ಮದುವೆ ಹಿಂದು ಸಂಪ್ರದಾಯದ ಸಂಸ್ಕಾರ: ಶಾಂತಲಿಂಗೇಶ್ವರ ಶ್ರೀ

| Published : May 20 2025, 01:43 AM IST

ಮದುವೆ ಹಿಂದು ಸಂಪ್ರದಾಯದ ಸಂಸ್ಕಾರ: ಶಾಂತಲಿಂಗೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಯನ್ನು ಸಂಸ್ಕಾರಗಳ ಪೈಕಿ ಒಂದೆಂದು ಹೇಳಲಾಗುತ್ತಿದ್ದು, ಇದೊಂದು ಹೆಂಡತಿ ಮತ್ತು ಗಂಡನ ಜೀವನ ಬದ್ದತೆ ಯಾಗಿದೆ ಎಂದು ನರಗುಂದ ತಾಲೂಕಿನ ಬೇರನಟ್ಟಿ ಹಾಗೂ ಶಿರೋಳ ಮಠದ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಯನ್ನು ಸಂಸ್ಕಾರಗಳ ಪೈಕಿ ಒಂದೆಂದು ಹೇಳಲಾಗುತ್ತಿದ್ದು, ಇದೊಂದು ಹೆಂಡತಿ ಮತ್ತು ಗಂಡನ ಜೀವನ ಬದ್ದತೆ ಯಾಗಿದೆ ಎಂದು ನರಗುಂದ ತಾಲೂಕಿನ ಬೇರನಟ್ಟಿ ಹಾಗೂ ಶಿರೋಳ ಮಠದ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಖಾಸ್ಗತೇಶ್ವರ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಬಬಲೇಶ್ವರ ಮನೆತನದ ಪವನಕುಮಾರ ಹಾಗೂ ಸೀತಲ್‌ ಎಂಬುವರ ವಿವಾಹದಲ್ಲಿ ಅಕ್ಷತಾರೋಪಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಹಿಂದು ಧರ್ಮದಲ್ಲಿ ನಡೆಯುವ ಮದುವೆಗಳು ಆಚಾರ ವಿಚಾರಗಳ ಸಂಪ್ರದಾಯಗಳನ್ನು ಒಳಗೊಂಡಿವೆ. ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿ ತಮ್ಮ ಗ್ರಹಸ್ಥಾಶ್ರಮವೆಂಬ ಜೀವನದಲ್ಲಿ ಹೆಸರು ಗಳಿಸಿ ಮುನ್ನುಗ್ಗಲಿ ಎಂದು ಆಶೀರ್ವದಿಸಿದರು.ಗ್ರಹಸ್ಥಾಶ್ರಮ ಎಂಬುದರಲ್ಲಿ ಕಾಯಕ, ದಾಸೋಹ ಎಂಬುದನ್ನು ಎಂದೂ ಮರೆಯದಿರಿ. ಇದು ೧೨ನೇ ಶತಮಾನದಲ್ಲಿಯೇ ಸಾಮಾಜಿಕ, ಅಸಮಾನತೆ ತಾಂಡವವಾಡುತ್ತಿರುವುದನ್ನು ಕಂಡು ಹಾಗೂ ಕಂದಾಚಾರವನ್ನು ಕಿತ್ತೊಗೆಯುವಲ್ಲಿ ಬಸವಣ್ಣನವರು ಸೇರಿ ಶರಣರು ಮಾಡಿದ ಅಂದಿನ ಕ್ರಾಂತಿ ಪರಿಣಾಮಕಾರಿಯಾಗಿತ್ತು. ದಾಸೋಹ ಮತ್ತು ಕಾಯಕ ಈ ಪರಿಕಲ್ಪನೆ ಕುರಿತು ಜಾಗೃತಿ ಮೂಡಿಸುತ್ತಾ ಸಾಗುವಂತೆ ತಿಳಿಸಿದರು.ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ನೀಲಕಂಠ ಬಬಲೇಶ್ವರ, ಶಿವಲಿಂಗಪ್ಪ, ಸಂಗಮೇಶ, ಶಂಕ್ರೆಪ್ಪ ಕುಬಸದ, ಶ್ರೀಶೈಲ ಬಬಲೇಶ್ವರ, ಸುಭಾಸ ಯಾಳಗಿ, ಮಹಾಂತಪ್ಪ ಬೊಮ್ಮನಳ್ಳಿ, ವಾಸುದೇವ ಹೆಬಸೂರ, ಬಾಬುರಾವ್ ಶಿಂಧೆ, ಬಿ.ಎನ್.ಹಿಪ್ಪರಗಿ, ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಚಂದ್ರಶೇಖರ ಬಬಲೇಶ್ವರ, ಚನ್ನಬಸಪ್ಪ ಬಬಲೇಶ್ವರ, ತಿರುಪತಿ ನವಲೆ, ಅಶೋಕ ಶೆಟ್ಟಿ ಮುಂತಾದವರು ಇದ್ದರು.