ಟಿಎಸ್‌ಎಸ್‌ನಿಂದ ಹೊರಟ ಮೆರವಣಿಗೆಯು ಎಪಿಎಂಸಿ ಕ್ರಾಸ್, ಅಶ್ವಿನಿ ವೃತ್ತ, ರಾಘವೇಂದ್ರ ಸರ್ಕಲ್ ಮೂಲಕ ಸಹಾಯ ಆಯುಕ್ತರ ಕಚೇರಿಗೆ ತೆರಳಿದ ಸುಮಾರು ೨ ಸಾವಿರ ಪ್ರತಿಭಟನಾಕಾರರು ರೈತರ ಸಹಕಾರಿ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಖಂಡಿಸಿದರು.

ಶಿರಸಿ: ಟಿಎಸ್‌ಎಸ್ ಸೊಸೈಟಿಯಲ್ಲಿ ಸರ್ಕಾರದ ಹಸ್ತಕ್ಷೇಪ ಖಂಡಿಸಿ, ಸಹಸ್ರ ಸಂಖ್ಯೆಯ ಷೇರು ಸದಸ್ಯರು ಟಿಎಸ್‌ಎಸ್ ಆವಾರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಟಿಎಸ್‌ಎಸ್‌ನಿಂದ ಹೊರಟ ಮೆರವಣಿಗೆಯು ಎಪಿಎಂಸಿ ಕ್ರಾಸ್, ಅಶ್ವಿನಿ ವೃತ್ತ, ರಾಘವೇಂದ್ರ ಸರ್ಕಲ್ ಮೂಲಕ ಸಹಾಯ ಆಯುಕ್ತರ ಕಚೇರಿಗೆ ತೆರಳಿದ ಸುಮಾರು ೨ ಸಾವಿರ ಪ್ರತಿಭಟನಾಕಾರರು ರೈತರ ಸಹಕಾರಿ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಖಂಡಿಸಿದರು.ಶತಮಾನ ಪೂರೈಸಿದ ಟಿಎಸ್‌ಎಸ್‌ಗೆ ಆಡಳಿತಾಧಿಕಾರಿ ನೇಮಕ ಮಾಡಲು ಕಾಣದ ಕೈಗಳು ಕೆಲಸ ಮಾಡಿದೆ ಎಂದು ಆರೋಪಿಸಿದ ಷೇರು ಸದಸ್ಯರು, ಸ್ಥಳೀಯ ಶಾಸಕರಿಗೆ ಮತ್ತು ಸಾಮ್ರಾಟ್‌ ಕಟ್ಟೆಯ ಮೇಲೆ ಕುಳಿತುಕೊಂಡು ಕುತಂತ್ರ ಮಾಡುವ ಕೆಲವರ ವಿರುದ್ಧ ಹೆಸರು ಉಲ್ಲೇಖಿಸದೇ, ಪರೋಕ್ಷವಾಗಿ ಧಿಕ್ಕಾರ ಕೂಗಿದರು.ಪ್ರತಿಭಟನೆಯಲ್ಲಿ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಉಪಾಧ್ಯಕ್ಷ ಎಂ.ಎನ್. ಭಟ್ಟ ತೋಟಿಮನೆ, ಟಿಎಸ್‌ಎಸ್‌ನ ನಿರ್ದೇಶಕರು, ಅಭಿಮಾನಿಗಳಾದ ಶಿವಾನಂದ ಕಳವೆ, ಶ್ರೀಕೃಷ್ಣ ಹೆಗಡೆ ಲಿಂಗದಕೋಣ, ವಿವೇಕ ಹೆಗಡೆ ಗಡಿಹಿತ್ಲು, ಜಿ.ಆರ್. ಹೆಗಡೆ ಬೆಳ್ಳೆಕೇರಿ ಸೇರಿದಂತೆ ಸುಮಾರು ೨ ಸಾವಿರ ರೈತರು ಭಾಗವಹಿಸಿದ್ದರು.