ಸಾರಾಂಶ
ಕನ್ನಡ ಪ್ರಭ ವಾರ್ತೆ, ಹನೂರು
ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಾಣೂರು ಹೊರವಲಯದ ಆದಿಜಾಂಬವ ಮಠದ ಆವರಣದಲ್ಲಿ ಪುರಾಣ ಪ್ರಸಿದ್ಧ ಆದಿಜಾಂಬವ ಮುನಿ ಮಠದ ಮಾರಮ್ಮ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.ಪ್ರತಿ ವರ್ಷ ಕಾರ್ತಿಕಮಾಸದ ಕೊನೆಯಲ್ಲಿ ಜರುಗುವ ಕೊಡೋತ್ಸವವು ಬಾಣೂರು ಗ್ರಾಮದ ಸೇರಿದಂತೆ ಸುತ್ತಮುತ್ತಲಿನ 28 ಹಳ್ಳಿಗಳ ಮಾದಿಗ ಸಮುದಾಯದವರ ಆದಿ ಜಾಂಬವ (ಮಾದಿಗ) ಸಮುದಾಯದ ಮುಖಂಡರು ಮತ್ತು ಯಜಮಾನರ ನೇತೃತ್ವದಲ್ಲಿ ಸಮ್ಮುಖದಲ್ಲಿ ನೆರವೇರಿತು. ಕೊಂಡೋತ್ಸವದ ನಂತರ ಭಕ್ತರು ತಾವು ಬೆಳೆದ ದವಸ ಧಾನ್ಯಗಳನ್ನು ದೇವರಿಗೆ ನೀಡುವ ಧನ್ಯತಾ ಭಾವದಿಂದ ಕೊಂಡಕ್ಕೆ ಸಮರ್ಪಿಸಿದರು. ನಂತರ ನೆರೆದಿದ್ದ ಭಕ್ತರಿಗೆಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬಿಜೆಪಿ ಮುಖಂಡ ನಿಶಾಂತ್ ಮಾತನಾಡಿ, ಸಮುದಾಯದ ಅಭಿವೃದ್ಧಿಗಾಗಿ ದೇವರ ಸಹಕಾರ ಮತ್ತು ಕೃಪೆ ಇರಬೇಕು. ಅದಕ್ಕಾಗಿ ಪೂಜೆ ಉತ್ಸವ ಹಾಗೂ ಇನ್ನಿತರ ದೇವರ ಕಾರ್ಯಗಳನ್ನು ಮಾಡ್ತೇವೆ. ಈಗಾಗಲೇ ಬಾಣೂರು ಗ್ರಾಮದಲ್ಲಿ ಮಾರಿಗುಡಿ ನಿರ್ಮಾಣ ಮಾಡಲು ಅನುದಾನ ನೀಡಿದ್ದೇನೆ. 2026 ರ ಜನವರಿ ತಿಂಗಳಲ್ಲಿ ದೇವಸ್ಥಾನ ಉದ್ಘಾಟನೆ ಮಾಡುವಂತೆ ಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆದಿ ಜಾಂಬವ ಮಠದ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ನೀಡುತ್ತೇನೆ, ದೇವರು ಎಲ್ಲರಿಗೂ ಆರೋಗ್ಯ ಭಾಗ್ಯ ಸುಖ ಸಂಪತ್ತು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಬಾಣೂರು ಗ್ರಾಮದ ಯಜಮಾನ ಮುಖಂಡರುಗಳಾದ ಮಹದೇವಸ್ವಾಮಿ, ರಂಗಸ್ವಾಮಿ, ದೊಡ್ಡಯ್ಯ, ಸಿದ್ದಯ್ಯ, ಪುಟ್ಟಯ್ಯ, ರಾಜು, ವೆಂಕಟಮಾಧು, ಪಾಳ್ಯ ರಾಚಪ್ಪ, ಎಲ್ಲೇಮಾಳ ಗೋವಿಂದ, ಮಾದೇವ, ನಟೇಶ್, ತಿಮ್ಮಯ್ಯ, ಮುತ್ತುರಾಜು, ವೆಂಕಟೇಶ್, ಕೊಳ್ಳೇಗಾಲ ಕಸಬಾ ಮನೆ ನಾಗರಾಜು, ಚಂದ್ರಶೇಖರ್, ಶಿವಮಲ್ಲು, ಹನುಮಂತ, ರವಿ, ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))