ಸಾರಾಂಶ
ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಸಹಕಾರಿಯಾಗಿವೆ.
ಸಾಮೂಹಿಕ ವಿವಾಹ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ಕೊಪ್ಪಳ
ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಸಹಕಾರಿಯಾಗಿವೆ ಎಂದು ಸಂಸದ ಕೆ. ರಾಜಶೇಖರ್ ಹಿಟ್ನಾಳ ಹೇಳಿದ್ದಾರೆ.ನಗರದ ಸರ್ದಾರಗಲ್ಲಿಯಲ್ಲಿ ಮುಸ್ಲಿಂ ಪಂಚ್ ಕಮಿಟಿ ವತಿಯಿಂದ ಹಜರತ್ ಮಹಬೂಬ್ ಸುಭಾನಿ ಗ್ಯಾರವಿ ಹಬ್ಬದ ಪ್ರಯುಕ್ತ ನಡೆದ 12 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಗರದ ಸರ್ದಾರಗಲ್ಲಿ ಮುಸ್ಲಿಂ ಪಂಚ್ ಕಮಿಟಿಯವರು ಸತತ 20 ವರ್ಷಗಳಿಂದ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುತ್ತಾ ಸಾಮಾನ್ಯ ಜನರ ಮತ್ತು ಬಡವರ ಪಾಲಿಗೆ ಸಂಜೀವಿನಿಯಾಗಿ ಶ್ರಮಿಸುತ್ತಿದ್ದಾರೆ. ಇವರ ಈ ಕಾರ್ಯ ಅತ್ಯಂತ ಮೆಚ್ಚುಗೆಯ ಕಾರ್ಯ ಎಂದರು.ಸೈಯದ್ ಫೌಂಡೇಶನ್ ವತಿಯಿಂದ ಕೆಎಂ ಸೈಯದ್ 12 ಜೋಡಿ ವಧುಗಳಿಗೆ ಬಂಗಾರದ ತಾಳಿ ವಿತರಣೆ ಮಾಡಿದರು.
ಕೆ.ಎಂ. ಸಯ್ಯದ್ ರ ತಂದೆ ಹಾಜಿ ಮೆಹಬೂಬ್ ಅಲಿ ಸೈಯದ್ ತಾಳೆ ವಿತರಣೆ ಮಾಡಿ ಶುಭ ಕೋರಿದರು. ಸರ್ದಾರ್ ಗಲ್ಲಿಯ ನೂರಬಾಷಾ ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಮಾಡಿದರು.ಸಮಾರಂಭದಲ್ಲಿ ಮುಸ್ಲಿಂ ಸಮಾಜದ ಗುರು ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದರಿ ತಸ್ಕಿನಿ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಖಾಜಿ ಅಬ್ಬಾಸ್ ಅಲಿ ಮತ್ತು ಮೈನುದ್ದೀನ್ ನಿಕಾ ಕಾರ್ಯ ಮಾಡಿಸಿ, ನೂತನ ವಧು ವರರಿಗೆ ಶುಭ ಹಾರೈಸಿದರು. ಪಂಚ್ ಕಮಿಟಿ ಅಧ್ಯಕ್ಷ ಖಾದರ್ ಸಾಬ್ ಕುದುರೆಮೋತಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಶಬುದ್ದೀನ್ ಸಾಬ್ ನೂರು ಭಾಷಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷ ಆಮಂತ್ರಿತರಾಗಿ ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ್ ಅಡೂರ್, ಪ್ರಾಧಿಕಾರದ ಸದಸ್ಯರಾದ ಭಾಷು ಸಾಬ್ ಖತೀಬ್ ಮೊದಲಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))