ಟಿಪ್ಪು ಮಹಾರಾಜರನ್ನು ಬಂಧನದಲ್ಲಿರಿಸಿ ಸರ್ವಾಧಿಕಾರಿ ಘೋಷಣೆ ಮಾಡಿಕೊಂಡಿದ್ದ. ಕಳೆದ 500 ವರ್ಷಗಳ ಇತಿಹಾಸದಲ್ಲೇ ಮಹಾ ಧ್ವಂಸ ಕಾರ್ಯ ಮಾಡಿದ್ದಾನೆ. ಮೇಲುಕೋಟೆಯಲ್ಲಿ 700 ಜನ ಅಯ್ಯಾಂಗಾರಿಗಳನ್ನು ಕೊಲೆ ಮಾಡಲಾಗಿದೆ ಎಂದು ಇತಿಹಾಸ ಹೇಳುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹಿಂದುಗಳ ಪವಿತ್ರ ಸ್ಥಳ, ಪುಣ್ಯ ಕ್ಷೇತ್ರ ಶ್ರೀರಂಗಪಟ್ಟಣದಲ್ಲಿ ಹಲವು ದೇವಸ್ಥಾನಗಳು ಮುಸ್ಲಿಮರ ದಾಳಿಗೆ ಒಳಗಾಗಿ ನಿರ್ನಾಮವಾಗಿವೆ. ಇದರ ಪಾಳೆಯುಳಿಕೆಗಳನ್ನು ನೋಡಬಹುದು. ಇದರಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವು ಒಂದಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಮೈಸೂರು ಪ್ರಾಂತ್ಯ ಸಂಚಾಲಕ ಲೋಹಿತ್ ರಾಜ್ ಅರಸ್ ಹೇಳಿದರು.ಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿ, ಟಿಪ್ಪು ಸುಲ್ತಾನ್ ಒಬ್ಬ ಸುಲಿಗೆಕೋರ, ದಾಳಿ ಕೋರ, ಅತ್ಯಾಚಾರಿ, ಆ ಹುಚ್ಚನನ್ನು ಪಠ್ಯ ಪುಸ್ತಕದಲ್ಲಿ ಟೈಗರ್ ಎಂದು ಬಿಂಬಿಸಲಾಗುತ್ತಿದೆ. ಇದು ಇತಿಹಾಸದ ದುರ್ದೈವ ಎಂದರು.ಟಿಪ್ಪು ಮಹಾರಾಜರನ್ನು ಬಂಧನದಲ್ಲಿರಿಸಿ ಸರ್ವಾಧಿಕಾರಿ ಘೋಷಣೆ ಮಾಡಿಕೊಂಡಿದ್ದ. ಕಳೆದ 500 ವರ್ಷಗಳ ಇತಿಹಾಸದಲ್ಲೇ ಮಹಾ ಧ್ವಂಸ ಕಾರ್ಯ ಮಾಡಿದ್ದಾನೆ. ಮೇಲುಕೋಟೆಯಲ್ಲಿ 700 ಜನ ಅಯ್ಯಾಂಗಾರಿಗಳನ್ನು ಕೊಲೆ ಮಾಡಲಾಗಿದೆ ಎಂದು ಇತಿಹಾಸ ಹೇಳುತ್ತಿದೆ. ಈತನನ್ನು ಮೈಸೂರಿನ ಹುಲಿ ಎಂದು ಪಠ್ಯ ಪುಸ್ತಕದಲ್ಲಿ ಬಿಂಬಿಸಿರುವುದು ತಪ್ಪು. ನಿಜವಾದ ಟೈಗರ್ ಎಂದರೆ ಸಂಗೊಳ್ಳಿ ರಾಯಣ್ಣ ಎಂದರು.
