ಸಾರಾಂಶ
ಮಣಿಪುರ ಗ್ರಾಮದ ಮರ್ಣೆಯ ಯೂತ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವಾರ್ಷಿಕೋತ್ಸವ ಮತ್ತು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯು ಇತ್ತೀಚೆಗೆ ಮರ್ಣೆ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಮಣಿಪುರ ಗ್ರಾಮದ ಮರ್ಣೆಯ ಯೂತ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವಾರ್ಷಿಕೋತ್ಸವ ಮತ್ತು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯು ಇತ್ತೀಚೆಗೆ ಮರ್ಣೆ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗಣ್ಯರಾದ ಕೃಷ್ಣಮೂರ್ತಿ ಪ್ರಭು ಎಳ್ಳಾರೆ, ರಘುನಾಥ್ ನಾಯಕ್ ಎಣ್ಣೆಹೊಳೆ, ದೇವಣ್ಣ ಪ್ರಭು ಬೆಳ್ಮಣ್, ಶಾಲಾ ಸಂಚಾಲಕರಾದ ದಯಾನಂದ್ ನಾಯಕ್, ಪಂಚಾಯಿತಿ ಸದಸ್ಯರಾದ ಪ್ರಜ್ವಲ್ ಹೆಗ್ಡೆ ಹಾಗೂ ಸಮಾಜ ಸೇವಕಿ ಸವಿತಾ ನಾಯಕ್ ಆಗಮಿಸಿದ್ದರು.ಸಂಘದ ಗೌರವಾಧ್ಯಕ್ಷ ಹರೀಶ್ ಶೆಟ್ಟಿ, ಅಧ್ಯಕ್ಷ ರಾಘವೇಂದ್ರ ಪ್ರಭು, ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.ಒಟ್ಟು 16 ತಂಡಗಳು ಭಾಗವಹಿಸಿದ್ದ ಪಂದ್ಯಾಟದಲ್ಲಿ ಜೋಯ್ ಪುತ್ತೂರು ತಂಡ ಮೊದಲ ಬಹುಮಾನ ಹಾಗೂ ಛತ್ರಪತಿ ಕೊಜಪಾಡಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.ಸಮಾರೋಪ ಕಾರ್ಯಕ್ರಮದಲ್ಲಿ ಶಿಕ್ಷಕ ಪ್ರೇಮನಾಥ್ ಮರ್ಣೆ, ಗಿರೀಶ್ ಕುಮಾರ್ ಪಣಪಿಲ ಮತ್ತು ಪ್ರವೀಣ್ ಪೂಜಾರಿ ಪಣಪಿಲ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು. ಸಂಘದ ಸದಸ್ಯರಾದ ನಾಗೇಶ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.