ಮಾಸ್ತಿ ಗ್ರಾಮ ಹಸಾಂಡಹಳ್ಳಿ ರಸ್ತೆಯಲ್ಲಿರುವ ಬಾಲಾಜಿ ಬಾರನ್ನು ಜನವಸತಿ ಸ್ಥಳಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದೆ.
ಕನ್ನಡಪ್ರಭ ವಾರ್ತೆ ಮಾಲೂರುಜನ ವಸತಿಗೃಹಗಳು ಇರುವ ಜಾಗಕ್ಕೆ ಬಾರನ್ನು ಸ್ಥಳಾಂತರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಬಾರ್‌ನಿಂದ ನಿವಾಸಿಗಳಿಗೆ ತೊಂದರೆಗಳ ಬಗ್ಗೆ ದೂರು ನೀಡಿದರೂ ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.ತಾಲೂಕಿನ ಮಾಸ್ತಿ ಗ್ರಾಮ ಹಸಾಂಡಹಳ್ಳಿ ರಸ್ತೆಯಲ್ಲಿರುವ ಬಾಲಾಜಿ ಬಾರನ್ನು ಜನವಸತಿ ಸ್ಥಳಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದ್ದು ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಾರ್ ಪಕ್ಕದಲ್ಲಿ ಮದರಸ ಮತ್ತು ಮಸೀದಿ, ಮುಜರಾಯಿ ಇಲಾಖೆ ಸೇರಿದ ಪಿಳೇಕಮ್ಮನ ದೇವಸ್ಥಾನ ಹಾಗೂ ನೂತನವಾಗಿ ನಿರ್ಮಾಣ ಮಾಡುತ್ತಿರುವ ವಸತಿ ನಿವೇಶನಗಳನ್ನು ಇದ್ದು ಈ ಬಗ್ಗೆ ಅಬಕಾರಿ ಇಲಾಖೆಗೆ ದೂರು ನೀಡಲಾಗಿದ್ದು ಕೋಲಾರ ಮತ್ತು ಮಾಲೂರು ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೆಪಕ್ಕೆ ಮಾತ್ರ ಸ್ಥಳ ಪರಿಶೀಲನೆ ನಡೆಸಿ ಬಾರ್ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್ ಮಾಲೀಕನ ಜೊತೆ ಶಾಮೀಲಾಗಿ ವಸತಿ ನಿವೇಶನಗಳ ಜಾಗಕ್ಕೆ ಬಾರ್‌ನ್ನು ಸ್ಥಳಾಂತರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಬಾರ್‌ನಿಂದ ಸಾರ್ವಜನಿಕರಿಗೆ ಮಹಿಳೆಯರಿಗೆ ಮಕ್ಕಳಿಗೆ ತುಂಬಾ ತೊಂದರೆಗಳು ಉಂಟಾಗುವ ಮುನ್ನವೇ ಈ ಬಾರ್ ಅನ್ನು ಮಾಸ್ತಿ ಗ್ರಾಮದಿಂದ ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ತೀವ್ರ ವಾದ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು.