ಸಾರಾಂಶ
ಶಿರಾಳಕೊಪ್ಪ ವಾಲ್ಮೀಕಿ ಭವನದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ಸಭೆ ನಡೆಸಿ ಸೆ.೨೬ರಂದು ಟೋಲ್‌ಗೇಟ್ ಬಳಿ ಹೋರಾಟ ನಡೆಸಲು ತೀರ್ಮಾನಿಸಿತು.
ಕನ್ನಡಪ್ರ ವಾರ್ತೆ, ಶಿರಾಳಕೊಪ್ಪ
ಟೋಲ್‌ಗೇಟ್ ತೆರವು ಹೋರಾಟ ಸಮಿತಿ ಬೃಹತ್ ಹೋರಾಟ ಮಾಡಿ ಟೋಲ್‌ಗಳನ್ನು ತೆರವುಗೊಳಿಸಬೇಕು ಎಂಬ ಹಿನ್ನೆಲೆ ಯಲ್ಲಿ ಸೆ.೨೬ರಂದು ಕುಟ್ರಳ್ಳಿ ಟೋಲ್‌ಗೇಟ್ ಬಳಿ ಬೃಹತ್ ಪ್ರತಿಭಟನೆ ನಡೆಸಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಯಿತು.ಪಟ್ಟಣದ ವಾಲ್ಮೀಕಿ ಭವನದಲ್ಲಿ ಭಾನುವಾರ ಸಂಜೆ ಹೋರಾಟ ಸಮಿತಿಯ ಅಧ್ಯಕ್ಷ ಶಿವರಾಜ್ ವಕೀಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ಸೆ.೯ರಂದು ಸೋಮವಾರ ಶಿಕಾರಿಪುರ ಶಾಸಕರಿಗೆ ಮನವಿ ಕೊಡ ಬೇಕು ಎಂದು ಸಭೆ ನಿರ್ಣಯ ಕೈಗೊಂಡು ಹಲವಾರು ತೀರ್ಮಾನ ಕೈಗೊಂಡಿತು.
ಟೋಲ್ ಗೇಟ್ ಹೋರಾಟ ಸಮಿತಿ ಸಂಚಾಲಕ ವಕೀಲ ವಿನಯ ಪಾಟೀಲ್ ಮಾತನಾಡಿ, ಕಳೆದ ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಕಳೆದ ತಿಂಗಳು ೨೯ರಂದು ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆ ಮಾಡಿ ನಂತರ ಮನವಿ ಕೊಟ್ಟು ಟೋಲ್ ತೆರವಿಗೆ ೧೫ ದಿನಗಳ ಗಡುವು ನೀಡಿ ಬರಲಾಗಿತ್ತು. ಆದರೆ, ಅವರಿಂದ ಯಾವುದೇ ಉತ್ತರ ಬಾರದಿದ್ದರಿಂದ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚಿಸಿ ಸೆ.೨೬ರಂದು ಶಿಕಾರಿಪುರ ತಾಲ್ಲೂಕಿನ ಬಳಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೋಲ್‌ಗೇಟ್ ಬಳಿ ಹೋರಾಟ ಮಾಡಬೇಕು ಎಂದು ಸಭೆಯಲ್ಲಿ ಒಟ್ಟಾಭಿಪ್ರಾಯ ವ್ಯಕ್ತವಾಯಿತು.ಸಭೆಯಲ್ಲಿ ಶಿವರಾಜ್ ವಕೀಲರು ಮಾತನಾಡಿ, ಟೋಲ್‌ಗೇಟ್ ಹೋರಾಟ ಸಮಿತಿ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದೆ. ಈ ಟೋಲ್ ಗಳು ಅನಧಿಕೃತ ಎಂದು ಹೇಳಿ ಟೋಲ್‌ಗೇಟ್ ತೆಗೆಯುವವರೆಗೆ ಹೋರಾಟ ಮಾಡೋಣ ಎಂದರು.
ಸಭೆಯಲ್ಲಿ ಟೋಲ್ ಸಮಿತಿ ಕಾರ್ಯದರ್ಶಿ ನವೀದ್, ಸಮಿತಿ ಸದಸ್ಯ ಜಯಪ್ಪಗೌಡ, ರೈತಸಂಘದ ಈರಣ್ಣ ಪ್ಯಾಟಿ, ಪುಟ್ಟನಗೌಡ, ರಾಜಣ್ಣ, ಮುತ್ತುಗೌಡ, ಶಿವಾ ಬ್ಯಾಂಕ್ ನಿರ್ದೇಶಕ ಪರಮೇಶ್ವರಪ್ಪ, ರಟ್ಟಿಹಳ್ಳಿ ಲೋಕೇಶ್, ಗಂಗಾಧರ ಶೆಟ್ಟಿ ವಾಹನ ಸಂಘದ ಮಾಲಿಕರು ಹಾಜರಿದ್ದರು.