ಮಾರ್ಕ್ಸ್‌ವಾದ ಸಿದ್ಧಾಂತ ನಿಂತ ನೀರಲ್ಲ: ರಾಧಾಕೃಷ್ಣ

| Published : Jan 22 2024, 02:17 AM IST

ಮಾರ್ಕ್ಸ್‌ವಾದ ಸಿದ್ಧಾಂತ ನಿಂತ ನೀರಲ್ಲ: ರಾಧಾಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಕ್ಸ್‌ ವಾದ ನಿಂತ ನೀರಲ್ಲ, ಅದನ್ನು ಅರ್ಥೈಸಿಕೊಂಡರೆ ಸಾಲದು, ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಕಾಮ್ರೆಡ್‌ ರಾಧಾಕೃಷ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾರ್ಕ್ಸ್‌ವಾದ ಸಿದ್ಧಾಂತ ನಿಂತ ನೀರಲ್ಲ, ಅದು ಕ್ರಿಯೆಗೆ ವೈಜ್ಞಾನಿಕ ಮಾರ್ಗದರ್ಶಿಯಾಗಿದೆ ಎಂದು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪಕ್ಷದ ಪಾಲಿಟ್‌ ಬ್ಯೂರೋ ಸದಸ್ಯ ಕಾಮ್ರೆಡ್‌ ಕೆ. ರಾಧಾಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಸಮಾಜವಾದಿ, ಕಾರ್ಮಿಕ ವರ್ಗದ ನಾಯಕ ವ್ಲಾಡಿಮಿರ್ ಲೆನಿನ್ ಅವರ ಮರಣ ಶತಾಬ್ದಿ ಹಿನ್ನೆಲೆಯಲ್ಲಿ ಭಾನುವಾರ ಗಾಂಧಿಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜಗತ್ತು ಕಂಡ ಮಹಾನ್ ಕ್ರಾಂತಿಕಾರಿಯ ಮಾರ್ಕ್ಸ್‌ವಾದವನ್ನು ಕೇವಲ ಅರ್ಥೈಸಿಕೊಂಡರೆ ಸಾಲದು. ತತ್ವಕ್ಕೆ ಬದ್ಧರಾಗಿ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತರಬೇಕು. ಇಲ್ಲದಿದ್ದರೆ ಪರಿಷ್ಕರಣವಾದಕ್ಕೆ ಈಡಾಗುತ್ತದೆ. ಅವರದೇ ಹಾದಿಯಲ್ಲಿ ಮತ್ತೊಬ್ಬ ಕ್ರಾಂತಿಕಾರಿ ಸ್ಟಾಲಿನ್ ಅವರು ಸಾಗಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಕಾ. ಕೆ.ಉಮಾ ಉಪಸ್ಥಿತರಿದ್ದರು.ಬಿಡುಗಡೆಯಾದ ಪುಸ್ತಕಗಳಿವು

ದುಡಿಯುವ ವರ್ಗಕ್ಕೆ ಆಶಾಕಿರಣವಾದ ಮಾರ್ಕ್ಸ್‌ವಾದ ಬೆಳೆದು ಬಂದ ದಾರಿ, ಸೋವಿಯತ್ ಸಮಾಜವಾದ, ಸೈನಿಕ ಕಾರ್ಯಾಚರಣೆ, 1975ರ ಪೂರ್ವದಲ್ಲಿ ಭಾರತದಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಪ್ರಸ್ತುತ ಪರಿಸ್ಥಿತಿ ಕುರಿತಾದ ಶಿವದಾಸ್ ಘೋಷ್ ಅವರ ‘ನವೆಂಬರ್ ಮಹಾಕ್ರಾಂತಿಯ ಪತಾಕೆ ಎತ್ತಿ ಹಿಡಿಯಿರಿ’, ‘ವೈಜ್ಞಾನಿಕ ದ್ವಂದ್ವಾತ್ಮಕ ವಿಧಾನ ಕ್ರಮವೇ ಮಾರ್ಕ್ಸ್‌ವಾದಿ ವಿಜ್ಞಾನ’, ‘ಚೆಕೊಸ್ಲೋವಾಕಿಯಾದಲ್ಲಿ ಸೋವಿಯತ್ ಮಿಲಿಟರಿ ಹಸ್ತಕ್ಷೇಪ ಮತ್ತು ಪರಿಷ್ಕರಣವಾದ’ ಹಾಗೂ ‘ಭಾರತದಲ್ಲಿ ಜನ ಹೋರಾಟಗಳ ಸಮಸ್ಯೆಗಳು’ ಪುಸ್ತಕಗಳು ಬಿಡುಗಡೆಯಾದವು.