ಸಾರಾಂಶ
 ತುರುವೇಕೆರೆ ತಾಲೂಕಿನಲ್ಲೂ ಸಹ ಬಂದ್ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಿರುವುದು ಸ್ವಾಗತಾರ್ಹ. ಈ ಎಲ್ಲಾ ಸಂಘಟನೆಗಳ ನಿಲುವಿಗೆ ತಾವೂ ಸೇರಿದಂತೆ ತಾಲೂಕು ಬಿಜೆಪಿ ಘಟಕ ಬೆಂಬಲವನ್ನು ಸೂಚಿಸಿದೆ. 
ಕನ್ನಡಪ್ರಭ ವಾರ್ತೆ ತುರುವೇಕೆರೆ
ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಕೆನಾಲ್ ಮೂಲಕ ರಾಮನಗರ ಸೇರಿದಂತೆ ಇತರ ಪ್ರದೇಶಗಳಿಗೆ ನೀರು ಹರಿಸುವ ಅವೈಜ್ಞಾನಿಕ ಕಾಮಗಾರಿಗೆ ಮಾಜಿ ಶಾಸಕ ಬಿಜೆಪಿಯ ಮಸಾಲಾ ಜಯರಾಮ್ ರವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ರೈತರ ಬಾಳಿನಲ್ಲಿ ಚಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಜಿಲ್ಲೆಗೆ ನಿಗದಿಪಡಿಸಿರುವ ಪ್ರಮಾಣದಷ್ಟು ನೀರನ್ನು ಜಿಲ್ಲೆಗೆ ಹರಿಸಿದ ನಂತರ ಹೆಚ್ಚುವರಿ ನೀರನ್ನು ಇತರೆ ಪ್ರದೇಶಗಳಿಗೆ ಹರಿಸಲು ತಮ್ಮ ವಿರೋಧವಿಲ್ಲ. ಆದರೆ ಜಿಲ್ಲೆಯ ರೈತರಿಗೆ ಅನ್ಯಾಯವೆಸಗಿ ಬೇರೆ ಪ್ರದೇಶಗಳಿಗೆ ನೀರು ಹರಿಸುವುದು ಸೂಕ್ತವಲ್ಲ. ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿರುವುದು ಖಂಡನೀಯ. ಕೂಡಲೇ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಮಾಜಿ ಶಾಸಕ ಮಸಾಲಾ ಜಯರಾಮ್ ಆಗ್ರಹಿಸಿದರು.ಬಂದ್ ಗೆ ಬೆಂಬಲ: ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ಜೂ. ೨೫ ರಂದು ನಡೆಯಲಿರುವ ಜಿಲ್ಲೆ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಮಸಾಲಾ ಜಯರಾಮ್ ರವರು, ಇದೇ ವಿಚಾರವಾಗಿ ತುರುವೇಕೆರೆ ತಾಲೂಕಿನಲ್ಲೂ ಸಹ ಬಂದ್ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಿರುವುದು ಸ್ವಾಗತಾರ್ಹ. ಈ ಎಲ್ಲಾ ಸಂಘಟನೆಗಳ ನಿಲುವಿಗೆ ತಾವೂ ಸೇರಿದಂತೆ ತಾಲೂಕು ಬಿಜೆಪಿ ಘಟಕ ಬೆಂಬಲವನ್ನು ಸೂಚಿಸಿದೆ. ತಾಲೂಕಿನ ಎಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಂದ್ ಗೆ ಬೆಂಬಲ ಸೂಚಿಸಿ ಬಂದ್ ಸಂದರ್ಭದಲ್ಲಿ ಹಾಜರಿರಬೇಕೆಂದೂ ಸಹ ಮಾಜಿ ಶಾಸಕ ಮಸಾಲಾ ಜಯರಾಮ್ ರವರು ಮನವಿ ಮಾಡಿಕೊಂಡಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))