ಕಳೆದ ೧೫ ದಿನಗಳಿಂದ ಪಿಎಸ್‌ಐ ವರ್ಗಾವಣೆಗೆ ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯದ ಎದುರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳು ಬಂದು ವಿಚಾರಣೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ವಿಷಾದಿಸಿದರು.
ಶಿರಹಟ್ಟಿ: ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ತಕ್ಷಣವೇ ವರ್ಗಾವಣೆ ಮಾಡದಿದ್ದರೆ ಶನಿವಾರ ಲಕ್ಷ್ಮೇಶ್ವರಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಶ್ರೀರಾಮಸೇನೆ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಎಚ್ಚರಿಸಿದರು.ಪಿಎಸ್‌ಐ ಈರಪ್ಪ ರಿತ್ತಿ ವರ್ಗಾವಣೆಗೆ ಆಗ್ರಹಿಸಿ ಶುಕ್ರವಾರ ಪಟ್ಟಣದ ಮಾರುತಿ ದೇವಸ್ಥಾನದಿಂದ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಾತನಾಡಿದರು.
ಕಳೆದ ೧೫ ದಿನಗಳಿಂದ ಪಿಎಸ್‌ಐ ವರ್ಗಾವಣೆಗೆ ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯದ ಎದುರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳು ಬಂದು ವಿಚಾರಣೆ ಮಾಡಿಲ್ಲ ಎಂದು ವಿಷಾಧಿಸಿದರು.ಮುಖಂಡರಾದ ಶಂಕರ ಮರಾಠೆ, ಬಸವರಾಜ ಪಲ್ಲೇದ, ಸಂತೋಷ ಕುರಿ, ಫಕ್ಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ಶಿವು ಲಮಾಣಿ, ಅಶೋಕ ಶಿರಹಟ್ಟಿ, ನಂದಾ ಪಲ್ಲೇದ ಮಾತನಾಡಿದರು.ಜಾನು ಲಮಾಣಿ, ಪುಂಡಲೀಕ ಲಮಾಣಿ, ರಾಮಣ್ಣ ಕಂಬಳಿ, ಅಶೋಕ ವರವಿ, ತಿಪ್ಪಣ್ಣ ಲಮಾಣಿ, ವಿಠಲ ಬಿಢವೆ, ಸಂತೋಷ ತೋಡೇಕಾರ, ಪರಶುರಾಮ ಡೊಂಕಬಳ್ಳಿ ಸೇರಿದಂತೆ ಇತರರು ಇದ್ದರು. ನಂತರ ಶಿರಸ್ತೇದಾರ ಗಿರಿಜಾ ಪೂಜಾರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಇಂದು ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಗದಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಡಿ. 13ರಂದು ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಡಿ. 13ರಂದು ಬೆಳಗ್ಗೆ 10ಕ್ಕೆ ನಾಗಾವಿಯ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಪಂಚಾಯತ್ ಪರಿಷತ್‌ನ 18ನೇ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 11.15ಕ್ಕೆ ಗದಗಿನಿಂದ ರಸ್ತೆ ಮೂಲಕ ಹೊರಟು ಮಧ್ಯಾಹ್ನ 12ಕ್ಕೆ ಲಕ್ಷ್ಮೇಶ್ವರಕ್ಕೆ ಆಗಮಿಸಿ ಲಕ್ಷ್ಮೇಶ್ವರದ ಚಂದನ ಸ್ಕೂಲ್‌ನಲ್ಲಿ ವಿಜ್ಞಾನ ವಿಸ್ತ್ರತ ಕಾರ್ಯಕ್ರಮ ಹಾಗೂ 2025ನೇ ಸಾಲಿನ ಪ್ರತಿಷ್ಠಿತ ಚಂದನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.