ದೇವದುರ್ಗ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ನೆನಪಿಸಿಕೊಳ್ಳುವ ಸಲುವಾಗಿ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ರಾಜ್ಯಾದ್ಯಂತ ಈ ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ದು, ದೇಶಪ್ರೇಮಿ ಯುವಶಕ್ತಿಯ ಜತೆ ಕೈ ಜೋಡಿಸಿ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಜಂಬಣ್ಣ ನೀಲಗಲ್ ತಿಳಿಸಿದರು.

-ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಆಯೋಜನೆದೇವದುರ್ಗ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ನೆನಪಿಸಿಕೊಳ್ಳುವ ಸಲುವಾಗಿ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ರಾಜ್ಯಾದ್ಯಂತ ಈ ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ದು, ದೇಶಪ್ರೇಮಿ ಯುವಶಕ್ತಿಯ ಜತೆ ಕೈ ಜೋಡಿಸಿ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಜಂಬಣ್ಣ ನೀಲಗಲ್ ತಿಳಿಸಿದರು.

ಪಕ್ಷದ ತಾಲೂಕು ಮಂಡಲ ಹಾಗೂ ಯುವ ಮೋರ್ಚಾ ವತಿಯಿಂದ ಶುಕ್ರವಾರ ಬೃಹತ್ ತಿರಂಗ ಧ್ವಜ ಬೈಕ್ ರ್‍ಯಾಲಿ ಅದ್ಧೂರಿಯಾಗಿ ನಡೆಯಿತು. ಪಟ್ಟಣದ ಶ್ರೀ ವಾಲ್ಮೀಕಿ ವೃತ್ತ ಗೌರಂಪೇಟೆಯಿಂದ ರ್‍ಯಾಲಿಗೆ ಚಾಲನೆ ನೀಡಲಾಯಿತು. ಕೇಸರಿ, ಬಿಳಿ, ಹಸಿರು ಧ್ವಜ ಹಿಡಿದ ನೂರಾರು ಯುವಕರು ಬೈಕ್‌ನಲ್ಲಿ ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.

ಶ್ರೀ ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ರ್‍ಯಾಲಿಯು ಡಾ. ಬಿ.ಆರ್.ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ, ಶ್ರೀ ಬಸವೇಶ್ವರ ವೃತ್ತ, ಮಿನಿ ವಿಧಾನಸೌಧ ಮುಖ್ಯ ರಸ್ತೆ, ಕೆ.ಇ.ಬಿ. ಮುಖ್ಯರಸ್ತೆ, ಚಾಲಹಳ್ಳಿ ಸರ್ಕಲ್, ಬಸ್ ನಿಲ್ದಾಣ ಮುಖ್ಯ ರಸ್ತೆ, ಡಾ.ಬಾಬು ಜಗಜೀವನ ರಾಮ್ ವೃತ್ತ ಸೇರಿ ವಿವಿಧ ರಸ್ತೆಗಳಲ್ಲಿ ಸಾಗಿತು.

ಮುಖಂಡರಾದ ವೀರೇಶ್ ಬಾಲಪ್ಪ ನಾಯಕ, ಪ್ರಕಾಶ ಪಾಟೀಲ್ ಜೇರಬಂಡಿ, ಡಾ. ಬಸವರಾಜ ಪಾಟೀಲ್ ಹೇರೂರು, ದೇವೇಂದ್ರಪ್ಪ ಸಾಸ್ವಿಗೇರ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

--------------------

14ಕೆಪಿಡಿವಿಡಿ02

ದೇವದುರ್ಗದಲ್ಲಿ ತಿರಂಗ ಧ್ವಜ ಬೈಕ್ ರ್‍ಯಾಲಿ ಅದ್ಧೂರಿಯಾಗಿ ನಡೆಯಿತು. ಮುಖಂಡರು, ಕಾರ್ಯಕರ್ತರು ಇದ್ದರು.