ಸಾರಾಂಶ
ಸಾಮಾಜಿಕ ಜಾಲತಾಣದಲ್ಲಿ ಯುವತಿ ಸೋಗಿನಲ್ಲಿ ಮೋಸದ ಬಲೆಗೆ ಬೀಳಿಸಿಕೊಂಡು ವ್ಯಕ್ತಿಯೊಬ್ಬರಿಗೆ 1.29 ಕೋಟಿ ರು. ಹಣವನ್ನು ಸೈಬರ್ ದುರುಳರು ದೋಚಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ ಜಾಲತಾಣದಲ್ಲಿ ಯುವತಿ ಸೋಗಿನಲ್ಲಿ ಮೋಸದ ಬಲೆಗೆ ಬೀಳಿಸಿಕೊಂಡು ವ್ಯಕ್ತಿಯೊಬ್ಬರಿಗೆ 1.29 ಕೋಟಿ ರು. ಹಣವನ್ನು ಸೈಬರ್ ದುರುಳರು ದೋಚಿರುವ ಘಟನೆ ನಡೆದಿದೆ.ಸಿ.ಜಗದೀಶ್ ಹಣ ಕಳೆದುಕೊಂಡಿದ್ದು, ಮೇಘನಾ ರೆಡ್ಡಿ ಹೆಸರಿನಲ್ಲಿ ದೂರುದಾರರಿಗೆ ಕರೆ ಮಾಡಿ ವಂಚಿಸಿದ್ದಾರೆ. ಈ ಬಗ್ಗೆ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಮೂಲಕ ಜಗದೀಶ್ ಅವರನ್ನು ಮೇಘನಾ ಪರಿಚಯಿಸಿಕೊಂಡಿದ್ದಾಳೆ. ಆಗ ಚಾಟಿಂಗ್ ನಡೆದು ಗೆಳೆತನ ಬೆಳೆದಿದೆ. ಆಗ ಜಗದೀಶ್ ಅವರಿಗೆ ನಿಮ್ಮ ತಂದೆ ಹೆಸರಿನಲ್ಲಿ ವೃದ್ಧಾಶ್ರಮ ಕಟ್ಟಿಸುವುದಾಗಿ ಆಕೆ ಹೇಳಿದ್ದಾಳೆ. ಅಲ್ಲದೆ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ದೂರುದಾರನನ್ನು ಆಕೆ ನಂಬಿಸಿದ್ದಾಳೆ. ಈ ಮಾತು ನಂಬಿದ ಜಗದೀಶ್ ಅವರು, ಹಂತ ಹಂತವಾಗಿ 1.29 ಕೋಟಿ ರು. ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ ಎಂದು ತಿಳಿದು ಬಂದಿದೆ.;Resize=(128,128))
;Resize=(128,128))
;Resize=(128,128))