ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಹಾಗೂ ರಾಜ್ಯಪಾಲರನ್ನು ಕರ್ನಾಟಕದಿಂದ ವಾಪಸ್ ಕರೆಯಿಸಿಕೊಳ್ಳುವಂತೆ ಒತ್ತಾಯಿಸಿ ರಾಜ್ಯಪಾಲ ಹಠಾವೋ- ಕರ್ನಾಟಕ ಬಚಾವೋ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪಕ್ಷದ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.ಎಂಡಿಎ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಈ ನಡೆ ವಿರೋಧಿಸಿ ಕಾಂಗ್ರೆಸ್ ಆಯೋಜಿಸಿದ್ದ ಈ ಬೃಹತ್ ಹೋರಾಟಕ್ಕೆ ಜಿಲ್ಲೆಯ ಎಚ್.ಡಿ.ಕೋಟೆ, ಟಿ.ನರಸೀಪುರ, ವರುಣ, ನಂಜನಗೂಡು, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಮುಂತಾದ ಕಡೆಯಿಂದ ನೂರಾರು ಬಸ್, ಟೆಂಪೋ ಮತ್ತು ಕಾರುಗಳಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಗಾಂಧಿ ಚೌಕಕ್ಕೆ ಆಗಮಿಸಿದರು.
ಗಾಂಧೀಜಿ ಪ್ರತಿಮೆ ಬಳಿ ಸಾರ್ವಜನಿಕ ಸಭೆ ನಡೆಸಿದ ಬಳಿಕ ಮೆರವಣಿಗೆಯೂ ದೊಡ್ಡಗಡಿಯಾರ, ಸಂಗಂ ಚಿತ್ರಮಂದಿರ, ಛತ್ರಿಮರದ ರಸ್ತೆ, ನಜರಬಾದ್, ಮಹದೇಶ್ವರ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.ಮಾರ್ಗದ ಉದ್ದಕ್ಕೂ ಕೇಂದ್ರ ಸರ್ಕಾರದ ಕೈಗೊಂಬೆಯಾದ ರಾಜ್ಯಪಾರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ರಾಜ್ಯಪಾಲರು ಬಿಜೆಪಿ ಏಜೆಂಟ್, ಬಿಜೆಪಿ- ಜೆಡಿಎಸ್ ಕುತಂತ್ರಕ್ಕೆ ಧಿಕ್ಕಾರ, ಬಿಜೆಪಿ ಕಚೇರಿಯಾದ ರಾಜಭವನ, ರಾಜ್ಯಪಾಲರೇ ರಾಜ್ಯ ಬಿಟ್ಟು ತೊಲಗಿ ಎಂಬ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.
ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದ ಬಳಿ ತಲುಪುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗುತ್ತಲೇ ಒಳಗೆ ಪ್ರವೇಶಿಸಲು ಯತ್ನಿಸಿದರು. ನಾವು ಯಾಕೇ ಹೊರಗೆ ನಿಲ್ಲಬೇಕು. ಕಚೇರಿ ಮುಂಭಾಗವೇ ತೆರಳುವಂತೆ ಹೇಳಿ ನುಗ್ಗಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಹಿರಿಯ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಿ ಸುಮ್ಮನಿರಿಸಿದರು.ಬಳಿಕ ಪ್ರತಿಭಟನಾಕಾರರ ಬಳಿಗೆ ಆಗಮಿಸಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸ್ಥಳದಲ್ಲಿ ವಾಹನ ದಟ್ಟಣೆ ತಪ್ಪಿಸಲು ಪೊಲೀಸರು ಗಾಂಧಿಚೌಕದ ಸುತ್ತಮುತ್ತಲಿನ ಪ್ರಭಾ ಚಿತ್ರಮಂದಿರ ರಸ್ತೆ, ರವೆ ಬೀದಿ, ದೊಡ್ಡಗಡಿಯಾರ ವೃತ್ತ, ಮಕ್ಕಾಜಿ ಕಾಂಪ್ಲೆಕ್ಸ್ ಬಳಿ ಬ್ಯಾರಿಕೇಡ್ ಹಾಕಿ ವಾಹನಗಳ ನಿಲುಗಡೆಗೆ ಪುರಭವನದ ಬಳಿಗೆ ಕಳುಹಿಸಿದ್ದರಿಂದ ಕಾಂಗ್ರೆಸ್ ಬಾವುಟ ಹಿಡಿದಿದ್ದ ಕಾರ್ಯಕರ್ತರು ಜೈಕಾರದ ಘೋಷಣೆ ಕೂಗಿದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಕೆ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಎಚ್.