ಸಾರಾಂಶ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ತಗ್ಗಿಸುತ್ತವೆ ಎಂದು ಜಿಪಂ ಮಾಜಿ ಸದಸ್ಯ ರೋಗಾಣಿ ಹುಲುಗಪ್ಪ ಹೇಳಿದರು.ತಾಲೂಕಿನ ನಾರಾಯಣ ದೇವರ ಕೆರೆ ಗ್ರಾಮದಲ್ಲಿ ೧೧ನೇ ವರ್ಷದ ಪಾಂಡುರಂಗ ರುಕ್ಮಿಣಿ ದಿಂಡಿ ಮಹೋತ್ಸವ ನಿಮಿತ್ತ ನಡೆದ ೧೦ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂತಹ ವಿವಾಹಗಳಿಂದ ಜಾತಿ ಜಾಡ್ಯ ತೊಲಗಿಸಬಹುದು. ಸಾಮೂಹಿಕ ವಿವಾಹಗಳು ಬಡವರ ಬದುಕಿಗೆ ವರದಾನವಿದ್ದಂತೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮೂಹಿಕ ವಿವಾಹ ಮಾಡುವುದರಿಂದ ವಧುವರರಿಗೆ ಒಳ್ಳೆಯದಾಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ತಗ್ಗಿಸುತ್ತವೆ ಎಂದು ಜಿಪಂ ಮಾಜಿ ಸದಸ್ಯ ರೋಗಾಣಿ ಹುಲುಗಪ್ಪ ಹೇಳಿದರು.ತಾಲೂಕಿನ ನಾರಾಯಣ ದೇವರ ಕೆರೆ ಗ್ರಾಮದಲ್ಲಿ ೧೧ನೇ ವರ್ಷದ ಪಾಂಡುರಂಗ ರುಕ್ಮಿಣಿ ದಿಂಡಿ ಮಹೋತ್ಸವ ನಿಮಿತ್ತ ನಡೆದ ೧೦ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂತಹ ವಿವಾಹಗಳಿಂದ ಜಾತಿ ಜಾಡ್ಯ ತೊಲಗಿಸಬಹುದು. ಸಾಮೂಹಿಕ ವಿವಾಹಗಳು ಬಡವರ ಬದುಕಿಗೆ ವರದಾನವಿದ್ದಂತೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮೂಹಿಕ ವಿವಾಹ ಮಾಡುವುದರಿಂದ ವಧುವರರಿಗೆ ಒಳ್ಳೆಯದಾಗುತ್ತದೆ ಎಂದರು.
ಉಪನ್ಯಾಸಕ ಪಿ. ರಾಜಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಒಟ್ಟು ೧೯ ಜೋಡಿ ವಧುವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೇ ವೇಳೆ ಮರಿಯಮ್ಮನಹಳ್ಳಿ ವರ್ತಕ ವೀರಭದ್ರಯ್ಯ, ಶಿವಶಂಕರಯ್ಯ ತಾಳಿ ದಾನ ಮಾಡಿದರು. ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹನಸಿ ಶಂಕರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಚುಕ್ಕನಕಲ್ಲು ರಾಮಣ್ಣ ಸಾನ್ನಿಧ್ಯ ವಹಿಸಿ ಮಾತನಾಡಿದರು.ದಿಂಡಿ ಉತ್ಸವ ಸಮಿತಿ ಅಧ್ಯಕ್ಷ ಬಂಗಾರಿ ನಾಗರಾಜ, ಸದಸ್ಯರಾದ ಯಮುನಪ್ಪ, ಟಿ.ನಾಗಪ್ಪ, ಕುರಿ ಶಿವಮೂರ್ತಿ, ಗ್ರಾಪಂ ಅಧ್ಯಕ್ಷ ಶಂಕರ ನಾಯ್ಕ, ಸದಸ್ಯರಾದ ಕೆ.ಮುಜಾಮಿಲ್, ಚಿಗರಿ ಹುಲುಗಪ್ಪ, ಪುಂಡಲೀಕ ನಾಯ್ಕ, ಮಾಜಿ ಸದಸ್ಯ ತಂಬ್ರಹಳ್ಳಿ ಚಂದ್ರಪ್ಪ, ಸಮಿತಿ ಸದಸ್ಯರಾದ ಯಮುನಪ್ಪ, ಟಿ.ಶೇಖರ್, ಹುಗ್ಗಿ ನಾಗಪ್ಪ, ಹುಳ್ಳಿ ರವಿ, ತಂಬ್ರಹಳ್ಳಿ ಕೃಷ್ಣಮೂರ್ತಿ, ಯು.ಹನುಮಂತರಾಜ, ಎಂ.ಹುಚ್ಚಪ್ಪ, ಸೊಬಟಿ ಬಸವರಾಜ, ಗುಂಡ್ಲರ್ ಬಸವರಾಜ, ರೋಗಾಣಿ ಪ್ರಕಾಶ್ ಇತರರಿದ್ದರು.
ಪಿ. ರಾಜಲಿಂಗಪ್ಪ ಟಿ.ನಾಗಪ್ಪ, ಬಿ.ಫಾಜಿಲ್ ಸಾಹೇಬ್, ತಂಬ್ರಹಳ್ಳಿ ನಾಗಪ್ಪ, ಉಳ್ಳಾಗಡ್ಡಿ ಮಾರುತಿ ನಿರ್ವಹಿಸಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ದಿಂಡಿ ಉತ್ಸವ ಸಮಿತಿಯಿಂದ ಪಾಂಡುರಂಗ ಸ್ವಾಮಿಯ ಭಾವಚಿತ್ರದ ವಿಜೃಂಭಣೆ ಮೆರವಣಿಗೆ ನಡೆಯಿತು. ಮಹಿಳೆಯರು ಕಳಸಕುಂಭಗಳೊಂದಿಗೆ ಪಾಲ್ಗೊಂಡಿದ್ದರು.