ನವಿಲೆ ಗೆಳೆಯರ ಬಳಗ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ನೆರವಿದೊಂದಿಗೆ ಈ ಶಿಬಿರ ನಡೆಯಲಿದೆ. ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರಕ್ಕೆ ಶ್ರೀಮತಿ ಸುವರ್ಣ ಶ್ರೀ ಶಂಕರ ಲಿಂಗಪ್ಪ ಎಜುಕೇಶನ್ ಮತ್ತು ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ತಿಪಟೂರು ಹಾಗೂ ಶೇಖರ್ ಆಸ್ಪತ್ರೆ ಶೇಖರ್ ರತ್ನ ನಿಧಿ ಕೇಂದ್ರ ತಿಪಟೂರು ಸಹಯೋಗದೊಂದಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದ ಉದ್ಘಾಟನೆಯನ್ನುಶಾಸಕ ಸಿಎನ್ ಬಾಲಕೃಷ್ಣ ನೆರವೇರಿಸಲಿದ್ದು, ಖ್ಯಾತ ವೈದ್ಯರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬಾಗೂರು: ಹೋಬಳಿಯ ಪುರಾಣ ಪ್ರಸಿದ್ಧ ನಾಗರನವಿಲೆ ಗ್ರಾಮದಲ್ಲಿ ಡಿಸೆಂಬರ್ 21ರ ಭಾನುವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ತಿಳಿಸಿದರು.
ರೋಟರಿ ಸಂಸ್ಥೆ ತಿಪಟೂರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಘಟಕ ಮತ್ತು ಶ್ರೀ ನಾಗೇಶ್ವರ ಸ್ವಾಮಿ ಕಲ್ಯಾಣ ಮಂಟಪ ಟ್ರಸ್ಟ್ ಮತ್ತು ನವಿಲೆ ಗೆಳೆಯರ ಬಳಗ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ನೆರವಿದೊಂದಿಗೆ ಈ ಶಿಬಿರ ನಡೆಯಲಿದೆ. ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರಕ್ಕೆ ಶ್ರೀಮತಿ ಸುವರ್ಣ ಶ್ರೀ ಶಂಕರ ಲಿಂಗಪ್ಪ ಎಜುಕೇಶನ್ ಮತ್ತು ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ತಿಪಟೂರು ಹಾಗೂ ಶೇಖರ್ ಆಸ್ಪತ್ರೆ ಶೇಖರ್ ರತ್ನ ನಿಧಿ ಕೇಂದ್ರ ತಿಪಟೂರು ಸಹಯೋಗದೊಂದಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದ ಉದ್ಘಾಟನೆಯನ್ನುಶಾಸಕ ಸಿಎನ್ ಬಾಲಕೃಷ್ಣ ನೆರವೇರಿಸಲಿದ್ದು, ಖ್ಯಾತ ವೈದ್ಯರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಉಚಿತ ಆರೋಗ್ಯ ತಪಾಸಣಾ ಶಿಬಿರವು ಶ್ರೀ ನವಿಲೆ ನಾಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಶಿಬಿರದಲ್ಲಿ ಪ್ರಮುಖವಾಗಿ ರಕ್ತ ಪರೀಕ್ಷೆ, ಸಕ್ಕರೆ ಕಾಯಿಲೆ ಇಸಿಜಿ, ಶ್ರವಣ ಸಮಸ್ಯೆ, ಹೃದಯ ಸಂಬಂಧಿ ಸೇರಿದಂತೆ ವಿವಿಧ ಕಾಯಿಲೆಗಳ ಪರೀಕ್ಷೆಯನ್ನು ಖ್ಯಾತ ವೈದ್ಯರು ಪರೀಕ್ಷೆ ನಡೆಸಲಿದ್ದಾರೆ. ತಾಲೂಕಿನ ಹಾಗೂ ನವಿಲೆ ಭಾಗದ ಜನರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.