ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಉದ್ಯೋಗ ಮೇಳ ಆಯೋಜಿಸಿ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇಲ್ಲಿಸಿಕ್ಕಂತಹ ಅವಕಾಶಗಳನ್ನು ನಿರುದ್ಯೋಗಿಗಳು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನ, ರೈತ ದಿನಾಚರಣೆ ಅಂಗವಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಗೈರು ಹಾಜರಿಯಲ್ಲಿ ಮಂಗಳವಾರ ಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಿತು.ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರು ಅಮೆರಿಕಾಗೆ ತೆರಳಿದ್ದು, ಅವರ ಗೈರಿನಲ್ಲಿ ದಿ.ಪುಟ್ಟಣ್ಣಯ್ಯ ಫೌಂಡೇಷನ್, ರಾಜ್ಯ ರೈತಸಂಘ ವತಿಯಿಂದ ನಡೆದ ಉದ್ಯೋಗ ಮೇಳದಲ್ಲಿ ಶಾಸಕರ ಬೆಂಬಲಿಗರು, ರೈತಸಂಘದ ಕಾರ್‍ಯಕರ್ತರು ಮುಖಂಡರು ಹಾಗೂ ಪುಟ್ಟಣ್ಣಯ್ಯ ಫೌಂಡೇಷನ್‌ನವರು ಜವಾಬ್ದಾರಿ ಹೊತ್ತು ಯಶಸ್ವಿಯಾಗಿ ನಡೆಸಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತಭವನದಲ್ಲಿ ನಡೆದ ಉದ್ಯೋಗ ಮೇಳಕ್ಕೆ ದಿ.ಕೆ.ಎಸ್.ಪುಟ್ಟಣ್ಣಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪತ್ನಿ ಸುನೀತ ಪುಟ್ಟಣ್ಣಯ್ಯ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಸೇರಿದಂತೆ ಅನೇಕ ರೈತರ ಮುಖಂಡರು ಚಾಲನೆ ನೀಡಿದರು.ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಮೇಳವು ಸಂಜೆ 5 ಗಂಟೆವರೆಗೆ ನಡೆಯಿತು. ಕೆಲ ಮಂದಿ ಯುವಕ-ಯುವತಿಯರು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡಿದ್ದರು. ಹೊಸದಾಗಿ ಉದ್ಯೋಗ ಮೇಳೆಕ್ಕೆ ಆಗಮಿಸುವ ಅಭ್ಯರ್ಥಿಗಳ ನೋಂದಣಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಉದ್ಯೋಗ ಮೇಳದಲ್ಲಿ ಸರಿ ಸುಮಾರು 1300ಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡು ಭಾಗವಹಿಸಿದ್ದರು. ಸುಮಾರು 50ಕ್ಕೂ ಅಧಿಕ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಜಿಲ್ಲೆಯ ವಿವಿಧ ಕಂಪನಿಗಳು ಪಾಲ್ಗೊಂಡಿದ್ದವು. ಪಾಂಡವಪುರ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಉದ್ಯೋಗ ಹರಿಸಿ ನೂರಾರು ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕ-ಯುವತಿಯರು ಭಾಗವಹಿಸಿ ಕಂಪನಿಗಳ ನಡೆಸುವ ಸಂದರ್ಶನದಲ್ಲಿ ಪಾಲ್ಗೊಂಡರು.ಅಭ್ಯರ್ಥಿಗಳನ್ನು ಸಂದರ್ಶನ ನಡೆಸಲು ಸಭಾಂಗಣದ ಆವರಣದಲ್ಲಿ 55 ಸ್ಟಾಲ್‌ಗಳನ್ನು ನಿರ್ಮಿಸಲಾಗಿತ್ತು. ವಿವಿಧ ಕಂಪನಿಗಳು ನಡೆಸಿ ಸಂದರ್ಶನದಲ್ಲಿ ಆಯ್ಕೆಯಾದ ಬಹುತೇಕ ಮಂದಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಉಳಿದಂತೆ ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾಭ್ಯಾಸ ಮೇಲೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಮ್ಮ ದಾಖಲಾತಿ ಪರಿಶೀಲನೆ ನಡೆಸಲು ತಮ್ಮ ಕಂಪನಿಗಳಿಗೆ ಬರುವಂತೆ ಸೂಚನೆ ನೀಡಲಾಯಿತು. ವಿಕಚೇತನ ಯುವಕ-ಯುವತಿಯ ಭಾಗವಹಿಸುವ ಸಲುವಾಗಿ ವಾಯ್ಸ್ ಆಫ್ ನೀಡಿ ಫೌಂಡೇಷನ್ ಸಂಸ್ಥೆಯೂ ಭಾಗವಹಿಸಿ ಹಲವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದರು.
