ಸಾರಾಂಶ
ರಥೋತ್ಸವಕ್ಕೆ ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ ನೀಡಲಿದ್ದಾರೆ. ಮಸ್ಕಿ ಮಲ್ಲಿಕಾರ್ಜುನ ಜಾತ್ರಮಹೋತ್ಸವದ ಮಾಹಿತಿ ಪ್ರಚಾರ ಪತ್ರಿಕೆಯನ್ನು ರಥೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಮಹಾದೇವಪ್ಪಗೌಡ ಪಾಟೀಲ್ ಬಿಡುಗಡೆ ಮಾಡಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದಲ್ಲಿ ಎರಡನೇ ಶ್ರೀಶೈಲ ಎಂದು ಪ್ರಸಿದ್ಧವಾದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಫೆ.24 ರಂದು ಅದ್ಧೂರಿಯಾಗಿ ಜರುಗಲಿದೆ ಮತ್ತು ನೂತನ ರಥೋತ್ಸವಕ್ಕೆ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ ಎಂದು ರಥೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಮಹಾದೇವಪ್ಪಗೌಡ ಪಾಟೀಲ್ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಜಾತ್ರಮಹೋತ್ಸವದ ಮಾಹಿತಿ ಪ್ರಚಾರ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಫೆ.20ರಂದು ಸಂಜೆ 5-30 ರಿಂದ ಶ್ರೀರಕ್ಷೋಗ್ನ ಹೋಮ ಶ್ರೀ ಗಣಹೋಮ ನಡೆಯುತ್ತದೆ. ಫೆ.21 ರಂದು ಬೆಳಗ್ಗೆ 5 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಮಹಾರುದ್ರಾಭಿಷೇಕ ಸಂಜೆ 5-30ಕ್ಕೆ ಏಕದಶ ಮಹಾರುದ್ರ ಹೋಮ ನಡೆಯುವುದು.
ಫೆ.22ರಂದು ಸಂಜೆ 5-30 ಕ್ಕೆ ನೂತನ ರಥಕ್ಕೆ ರಥಾಂಗಹೋಮ ಹಾಗೂ ಜಯಾದಿಹೋಮ, ಪೂರ್ಣಾಹುತಿ ಹಾಗೂ ಸಕಲ ದೇವತೆಗಳಿಗೆ ಮಹಾಮಂಗಳಾರತಿ, ಜಾತ್ರ ಮಹೋತ್ಸವದಲ್ಲಿ ದುಡಿಯುತ್ತಿದ್ದ ಕುಶಲಕರ್ಮಿಗಳಿಗೆ ಸತ್ಕಾರ ಸಮಾರಂಭ ನಯಲಿದೆ.ಫೆ.23ರಂದು ಮಲ್ಲಿಕಾರ್ಜುನ ನೂತನ ಮಹಾರಥಕ್ಕೆ ಶ್ರೀದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉಡಿತುಂಬುವುದು. ಫೆ.24 ರಂದು ಬೆಳಗ್ಗೆ ನೂತನ ರಥಕ್ಕೆ ಕಳಸಾರೋಹಣ ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ಅವರು ಮಾಹಿತಿ ನೀಡಿದರು.
ರಥ ಸಮಿತಿಯ ಮುಖಂಡರಾದ ಮಲ್ಲಪ್ಪ ಕುಡತಿನಿ, ಡಾ. ಬಿ.ಎಚ್.ದಿವಟರ್, ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ಪ್ರಕಾಶ ಧಾರಿವಾಲ, ಸಿದ್ದಲಿಂಗಯ್ಯ ಗಚ್ಚಿನಮಠ, ಲಕ್ಷ್ಮೀ ನಾರಯಣ ಶಟ್ಟಿ, ಚನ್ನಪ್ಪ ಬ್ಯಾಳಿ, ಅಮರೇಶ ಬ್ಯಾಳಿ, ನಾಗರಾಜ ಯಂಬಲದ, ಮಲ್ಲಿಕಾರ್ಜುನ ಕ್ಯಾತ್ನಟ್ಟಿ, ನಾಗರಾಜ ಸಜ್ಜನ್, ಶರಣಯ್ಯ ಸೊಪ್ಪಿಮಠ ಹಾಗೂ ಇತರರು ಇದ್ದರು.