ಹಿತಶ್ರೀ ಎ. ವೈ. ೬೦೦ಕ್ಕೆ ೫೯೫ (ಶೇ.೯೯.೧೭) ಅಂಕ ಪಡೆದು ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಗಣಿತ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದಾರೆ. ಲಕ್ಷ್ಮೀ ಬಸವರಾಜ್ ಬಿದರಕುಂಡಿ ಸಹ ಅಷ್ಟೇ ಅಂಕ ಪಡೆದಿದ್ದಾರೆ. ಸಂಸ್ಕೃತ, ಭೌತಶಾಸ್ತ್ರ,ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ತಲಾ ೧೦೦ ಅಂಕ ಪಡೆದಿದ್ದಾರೆ. ಪ್ರತಿವರ್ಷದಂತೆ ಮಾಸ್ಟರ್‌ ಪಿಯು ಕಾಲೇಜು ವಿದ್ಯಾರ್ಥಿಗಳು ಒಟ್ಟಾರೆಯಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಈ ಬಾರಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿವರ್ಷದಂತೆ ಮಾಸ್ಟರ್‌ ಪಿಯು ಕಾಲೇಜು ವಿದ್ಯಾರ್ಥಿಗಳು ಒಟ್ಟಾರೆಯಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಕಾಲೇಜಿನ ಒಟ್ಟು ೩೮೬ ವಿದ್ಯಾರ್ಥಿಗಳಲ್ಲಿ ೨೯೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದುವ ಮೂಲಕ ಕಾಲೇಜಿನ ಗುಣಮಟ್ಟದ ಬೋಧನೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿದ್ದಾರೆ. ಉಳಿದಂತೆ ೯೨ ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್, ಮೂವರು ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ.

ಸಪ್ತ ಸಾಧಕರಿವರು: ಹಿತಶ್ರೀ ಎ. ವೈ. ೬೦೦ಕ್ಕೆ ೫೯೫ (ಶೇ.೯೯.೧೭) ಅಂಕ ಪಡೆದು ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಗಣಿತ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದಾರೆ. ಲಕ್ಷ್ಮೀ ಬಸವರಾಜ್ ಬಿದರಕುಂಡಿ ಸಹ ಅಷ್ಟೇ ಅಂಕ ಪಡೆದಿದ್ದಾರೆ. ಸಂಸ್ಕೃತ, ಭೌತಶಾಸ್ತ್ರ,ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ತಲಾ ೧೦೦ ಅಂಕ ಪಡೆದಿದ್ದಾರೆ.

ಲಹರಿ ಹಾಗೂ ತೋಷಿತಾ ಎಂಬ ವಿದ್ಯಾರ್ಥಿನಿಯರು ೬೦೦ಕ್ಕೆ ೫೯೩(ಶೇ.೯೮.೮೩) ಸಮ ಅಂಕ ಪಡೆದಿದ್ದಾರೆ.ಲಹರಿ ಭೌತಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ತಲಾ ೧೦೦ ಅಂಕ ಪಡೆದಿದ್ದರೆ, ತೋಷಿತಾ ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಔಟ್ ಆಫ್ ಔಟ್ ಅಂಕ ಸಂಪಾದನೆ ಮಾಡಿದ್ದಾರೆ.ಉಳಿದಂತೆ ನಭಾ ಒ ಗೌಡ, ನಿಸರ್ಗ ಎಚ್. ಜಿ ಮತ್ತು ಯುಕ್ತಶ್ರೀ ಪಿ ಮೂವರೂ ೬೦೦ಕ್ಕೆ ೫೯೧(ಶೇ.೯೮.೫೦) ಅಂಕ ಗಳಿಸಿದ್ದಾರೆ. ಸಭಾ ಗಣಿತದಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದಿದ್ದರೆ, ನಿಸರ್ಗ ಭೌತಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ೧೦೦ ಮತ್ತು ಯುಕ್ತಶ್ರೀ ಭೌತಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ತಲಾ ನೂರು ಅಂಕ ಪಡೆದು ಮೇರು ಸಾಧನೆ ಮಾಡಿದ್ದಾರೆ.