ಅಶಾಂತಿ, ಗೊಂದಲಗಳಿಂದಾಗಿ ಹಲವರು ಸಾಹಿತ್ಯದಿಂದ ವಿಮುಖ: ಚಂದ್ರಶೇಖರ್

| Published : May 13 2024, 12:02 AM IST

ಅಶಾಂತಿ, ಗೊಂದಲಗಳಿಂದಾಗಿ ಹಲವರು ಸಾಹಿತ್ಯದಿಂದ ವಿಮುಖ: ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಸಾಮಾಜಿಕ ಕ್ರಾಂತಿ, ಅವರು ರಚಿಸಿದ ವಚನಗಳು ನಮ್ಮ ಭಾವನೆಗಳನ್ನು ಶುದ್ಧಿ ಮಾಡುವ ಮದ್ದಾಗಿವೆ. ನಿಜವಾದ ಸಾಹಿತ್ಯ ಜನರ ಬಳಿ ಹೆಚ್ಚು ಹೆಚ್ಚು ಹೋಗಬೇಕು. ಹೆಚ್ಚಿನ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಅಶಾಂತಿ, ಗೊಂದಲಗಳಿಂದಾಗಿ ನಾವು ಸಾಹಿತ್ಯದಿಂದ ವಿಮುಖರಾಗುತ್ತಿದ್ದೇವೆ ಎಂದು ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ನಗರದ ಬಂದೀಗೌಡ ಬಡಾವಣೆಯ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಡೆದ ಬಸವ ಜಯಂತಿ ಹಾಗೂ ಕವಿ ಕೆ.ಎನ್.ಪುರುಷೋತ್ತಮ ಅವರ ಚಕ್ರತೀರ್ಥ ಕೃತಿ ಸಂವಾದದಲ್ಲಿ ಮಾತನಾಡಿದರು.

ಇಂದಿನ ರಾಜಕೀಯ ಚಟುವಟಿಕೆಗಳು ಅಭಿವೃದ್ಧಿ ಚಿಂತನೆಗಳನ್ನು ಬಿಟ್ಟು ಜನರನ್ನು ಭಾವಾವೇಶಕ್ಕೆ ಒಳಗಾಗಿಸಿ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿವೆ. ಸಾಹಿತ್ಯ ಅಪ್ಪಿಕೊಳ್ಳದ ಕಾರಣದಿಂದ ಭಾವಾವೇಶಗಳು ವಿಜೃಂಭಿಸುತ್ತಿವೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಸಾಮಾಜಿಕ ಕ್ರಾಂತಿ, ಅವರು ರಚಿಸಿದ ವಚನಗಳು ನಮ್ಮ ಭಾವನೆಗಳನ್ನು ಶುದ್ಧಿ ಮಾಡುವ ಮದ್ದಾಗಿವೆ. ನಿಜವಾದ ಸಾಹಿತ್ಯ ಜನರ ಬಳಿ ಹೆಚ್ಚು ಹೆಚ್ಚು ಹೋಗಬೇಕು. ಹೆಚ್ಚಿನ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿದರು. ಇದಕ್ಕೂ ಮುನ್ನ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಸಂಘ-ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ಉಪಾಧ್ಯಕ್ಷ ಗುರುಪ್ರಸಾದ್, ಕಸಾಪ ತಾಲೂಕು ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್, ಸುಜಾತ ಕೃಷ್ಣ, ಸಾಹಿತಿಗಳಾದ ಮಧುಸೂದನ ಮದ್ದೂರು, ಭವಾನಿ ಲೋಕೇಶ್, ತಾಲೂಕು ಕಸಾಪ ಗೌರವ |ಕಾರ್ಯದರ್ಶಿ ಕೊತ್ತತ್ತಿ ರಾಜು, ಕೃತಿಕಾರ ಕೆ.ಎನ್.ಪುರುಷೋತ್ತಮ್ ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮದಲ್ಲಿ ಕವಿಗಳಾದ ಶ್ವೇತಾ.ಎಂ.ಯು, ಕಟ್ಟೆ ಕೃಷ್ಣಸ್ವಾಮಿ, ಲೋಕೇಶ್ ಕಲ್ಕುಣಿ, ಗಾನಸುಮಾ ಪಟ್ಟಸೋಮನಹಳ್ಳಿ, ಡಿ.ಕೆ.ರಾಮಯ್ಯ ಪಾಲ್ಗೊಂಡಿದ್ದರು.