ಕುಶಾಲನಗರ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಸ್ಥಾನ ಗ್ರಾಮದೇವತೆಯ 17ನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಭಾವದಿಂದ ಜರುಗಿತು.
ಕನ್ನಡಪ್ರಭವಾರ್ತೆ ಕುಶಾಲನಗರ
ಕುಶಾಲನಗರ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಸ್ಥಾನ ಗ್ರಾಮದೇವತೆಯ 17ನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಭಾವದಿಂದ ಜರುಗಿತು. ವಾರ್ಷಿಕೋತ್ಸವ ಅಂಗವಾಗಿ ದೇವಿಯ ಸನ್ನಿಧಿಯಲ್ಲಿ ಅರ್ಚಕರಾದ ಉಮೇಶ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಗಣಪತಿ ಹೋಮ, ಸಂಕಲ್ಪ ಪೂಜೆ ಪಂಚಾಮೃತ ಅಭಿಷೇಕ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲದೊಂದಿಗೆ ತೆರಳಿ ಸಾಮೂಹಿಕ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯಕ್ರಮದ ಅಂಗವಾಗಿ ಹೂವಿನ ಅಲಂಕಾರ ಮತ್ತು ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕುಶಾಲನಗರ ಗಂಧದಕೋಟೆ ಉದ್ಯಮಿ ಬಿ ಟಿ ಸುಬ್ರಹ್ಮಣ್ಯ ಅವರು ನಡೆಸಿಕೊಟ್ಟರು. ಶ್ರೀ ಮಾರಿಯಮ್ಮ ದೇವಸ್ಥಾನ ಸೇವ ಸಮಿತಿಯ ಅಧ್ಯಕ್ಷರಾದ ರಾಮದಾಸ್, ಕಾರ್ಯದರ್ಶಿ ಎಂ ಎಂ ಚರಣ್, ಖಜಾಂಚಿ ಮುತ್ತಣ್ಣ, ಕೆ ಎನ್ ಅಶೋಕ್ ಜಗದೀಶ್, ಹೆಚ್ ಎನ್ ರಾಮಚಂದ್ರ ಮತ್ತಿತರರು ಇದ್ದರು.