ನಂಜಪ್ಪ ಆಸ್ಪತ್ರೆ ದಾವಣಗೆರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರುವ ಉದ್ದೇಶದಿಂದ ನಗರದಲ್ಲಿ ಬೃಹತ್ ವಾಕಥಾನ್ (ನಡಿಗೆ ಜಾಥಾ) ಕಾರ್ಯಕ್ರಮವನ್ನು ಸೆ. 29 ರಂದು ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಂಜಪ್ಪ ಆಸ್ಪತ್ರೆ ದಾವಣಗೆರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರುವ ಉದ್ದೇಶದಿಂದ ನಗರದಲ್ಲಿ ಬೃಹತ್ ''''''''ವಾಕಥಾನ್'''''''' (ನಡಿಗೆ ಜಾಥಾ) ಕಾರ್ಯಕ್ರಮವನ್ನು ಸೆ. 29 ರಂದು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ನಡಿಗೆ ಜಾಥಾವು ನಗರದ ಪ್ರಮುಖ ವೃತ್ತವಾದ ಜಯದೇವ ವೃತ್ತದಿಂದ ಪ್ರಾರಂಭವಾಗಿ, ಪ್ರಮುಖ ಬೀದಿಗಳ ಮೂಲಕ ಸಾಗಿ ನಂಜಪ್ಪ ಆಸ್ಪತ್ರೆಯನ್ನು ತಲುಪಲಿದೆ.ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಆಧುನಿಕ ಜೀವನಶೈಲಿ, ತಪ್ಪು ಆಹಾರ ಪದ್ಧತಿ, ಧೂಮಪಾನ, ದೈಹಿಕ ಶ್ರಮದ ಕೊರತೆ ಹಾಗೂ ಅತಿಯಾದ ಮಾನಸಿಕ ಒತ್ತಡದಿಂದಾಗಿ ಸಮಾಜದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಹೃದಯಾಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಕೇವಲ ವಯೋಸಹಜವಾಗಿ ಮಾತ್ರವಲ್ಲದೆ, ಯುವ ಜನತೆಯಲ್ಲೂ ಈ ಕಾಯಿಲೆಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಂಜಪ್ಪ ಆಸ್ಪತ್ರೆಯು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಈ ಬೃಹತ್ ಜಾಗೃತಿ ನಡಿಗೆಯನ್ನು ಮುಂಚೂಣಿಯಲ್ಲಿ ನಿಂತು ಆಯೋಜಿಸುತ್ತಿದೆ.
ಕಾರ್ಯಕ್ರಮದ ವಿವರಗಳು: ಕಾರ್ಯಕ್ರಮವು ಸೆ. 29 ರಂದು ಬೆಳಗ್ಗೆ 7 ಗಂಟೆಗೆ ಜಯದೇವ ವೃತ್ತದಲ್ಲಿ ಶುರುವಾಗಲಿದೆ. ಕಾರ್ಯಕ್ರಮದ ಆರಂಭದಲ್ಲಿ ನಂಜಪ್ಪ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ಅಜೇಯ ಕಶ್ಯಪ್ ಅವರು ಸಾರ್ವಜನಿಕರಿಗೆ ಮತ್ತು ಭಾಗವಹಿಸುವ ಎಲ್ಲರಿಗೂ ದಿನನಿತ್ಯದ ಜೀವನದಲ್ಲಿ ಕಡ್ಡಾಯವಾಗಿ ವಹಿಸಬೇಕಾದ ಪ್ರಮುಖ ''''ಹೃದಯ ಆರೋಗ್ಯ ಸಲಹೆಗಳನ್ನು'''' ನೀಡಲಿದ್ದಾರೆ. ಮುಂಜಾನೆಯ ಶಿಸ್ತುಬದ್ಧ ನಡಿಗೆ, ಯೋಗ, ಧ್ಯಾನ ಹಾಗೂ ಸರಿಯಾದ ಪೌಷ್ಟಿಕ ಆಹಾರ ಪದ್ಧತಿಯಿಂದ ನಮ್ಮ ಹೃದಯವನ್ನು ದೀರ್ಘಕಾಲದವರೆಗೆ ಹೇಗೆ ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು ಎಂಬುದರ ಕುರಿತು ಅವರು ಮಾಹಿತಿ ನೀಡಲಿದ್ದಾರೆ.ಬೆಳಗ್ಗೆ 7.30 ಕ್ಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ದಾವಣಗೆರೆ ಎಸ್ಪಿ ಶೇಖರ್ ಎಚ್. ಟೆಕ್ಕಣ್ಣನವರ್ ಅವರು ಹಸಿರು ನಿಶಾನೆ(ಫ್ಲಾಗ್ಆಫ್) ತೋರಿಸುವ ಮೂಲಕ ವಾಕಥಾನ್‌ಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇವರೊಂದಿಗೆ ಗಣ್ಯರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿರಲಿದ್ದಾರೆ.
ಸಾರ್ವಜನಿಕರಿಗೆ ಮುಕ್ತ ಆಹ್ವಾನ: ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ಹಮ್ಮಿಕೊಳ್ಳಲಾಗಿರುವ ಈ ಬೃಹತ್ ವಾಕಥಾನ್‌ನಲ್ಲಿ ದಾವಣಗೆರೆ ನಗರದ ಸಮಸ್ತ ನಾಗರಿಕರು, ಕಾಲೇಜು ಹಾಗೂ ಶಾಲಾ ಯುವಜನರು, ಹಿರಿಯ ನಾಗರಿಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಜನಪರ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.ಮಾಹಿತಿಗೆ ದೂ.ಸಂ.08192-260222 ಅನ್ನು ಸಂಪರ್ಕಿಸಬಹುದು.