾಸ್ತ್ರಗಳಾಗಿದ್ದವೇ ಹೊರತು ಮನುಷ್ಯನನ್ನು ಸುಲಿದು ತಿನ್ನುವ ಶಾಸ್ತ್ರಗಳಾಗಿರಲಿಲ್ಲ. ಹಸ್ತಪ್ರತಿ ಶಾಸ್ತ್ರದಿಂದ ದೇಶದ ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿಯಬಹುದಾಗಿದೆ, ಹಸ್ತಪ್ರತಿಗಳು ದೇಶದ ಅಸ್ಮೀತೆಯ ದಾಖಲೆಗಳಾಗಿವೆ
ಡಾ.ವಿರೇಶ ಬಡಿಗೇರ. ಪ್ರಾಧ್ಯಾಪಕರು, ಹಸ್ತಪ್ರತಿ ಶಾಸ್ತ್ರವಿಭಾಗ ವಿವಿ, ಹಂಪಿ