ನಾಳೆ ಎಂಸಿಟಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ: ಮನ್ಸೂರ್‌ ಅಲಿ

| Published : Apr 16 2025, 12:45 AM IST

ಸಾರಾಂಶ

ನಗರದ ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.17ರಂದು ಬೆಳಗ್ಗೆ 11 ಗಂಟೆಗೆ ನಗರದ ಬೂದಾಳು ರಸ್ತೆಯಲ್ಲಿರುವ ತಾಜ್ ಪ್ಯಾಲೇಸ್‌ನಲ್ಲಿ 9 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಯು.ಎಂ. ಮನ್ಸೂರ್ ಅಲಿ ಹೇಳಿದ್ದಾರೆ.

ದಾವಣಗೆರೆ: ನಗರದ ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.17ರಂದು ಬೆಳಗ್ಗೆ 11 ಗಂಟೆಗೆ ನಗರದ ಬೂದಾಳು ರಸ್ತೆಯಲ್ಲಿರುವ ತಾಜ್ ಪ್ಯಾಲೇಸ್‌ನಲ್ಲಿ 9 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಯು.ಎಂ. ಮನ್ಸೂರ್ ಅಲಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021ರಲ್ಲಿ ಸಮಾಜ ಸೇವೆಯ ಉದ್ದೇಶದಿಂದ ಸ್ಥಾಪನೆ ಮಾಡಿದ ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ದಾವಣಗೆರೆ ವತಿಯಿಂದ ಸುಮಾರು 4 ವರ್ಷಗಳಿಂದ ಸಾಕಷ್ಟು ಸಮಾಜ ಸೇವೆ ಕಾರ್ಯಕ್ರಮಗಳು ಬಡವರಿಗೆ ಉಪಯೋಗ ಆಗುವಂತಹ ಕಾರ್ಯಕ್ರಮಗಳು ಜಾತಿ-ಭೇದ ಇಲ್ಲದೇ ಮಾಡುತ್ತಿದ್ದೇವೆ. ಮುಖ್ಯವಾಗಿ ಬಾಷಾ ನಗರ 6ನೇ ಕ್ರಾಸ್‌ನಲ್ಲಿರುವ ಮೆಹಬೂಬ್ ಎ ಇಲಾಹಿ ಆಸ್ಪತ್ರೆ 4 ವಷಗಳಿಂದ ಅತಿ ಕಡಿಮೆ ದರದಲ್ಲಿ ವೈದ್ಯಕೀಯ ಶುಲ್ಕ ಹಾಗೂ ಔಷಧಿಗಳನ್ನು ಕೊಡುತ್ತಿದೆ. ಸಾಕಷ್ಟು ಬಾರಿ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದೆ ಎಂದರು.

ಕಳೆದೆರಡು ವರ್ಷಗಳಿಂದ ಸಮುದಾಯದ ಬಡಮಕ್ಕಳ ಸಾಮೂಹಿಕ ವಿವಾಹಗಳನ್ನು ನೆರವೇರಿಸಲಾಗುತ್ತಿದೆ. ಈಗ ಮೂರನೇ ಬಾರಿಗೆ ಏ.17ರಂದು ಬೆಳಗ್ಗೆ 11 ಗಂಟೆಗೆ ತಾಜ್ ಪ್ಯಾಲೇಸ್‌ನಲ್ಲಿ 9 ಜೋಡಿಗಳ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದೇವೆ. ಪ್ರತಿ ವಧು- ವರನಿಗೆ 5 ಗ್ರಾಂ ಚಿನ್ನ, ಬೆಳ್ಳಿಯ ಕಾಲು ಚೈನು, ಬೀರು, ಮಂಚ, ಬಟ್ಟೆ, ವಾಚ್, ಅವಶ್ಯಕ ವಸ್ತುಗಳು ಮತ್ತು ಗೃಹೋಪಯೋಗಿ ಸಾಮಗ್ರಿಗಳನ್ನು ನೀಡಲಾಗುವುದು ಎಂದು ಹೇಳಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ವಿಧಾನಪರಿಷತ್ತು ಸದಸ್ಯ ಅಬ್ದುಲ್ ಜಬ್ಬಾರ್, ದಾವಣಗೆರೆ ಎಲ್ಲ ಮಸೀದಿಗಳ ಉಲಮಾಗಳು, ಮುಸ್ಲಿಂ ಮುಖಂಡರು, ರಾಜಕೀಯ ನಾಯಕರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಮ್ಮದ್ ಷರೀಫ್, ಜಾವೀದ್, ಫೈರೋಜ್, ಅಬ್ದುಲ್ ನಾಸೀರ್, ಜಾಫರ್, ಮಹಮ್ಮದ್ ಅಲಿ, ಇಮ್ರಾನ್ ಅಲಿ, ಸೈಯದ್ ಜಬೀ ಇತರರು ಇದ್ದರು.

- - -

-15ಕೆಡಿವಿಜಿ34.ಜೆಪಿಜಿ: