ಗದಗದಲ್ಲಿ ಕಣ್ಮನ ಸೆಳೆದ ಗ್ಯಾರಂಟಿ ಯೋಜನೆಗಳ ವಸ್ತು ಪ್ರದರ್ಶನ

| Published : Mar 05 2024, 01:33 AM IST

ಗದಗದಲ್ಲಿ ಕಣ್ಮನ ಸೆಳೆದ ಗ್ಯಾರಂಟಿ ಯೋಜನೆಗಳ ವಸ್ತು ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ಹೊಸಬಸ್ ನಿಲ್ದಾಣದಲ್ಲಿ ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ ಗ್ಯಾರಂಟಿ ಯೋಜನೆಗಳ ವಸ್ತು ಪ್ರದರ್ಶನವು ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಗದಗ: ನಗರದ ಹೊಸಬಸ್ ನಿಲ್ದಾಣದಲ್ಲಿ ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ ಗ್ಯಾರಂಟಿ ಯೋಜನೆಗಳ ವಸ್ತು ಪ್ರದರ್ಶನವು ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಗೃಹ ಲಕ್ಷ್ಮೀ, ಶಕ್ತಿ, ಯುವ ನಿಧಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳ ಮಾಹಿತಿಯನ್ನು ಪ್ರದರ್ಶಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಜಿಲ್ಲಾಧಿಕಾರಿಗಳು ಪ್ರಶಂಸಿ, ಮಾ.೪ರಿಂದ ೬ ರವರೆಗೆ ಈ ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಮೀನಾಕ್ಷಿ, ಗಣ್ಯರಾದ ಅಶೋಕ ಮಂದಾಲಿ, ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ವಿ.ಎಫ್.ಜಾಧವ ಇದ್ದರು. ವಿವಿಧ ಯೋಜನೆಗಳ ಮಾಹಿತಿ: ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಅನ್ನಭಾಗ್ಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಉಚಿತ ೧೦ ಕೆ.ಜಿ ಆಹಾರ ಧಾನ್ಯ ಸೇರಿದಂತೆ ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ೫ ಕೆ.ಜಿ ಅಕ್ಕಿ ಬದಲಿಗೆ ರು ೧೭೦ರಂತೆ ೪.೦೨ ಕೋಟಿ ಫಲಾನುಭವಿಗಳಿಗೆ ರು ೪೫೯೫ ಕೋಟಿ ವರ್ಗಾಯಿಸುವುದರ ಮೂಲಕ ಬಡವರ ಕುಟುಂಬದ ಆರ್ಥಿಕ ಹೊಯನ್ನು ಕಡಿಮೆಗೊಳಿಸಿ ಬಲವರ್ಧನೆಗೆ ಸಹಾಯಕವಾಗಿದೆ.

ಮಹಿಳೆಯರ ಸ್ವಾವಲಂಬನೆ ಬದುಕು ನಿರ್ಮಿಸಲು ಶಕ್ತಿ ಯೋಜನೆಯಡಿ ೧೩೬ ಕೋಟಿ ಮಹಿಳೆಯರು, ಯುವತಿಯರು ಹಾಗೂ ವಿದ್ಯಾರ್ಥಿನಿಯರು ಉಚಿತ ಪ್ರಯಾಣ ಮಾಡುವುದರ ಮೂಲಕ ಶಕ್ತಿ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಮಾದರಿಯಾಗಿದೆ.

ಪ್ರತಿ ಮನೆಯಲ್ಲಿಯೂ ಭಾಗ್ಯದ ಬೆಳಕು ಬೆಳಗಬೇಕು ಎನ್ನುವ ಆಶಯದಂತೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ೨೦೦ ಯೂನಿಟ್ ವರೆಗೆ ವಿದ್ಯುತ್ ಉಚಿತ ನೀಡುವುದರ ಮೂಲಕ ೫ ಕೋಟಿ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.

