ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಹಲವು ಕಾರ್ಯಕ್ರಮ: ಪ್ರಭಾತ್‍ಕುಮಾರ್ ಸಿಂಗ್

| Published : Jan 08 2025, 12:19 AM IST

ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಹಲವು ಕಾರ್ಯಕ್ರಮ: ಪ್ರಭಾತ್‍ಕುಮಾರ್ ಸಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಯಾದವಾಡ ದಾಲ್ಮಿಯ ಕಾರ್ಖಾನೆ ಸಿ.ಎಸ್.ಆರ್ ಅಡಿಯಲ್ಲಿ ರೈತರು, ಮಹಿಳೆಯರು ಹಾಗೂ ಯುವಕರಿಗೆ ಸುತ್ತಲಿನ ಗ್ರಾಮದ ಜನರ ಜೀವನಮಟ್ಟ ಸುಧಾರಿಸಲು ಹಲವಾರು ಕಾರ್ಯಕ್ರಮ ನಡೆಸುತ್ತಿರುವುದನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು ದಾಲ್ಮಿಯ ಸಿಮೆಂಟ್ ಕಾರ್ಖಾನೆ ಬೆಳಗಾವಿ ವಿಭಾಗದ ಮುಖ್ಯಸ್ಥ ಪ್ರಭಾತ್‍ಕುಮಾರ್ ಸಿಂಗ್ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ತಾಲೂಕಿನ ಯಾದವಾಡ ಗ್ರಾಮದ ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ ಸ್ವ-ಸಹಾಯ ಸಂಘದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಸೂಮಾರು 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಕಾಮನಕಟ್ಟಿ ಗ್ರಾಮ ಪರಿವರ್ತನಾ ಸ್ವ-ಸಹಾಯ ಸಂಘಗಳ ಒಕ್ಕೂಟಕ್ಕೆ ಧನ ಸಹಾಯದ ₹4 ಲಕ್ಷ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿ, ದಾಲ್ಮಿಯಾ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಾದ ಯಾದವಾಡ, ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ, ಬುದ್ನಿಖುರ್ದ, ತೊಂಡಿಕಟ್ಟಿ ಮತ್ತು ಕುನ್ನಾಳ ಗ್ರಾಮದ ಮಹಿಳೆಯರು ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಕಾರ್ಖಾನೆಯ ಸಿಎಸ್‍ಆರ್ ಅಡಿಯಲ್ಲಿ 70 ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಆರ್ಥಿಕ ನೆರವಿಗಾಗಿ ಕಾಮನಕಟ್ಟಿ ಗ್ರಾಮ ಪರಿವರ್ತನಾ ಸ್ವ-ಸಹಾಯ ಸಂಘಗಳ ಒಕ್ಕೂಟಕ್ಕೆ ₹4 ಲಕ್ಷ ಧನಸಹಾಯವನ್ನು ಎಲ್ಲ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಬೆಳಗಾವಿಯ ಸ್ಫೂರ್ತಿ ಮಹಿಳಾ ಮಂಡಳದ ಅಧ್ಯಕ್ಷೆ ವಂದನಾಸಿಂಗ್ ಮಾತನಾಡಿ, ಮಹಿಳೆಯರ ಜೀವನಮಟ್ಟ ಅಭಿವೃದ್ಧಿಪಡಿಸಲು ಸಿ.ಎಸ್.ಆರ್ ಅಡಿಯಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಸ್ವ ಉದ್ಯೋಗ, ಸ್ವ ಸಹಾಯ ಸಂಘಗಳ ಮೂಲಕ ಸಹಾಯ ಹಾಗೂ ಸ್ವಂತ ಉದ್ಯೋಗ ಮಾಡಲು ಸಹಾಯ ಮಾಡಲಾಗುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರು.

ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಮನೀಶಕುಮಾರ್ ಮಹೇಶ್ವರ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರಾದ ಅವದೇಶಕುಮಾರ್, ಜಯಶಂಕರ್ ತಿವಾರಿ, ಅರವಿಂದಕುಮಾರ್ ಸಿಂಗ್, ಗೋಲಪನಾಥ್, ಸಮೀರಕುಮಾರ್ ಅಗರ್ವಾಲ್ ಹಾಗೂ ಕಾರ್ಖಾನೆ ಅಧಿಕಾರಿಗಳಾದ ಕಾಚಿರಾಮ್ ದಯಾಲ್, ಅಜಿತಸಿಂಗ್ ರಾಯ, ವಿಜಯಕುಮಾರ್‌ ತಿವಾರಿ, ಈರಸಂಗಯ್ಯ ಬಾಗೋಜಿಮಠ, ಶಶಿಕಾಂತ ಹಿರೇಕೊಡಿ, ಲೋಕಣ್ಣ ನಂದಗಾಂವ ಹಾಗೂ ಸ್ಫೂರ್ತಿ ಲೇಡಿಸ್ ಕ್ಲಬ್ ಸದಸ್ಯರು ಸಿ.ಎಸ್.ಆರ್ ವಿಭಾಗದ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮದ ಸ್ವ-ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಡಾ.ನೀಲಕಂಠಗೌಡ ಸ್ವಾಗತಿಸಿ ನಿರೂಪಿಸಿದರು, ರಾಮಣ್ಣಗೌಡ ಬಿರಾದರ ವಂದಿಸಿದರು.