ಪಿ. ಮಂಜುನಾಥ್, ಕಳಲೆ ಕೇಶವಮೂರ್ತಿ, ಮರಿತಿಬ್ಬೇಗೌಡ, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಎಂ. ಲಕ್ಷ್ಮಣ, ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮಾಜಿ ಮೇಯರ್ಗಳಾದ ನಾರಾಯಣ, ಆರಿಫ್ ಹುಸೇನ್, ಅನಂತ, ಎಚ್.ಎನ್. ಶ್ರೀಕಂಠಯ್ಯ, ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಬಿ.ಎಲ್. ಭೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯರಾದ ಲೋಕೇಶ್ ಪಿಯಾ, ಕೆ.ವಿ. ಮಲ್ಲೇಶ್, ಜೆ. ಗೋಪಿ, ಸುನಿಲ್, ಶೋಭಾ ಸುನಿಲ್, ಮಹದೇವಪ್ಪ, ಅಸ್ಗರ್ ಪಾಷ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಯರಗನಹಳ್ಳಿ ಮಾದೇಗೌಡ, ಕೆ. ಮಾರುತಿ, ಕಡಕೊಳ ನಾರಾಯಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ನಾಗವಾಲ ನರೇಂದ್ರ, ಮಂಜುಳಾ ಮಂಜುನಾಥ್, ಕೆ. ಮಾರುತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಮಪ್ಪ, ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು, ನಿರ್ದೇಶಕ ಬಿ. ಗುರುಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಂ.ಟಿ. ರವಿಕುವಾರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುಶೀಲಾ ಕೇಶವಮೂರ್ತಿ, ಮರಿದೇವಯ್ಯ, ಕ್ಯಾತನಹಳ್ಳಿ ನಾಗರಾಜು, ಮಾಜಿ ಉಪ ಮೇಯರ್ ಗಳಾದ ಬಿ. ಸಿದ್ದರಾಜು, ಪುಷ್ಪವಲ್ಲಿ, ಮುಖಂಡರಾದ ಉಗ್ರ ನರಸಿಂಹೇಗೌಡ, ಉದ್ಬೂರು ಕೃಷ್ಣ, ಜಾಕೀರ್ ಪಾಷ, ಮಹದೇವಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಬಸವರಾಜು, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮ್, ಟಿ.ಎಸ್. ರವಿಶಂಕರ್, ಡಾ. ಸುಜಾತಾ ರಾವ್, ಕೆ.ಎಸ್. ಶಿವರಾಮ್, ಹುಣಸೂರು ಬಸವಣ್ಣ, ಈಶ್ವರ್ ಡಿ. ಚಕ್ಕಡಿ, ಗಿರೀಶ್ ನಾಯಕ, ಭಾಸ್ಕರ್ ಎಲ್. ಗೌಡ, ಎನ್. ಭಾಸ್ಕರ್, ಡೈರಿ ವೆಂಕಟೇಶ್, ಕೃಷ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಪ್ರೊ.ಕೆ.ಎಂ. ಜಯರಾಮಯ್ಯ, ಬಿ.ಪಿ. ಬೋರೇಗೌಡ, ಕಡಕೊಳ ನಾರಾಯಣ್, ಸಿದ್ದರಾಮೇಗೌಡ, ರಾಜಣ್ಣ, ಶಿವಪ್ರಸಾದ್, ಕೆ. ಮಹೇಶ್, ಸೋಮಶೇಖರ್, ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ ಎಲ್. ಗೌಡ, ಎಂ. ಶಿವಣ್ಣ, ಈಶ್ವರ್ ಡಿ. ಚಕ್ಕಡಿ ಮೊದಲಾದವರು ಇದ್ದರು.