ಕರ್ನಾಟಕದ ಮಹಿಳೆಯರು ಸ್ವ ಸಾಮರ್ಥ್ಯ ಸ್ವಯಂ ಸ್ಥೈರ್ಯ ಹಾಗೂ ಸ್ವಯಂ ಗೌರವದಿಂದ ಜೀವನ ಸಾಗಿಸಲು ಪ್ರತಿ ಮಾಹೆ ಪ್ರತಿ ಮಹಿಳೆಯರಿಗೆ ರು. ೨೦೦೦ ರಂತೆ ೧೧೭೨೬ ಕೋಟಿ ರು.ಗಳನ್ನು ನೇರವಾಗಿ ೧.೦೯ ಕೋಟಿ ಯಜಮಾನಿಯರಿಗೆ ವರ್ಗಾಯಿಸಿ ವಿಶ್ವ ದಾಖಲೆ ನಿರ್ಮಿಸಿದೆ.

ಯುವಕರ ಶ್ರೇಯೋಭಿವೃದ್ಧಿಗಾಗಿ ಯುವನಿಧಿ ಯೋಜನೆಯಡಿ ೨೦೨೩ ರಲ್ಲಿ ಉತ್ತೀರ್ಣರಾದ ಪದವೀಧರರು ಹಾಗೂ ಡಿಪ್ಲೋಮಾ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ.

ಜನಸ್ಪಂದನದಿಂದ ಜನರ ಬಳಿಗೆ ಸರ್ಕಾರ ಎನ್ನುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಧಿಕಾರಿಗಳಿಂದ ಜನತಾ ದರ್ಶನ ಕಾರ್ಯಕ್ರಮ ಮೂಲಕ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವುದರ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಲಾಗಿದೆ.

ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ೧೫೦೬೮ ಕುಂದು ಕೊರತೆಗಳಲ್ಲಿ ೯೭೮೦ ಕುಂದು ಕೊರತೆಗಳನ್ನು ವಿಲೇ ಮಾಡಲಾಗಿದೆ.ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವುದರ ಮೂಲಕ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನುಗಳಿಗೆ ಅನಧಿಕೃತ ಪರಭಾರೆಯಿಂದ ರಕ್ಷಣೆ ಸೇರಿದಂತೆ ಸಕ್ಷಮ ಪ್ರಾಧಿಕಾರದ ಯಾವುದೇ ಕಾಲಮಿತಿ ಇಲ್ಲದೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವ ಉದ್ದೇಶದಿಂದ ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ಮಾಡಲಾಗಿದೆ. ಬೆಂಗಳೂರಿನ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನಾಗರೀಕರ ಧ್ವನಿ ಈಗ ಸರ್ಕಾರದ ಧ್ವನಿ ಎಂಬ ಘೋಷವಾಕ್ಯದೊಂದಿಗೆ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಚಿಂತನಶೀಲ ಉಪಕ್ರಮಕ್ಕೆ ಚಾಲನೆ.

ಸಾಮಾಜಿಕ ನ್ಯಾಯದ ಮೂಲ ಹರಿಕಾರನಿಗೆ ಕರ್ನಾಟಕ ಸರ್ಕಾರದ ಗೌರವ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಣೆ ಮಾಡುವುದರ ಮೂಲಕ ಮಹತ್ತರ ನಿಲುವನ್ನು ತೆಗೆದುಕೊಂಡಿದೆ.

ಗ್ಯಾರಂಟಿ ಯೋಜನೆಗಳನ್ನು ಸೇರಿದಂತೆ ಸರ್ಕಾರದ ವಿವಿಧ ಮಹತ್ತರ ಯೋಜನೆಗಳ ಮಾಹಿತಿಯನ್ನು ವಸ್ತು ಪ್ರದರ್ಶನದಲ್ಲಿ ಫಲಕಗಳ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ಪ್ರದರ್ಶಿಸಲಾಗಿತ್ತು.