ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಶಿವಾರಗುಡ್ಡ ನವೋದಯ ವಿದ್ಯಾ ಸಂಸ್ಥೆಯಲ್ಲಿ ಕೀಲಾರ ವೃತ್ತ ಮಟ್ಟದ ಕ್ರೀಡಾಕೂಟ ನಡೆಯಿತು.ಕ್ರೀಡಾಕೂಟದಲ್ಲಿ ಮಾರಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ 100 ಮೀಟರ್ ತೃತೀಯ, 400 ಮೀಟರ್ ರಿಲೇ ದ್ವಿತೀಯ, ಉದ್ದ ಜಿಗಿತ ತೃತೀಯ, ಗುಂಡು ಎಸೆತ ದ್ವಿತೀಯ, ಚಕ್ರ ಎಸೆತ ದ್ವಿತೀಯ, ಖೋಖೋ ಪ್ರಥಮ, ಥ್ರೋಬಾಲ್ ಪ್ರಥಮ ಸ್ಥಾನ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಪ್ರಥಮ, 100 ಮೀಟರ್ ತೃತೀಯ, 200 ಮೀಟರ್ ಪ್ರಥಮ, 400 ಮೀಟರ್ ರಿಲೇ ಪ್ರಥಮ, ಉದ್ದ ಜಿಗಿತ ಪ್ರಥಮ ಹಾಗೂ ದ್ವಿತೀಯ, ಎತ್ತರ ಜಿಗಿತ ತೃತೀಯ, ಚಕ್ರ ಎಸೆತ ತೃತೀಯ, ಥ್ರೋಬಾಲ್ ಪ್ರಥಮ, ಖೋ ಖೋ ದ್ವಿತೀಯ ಶಟಲ್ ಬ್ಯಾಡ್ಮಿಂಟನ್ ದ್ವಿತೀಯ, ಸ್ಥಾನ ಗಳಿಸಿದರು.ಬಾಲಕರ ವಿಭಾಗದಲ್ಲಿ ಚಾಂಪಿಯನ್ ಶಿಪ್ ಬಹುಮಾನವನ್ನು ಗಳಿಸಿದರು. ಈ ವೇಳೆ ಮುಖ್ಯ ಶಿಕ್ಷಕ ಬಿ.ಎಂ.ಲೋಕೇಶ್, ಎಸ್ಡಿಎಂಸಿ ಅಧ್ಯಕ್ಷ ಎಂ.ಸಿ.ಪ್ರಕಾಶ್, ಸದಸ್ಯರು, ಮಾರ್ಗದರ್ಶಕರಾದ ದೈಹಿಕ ಶಿಕ್ಷಣ ಶಿಕ್ಷಕಿ ರಾಧ, ಟೀಮ್ ಮ್ಯಾನೇಜರ್ ನಾಗರತ್ನ, ಕಾವ್ಯ, ಶಾಲೆ ಶಿಕ್ಷಕ ವೃಂದ ಇದ್ದರು.
ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಅರಿವು ಕಾರ್ಯಕ್ರಮಮಂಡ್ಯ:ತಾಲೂಕಿನ ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಅರಿವು ಕಾರ್ಯಕ್ರಮ ನಡೆಯಿತು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊಸಹಳ್ಳಿ- ಹಳುವಾಡಿ ವಲಯದಿಂದ ಶಾಲೆಯ ಮಕ್ಕಳಿಗೆ ಗಿಡಗಳನ್ನು ನೆಟ್ಟು ಮರಗಳನ್ನು ಉಳಿಸಿ ಪರಿಸರ ಕಾಪಾಡುವಂತೆ ಕರೆ ನೀಡಲಾಯಿತು.ತಾಲೂಕು ಯೋಜನಾಧಿಕಾರಿಗಳಾದ ಗಿರೀಶ್ ಕುಮಾರ್ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಪರಿಸರ ಬೇಕಾದರೆ ಇಂದಿನಿಂದ ಗಿಡ ನಾಟಿ ಮಾಡಬೇಕು ಎಂದರು.
ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬದ ಆಚರಣೆ ವೇಳೆ ಒಂದು ಗಿಡ ನೆಡುವ ಅಭ್ಯಾಸ ಮಾಡಿಕೊಳ್ಳಬೇಕು. ಅಲ್ಲದೇ ಮನೆ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡು ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು ಎಂದರು.ಇದೇ ವೇಳೆ ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ಭಾವಹಿಸಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಕಮಿಟಿ ಅಧ್ಯಕ್ಷಸಿದ್ದರಾಜು , ಉಪಾಧ್ಯಕ್ಷೆ ರಶ್ಮಿ, ಕಾರ್ಯದರ್ಶಿ ವಿಜಯ, ಸದಸ್ಯರಾದ ಸುರೇಶ, ಸತೀಶ್ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಕೃಷಿ ಮೇಲ್ವಿಚಾರಕ ಲೋಕೇಶ್, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿ, ತಂಡ ಸದಸ್ಯರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))