ಮೇಳದಲ್ಲಿ ಬಹುತೇಕ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಮೂಲಕದ ಕಂಪನಿಗಳೇ ಆಗಮಿಸಿದ್ದರಿಂದ ಕೆಲವು ಯುವತಿಯರು ದೂರದ ಬೆಂಗಳೂರು ಕಂಪನಿಗಳಿಗೆ ಹೋಗಿ ಕೆಲಸ ಮಾಡಲು ನಿರಾಶಕ್ತಿ ತೋರಿದರು. ಉದ್ಯೋಗ ಅನಿವಾರ್ಯತೆಯಾಗಿರುವ ಯುವಕರು ಯಾವುದಾದರೂ ಕೆಲಸ ಸಿಲೆಂದು ಬಹುತೇಕ ಕಂಪನಿಗಳಿಗೆ ತಮ್ಮ ಸ್ವಂ ವಿವರದ ಮಾಹಿತಿ ಇರುವ ಅರ್ಜಿನೀಡಿ ಸಂದರ್ಶನದಲ್ಲಿ ಭಾಗವಹಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ರೈತನಾಯಕಿ ಸುನೀತ ಪುಟ್ಟಣ್ಣಯ್ಯ ಮಾತನಾಡಿ, ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಉದ್ಯೋಗ ಮೇಳ ಆಯೋಜಿಸಿ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇಲ್ಲಿಸಿಕ್ಕಂತಹ ಅವಕಾಶಗಳನ್ನು ನಿರುದ್ಯೋಗಿಗಳು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಂಡ್ಯ ನೀರಾವರಿ ಜಿಲ್ಲೆಯಾದರೂ ವಲಸಿಗರಾಗುತ್ತಿದ್ದಾರೆ. ಇಲ್ಲಿಂದ ಉದ್ಯೋಗ ಹರಿಸಿ ಬೇರೆಡೆಗೆ ಹೋಗುತ್ತಿರುವ ಬಗ್ಗೆ ಅಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ಚರ್ಚಿಸುತ್ತಿದ್ದರು. ಇದರ ಬಗ್ಗೆ ದೊಡ್ಡ ಹೋರಾಟ ಮಾಡಿ ಸರಕಾರದ ಗಮನವನ್ನು ಸಹ ಸೆಳೆದಿತ್ತು. ಕೃಷಿಯಿಂದ ಶೇ.60 ಉದೋಗ ದೊರೆಯುತ್ತಿದೆ. ಆದರೆ ಕೃಷಿ ನಿರ್ಲಕ್ಷಕ್ಕೆ ಒಳಗಾಗಿದೆ. ಕೃಷಿಯಲ್ಲಿ ಸಾಧನೆ ಮಾಡುವುದನ್ನು ಯುವಕ-ಯುವತಿಯರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.ರೈತ ನಾಯಕ ಚಾಮರಸ ಮಾಲೀಪಾಟೀಲ್ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಹುಟ್ಟಿನದ ಸಂಭ್ರಮ ದಿನಾಚರಣೆಯಲ್ಲಿ ಕನಸ್ಸು ಜನರಿಗೆ ಉದ್ಯೋಗ ಕೊಡಸಬೇಕೆಂಬುದಾಗಿತ್ತು. ಅವರ ಪುತ್ರ ಕನಸ್ಸು ನನಸ್ಸು ಮಾಡುತ್ತಿದ್ದಾರೆ. ಉದ್ಯೋಗ ಸಿಕ್ಕಿ ಯುವಕ-ಯುವತಿಯರ ಬದುಕು ಬಂಗಾರವಾಗಲೆಂದು ಹಾರೈಸುತ್ತೇನೆ ಎಂದರು.