ಮಾರಾಪುರ ಪಿಕೆಪಿಎಸ್‌ಗೆ ಮಾರಾಪುರನೇ ಅಧ್ಯಕ್ಷ

| Published : Nov 08 2024, 01:19 AM IST / Updated: Nov 08 2024, 01:20 AM IST

ಸಾರಾಂಶ

ಮಾರಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅ.28ರಂದು ನಡೆದ ಚುನಾವಣೆಯಲ್ಲಿ ಸ್ಥಳೀಯ ಯುವ ಮುಖಂಡ ರೈತರ ಕಣ್ಮಣಿ, ಮಹಾದೇವ ಭೀಮಪ್ಪ ಮಾರಾಪುರ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ರಮೇಶ ವಿಠಲ ಬಿಸನಕೊಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಮಹಾಲಿಂಗಪುರ: ರೈತರಿಗಾಗಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಗೋಸ್ಕರ ಹಗಲಿರುಳು ಸೇವೆ ಮಾಡಲು ಸದಾ ಸಿದ್ಧವಾಗಿವೆ. ಇದರಿಂದ ರೈತರ ಹಣಕಾಸಿನ ಸ್ಥಿತಿ ಸುಧಾರಣೆ ಮಾಡಿಕೊಳ್ಳಲು ಸಹಕಾರಿಯಾಗಿವೆ ಎಂದು ನೂತನ ಅಧ್ಯಕ್ಷ ಮಹಾದೇವ ಮಾರಪುರ ಹೇಳಿದರು.

ಸಮೀಪದ ಮಾರಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅ.28ರಂದು ನಡೆದ ಚುನಾವಣೆಯಲ್ಲಿ ಸ್ಥಳೀಯ ಯುವ ಮುಖಂಡ ರೈತರ ಕಣ್ಮಣಿ, ಮಹಾದೇವ ಭೀಮಪ್ಪ ಮಾರಾಪುರ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ರಮೇಶ ವಿಠಲ ಬಿಸನಕೊಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವನಾಧಿಕಾರಿ (ರಿಟನಿರ್ಂಗ್) ಅಧಿಕಾರಿ ಎಸ್ ಬಿ ಚೀನಗುಂಡಿ ತಿಳಿಸಿದ್ದಾರೆ.

ಸಾಮಾನ್ಯ ವರ್ಗದಿಂದ ಸತ್ಯಪ್ಪ ಮಾರುತಿ ಧರ್ಮಟ್ಟಿ, ಪ್ರಭು ಹಣಮಂತ ತಂಬುರಿ, ಸಿದ್ದಪ್ಪಾ ಬಸವಣ್ಣೆಪ್ಪ ಮೇಟಿ,ಸಾಲಗಾರ ಹಿಂದುಳಿದ ಅ ವರ್ಗದಿಂದ ಬದಷಾ ಅಪ್ಪಸಾಬ ನದಾಫ್, ಮಹಾದೇವ ನಾಗಪ್ಪ ಜಮಖಂಡಿ, ಸಾಲಗಾರ ಮಹಿಳಾ ವರ್ಗದಿಂದ ಶ್ರೀಮತಿ ಶಾಂತಾ ವೆಂಕಪ್ಪ ಕೆದಾರಿ, ಶ್ರೀಮತಿ ಪ್ರಭಾವತಿ ಮಹಾದೇವ ಮಾರಾಪುರ, ಸಾಲಗಾರ ಪರಿಶಿಷ್ಟ ಜಾತಿ ವರ್ಗದಿಂದ ಲಕ್ಷ್ಮಣ ಬಸಪ್ಪ ಮೇತ್ರಿ, ಸಾಲಗಾರ ಪರಿಶಿಷ್ಟ ಪಂಗಡ ಈ ವರ್ಗದಿಂದ ಯಾವುದೇ ಅರ್ಜಿ ಸ್ವಿಕೃತವಾಗಿಲ್ಲ (ಬರದೇ) ಆದ್ದರಿಂದ ಖಾಲಿ ಉಳಿದಿದ್ದು. ಬಿನ್ ಸಾಲಗಾರ ವರ್ಗದಿಂದ ಸಿದ್ದಪ್ಪಾ ರಾಮಪ್ಪ ಕೊಣ್ಣೂರ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.