ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ

| Published : Apr 28 2024, 01:24 AM IST

ಸಾರಾಂಶ

ಈ ಬಾರಿ ನಾವು ಬಿಜೆಪಿಗೆ ಮತ ಹಾಕಿ ಮೋದಿ ಅವರನ್ನು ಗೆಲ್ಲಿಸದಿದ್ದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ

ಗದಗ: ನಗರದ ಜೋಡ ಮಾರುತಿ ದೇವಸ್ಥಾನದ ಸುತ್ತಮುತ್ತ ೩೧ನೇ ವಾರ್ಡಿನ ಬೂತ್‌ ನಂ. ೮೩, ೧೧೪, ೧೧೫ ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಗದಗ- ಹಾವೇರಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ ಮನೆ ಮನೆಗೆ ತೆರಳಿ ಮತಯಾಚಿಸಿದರು.

ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ನೀವು ಅಷ್ಟೆ ಅಲ್ಲ, ನಿಮ್ಮ ಸುತ್ತ ಮುತ್ತಲಿನ ಜನರನ್ನು ಕರೆ ತಂದು ಮತ ಹಾಕಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮತದಾರರೊಬ್ಬರ ಭಾವುಕರಾಗಿ ಮಾತನಾಡಿ, ಈ ಬಾರಿ ನಾವು ಬಿಜೆಪಿಗೆ ಮತ ಹಾಕಿ ಮೋದಿ ಅವರನ್ನು ಗೆಲ್ಲಿಸದಿದ್ದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಸಂಘಟನಾ ಪ್ರಭಾರಿ ಹುಬ್ಬಳ್ಳಿಯ ರಾಜಕುಮಾರ ಬಸವಾ ಮಾತನಾಡಿ, ಪಕ್ಷದ ಧ್ಯೇಯೋದ್ದೇಶಗಳು ಅಬ್ ಕಿ ಬಾರ್ ಚಾರ್‌ಸೌ ಪಾರ್ ಸಂಕಲ್ಪದೊಂದಿಗೆ ಕಾರ್ಯಕರ್ತರು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ೨ಗಂಟೆ ಸಮಯ ಮೀಸಲಿಟ್ಟು ಐದಾರು ಜನರ ತಂಡ ರಚಿಸಿ ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯಾಗಲು ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಶೈಲಾ ಬಾಕಳೆ, ಹಿರಿಯರಾದ ಲೋಕನಾಥಸಾ ಬದಿ, ಮನ್ನು ದಲಬಂಜನ, ರಾಜು ಕಾಟೀಗರ, ರಾಜ್ಯ ಓಬಿಸಿ ಕಾರ್ಯದರ್ಶಿ ಸುಧೀರ ಕಾಟೀಗರ, ಬಿಜೆಪಿ ಯುವ ಮುಖಂಡ ಶ್ರೀಕಾಂತ ಬಾಕಳೆ, ನಾಗರಾಜ ಖೋಡೆ, ನಾಸೀರ್ ನರೇಗಲ್, ಪರಶುರಾಮ ಮಿಸ್ಕೀನ, ಕೃಷ್ಣಸಾ ಲದ್ವಾ, ಪ್ರಕಾಶ ಕಾಟೀಗರ, ರಾಜೇಶ ಖೋಡೆ, ಅಂಜು ಖಟವಟೆ, ರವಿ ಚವ್ಹಾಣ, ತುಕಾರಾಮ ನಾಕೋಡ, ಸುರೇಶ ಬಾಕಳೆ, ಅಶ್ವಿನ ಹಬೀಬ, ಮಯೂರ ಕಾಟಿಗರ, ಮಹಿಳಾ ಮುಖಂಡರಾದ ಕೌಶಲ್ಯ ಬದಿ, ಶೋಭಾ ಬಾಂಡಗೆ ಸೇರಿದಂತೆ ಮುಂತಾದವರು ಇದ್ದರು.