ಜಿಹಾದಿಗಳಿಂದ ನಮ್ಮ ಹಿಂದೂ ರಾಜರ ಮೇಲೆ ಮೋಸದಿಂದ ಆಕ್ರಮಣ ಆಗಿದ್ದು, ಹಿಂದೂ ರಾಜರುಗಳನ್ನು ಮೋಸದಿಂದ ಹತ್ಯೆ ಮಾಡಲಾಗಿದೆ. ಮೂಡಲಬಾಗಿಲು ಆಂಜನೇಯಸ್ವಾಮಿ ಪಾದದ ಮೇಲೆ ಆಣೆ ನಾವು ಮಂದಿವರವನ್ನು ಕಟ್ಟುತ್ತೇವೆ. ಮತಾಂದ ಟಿಪ್ಪು ಧ್ವಂಸಗೊಳಿಸಿರುವ ದೇವಸ್ಥಾನ ಪುನರ್ ನಿರ್ಮಾಣ ಮಾಡುತ್ತೇವೆ ಎಂದರು.ಹನುಮ ಭಕ್ತಿ ರಾಷ್ಟ್ರ ಶಕ್ತಿಯನ್ನು ಒಗ್ಗೂಡಿಸುತ್ತದೆ. ಆಂಜನೇಯ ದೇವಸ್ಥಾನದ ಪುನರ್ ನಿರ್ಮಾಣದ ಸಂಕಲ್ಪಕಾಗಿ ನಾವೆಲ್ಲ ಸೇರಿದ್ದೇವೆ. ಹಿಂದೂ ಧರ್ಮವನ್ನು ತಿಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹಿಂದೂಗಳು ಜಾಗೃತರಾಗಿ ಹನುಮ ಮಾಲೆ ಹಾಕಿದರೆ ನಮ್ಮ ಬೇಡಿಕೆ ಈಡೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡ ಬಾಲರಾಜ್ ಹನುಮಾ ಮಾಲಾಧಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಡಾ. ಭಾನುಪ್ರಕಾಶ್‌ಶರ್ಮಾ, ಹಿಂದು ಜಾಗರಣಾ ವೇದಿಕೆ ಸಂಚಾಲಕ ಚಂದನ್, ಅರ್ಚಕ ಕೃಷ್ಣ ಭಟ್, ಕೇಶವಮೂರ್ತಿ, ರಂಗಸ್ವಾಮಿ, ಸೃಜನ್ ಗೌಡ, ಸೇರಿದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.ಪಟ್ಟಣ ಕೇಸರಿಮಯ:
ಬೃಹತ್ ಹನುಮ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಎಲ್ಲೆಡೆ ಕೇಸರಿ ಬಾವುಟ, ಬಂಟಿಂಗ್ಸ್ ಕಂಡು ಬಂದು ಕೇಸರಿಮಯವಾಗಿತ್ತು. ಪಟ್ಟಣಗಳಲ್ಲಿ ಪ್ರಮುಖ ರಸ್ತೆ, ಸರ್ಕಲ್ ಗಳಲ್ಲಿ ಕೇಸರಿ ಬಾವುಟ ರಾರಾಜಿಸುದ್ದವು. ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಆಂಜನೇಯಸ್ವಾಮಿ ಫ್ಲೆಕ್ಸ್, ಕಟೌಟ್ ಅಳವಡಿಸಲಾಗಿತ್ತು. ಹನುಮನ ಮೇಲಾಣೆ ಮಂದಿರವಿಲ್ಲೇ ಕಟ್ಟುವೆವು ಎಂದು ಬರಹ ಗಮನ ಸೆಳೆಯುತ್ತಿತ್ತು.ಮಸೀದಿಗೆ ಪ್ರವೇಶ ನಿರ್ಬಂಧ:
ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಮಸೀದಿ ಮುಂಭಾಗವೇ ಹನುಮ ಮಾಲಾಧಾರಿಗಳ ಯಾತ್ರೆ ಸಾಗುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಬೆಳಗ್ಗೆಯಿಂದ ಯಾತ್ರೆ ಮುಗಿಯವರೆಗೂ ಸಾರ್ವಜನಿಕರ ಪ್ರವೇಶ ಇರಲಿಲ್ಲ. ಮಸೀದಿ ಸುತ್ತಲು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಯಾತ್ರೆಯಲ್ಲಿ ಭಾಗಿಯಾಗಿದ್ದ ತುಮಕೂರು ಮೂಲದ 103 ವರ್ಷದ ಶತಯೂಷಿ ಅಜ್ಜಿ ಘೋಷಣೆಯೊಂದಿಗೆ ಗಂಜಾಂನಿಂದ ಶ್ರೀರಂಗಪಟ್ಟಣಕ್ಕೆ ಮೆರವಣಿಗೆಯಲ್ಲಿ ನಡೆದುಕೊಂಡು ಬಂದಿದ್ದು ಗಮನ ಸೆಳೆಯಿತು.